Showing posts with label ದಾರಿ ತೋಚದಲ್ಲಾ ನನಗೆ ಏನು krishnavittala. Show all posts
Showing posts with label ದಾರಿ ತೋಚದಲ್ಲಾ ನನಗೆ ಏನು krishnavittala. Show all posts

Monday, 2 August 2021

ದಾರಿ ತೋಚದಲ್ಲಾ ನನಗೆ ಏನು ankita krishnavittala

ದಾರಿ ತೋಚದಲ್ಲಾ ನನಗೆ ಏನು ಪ


ನೀರಜಾಕ್ಷ ನಿನ್ನ ನೊಲಿಸುವ ಅ.ಪ


ಓದಿವಾದ ಗ್ರಂಥಗಳ ವಿದ್ಯಾ ವಿಧಿ ಸಾಧಿಸುತ

ವೇದವ್ಯಾಸ ನಿನ್ನ ಪ್ರೀತಿ ಸಾಧಿಸಲು ಮೂಢನಾನು 1

ಉಂಡು ಕೂತು ಮುದುಕನಾದೆ ಕಾಯಬೆಳಸಿ

ದಂಡಕಾಲ ಕಳೆದುದಯ್ತು

ಮಂಡೆಗೀಗ ಹತ್ತದವು ಫಂಡರೀಶ ಕೃಪೆಯಮಾಡೊ 2

ಹಾಡಿಪಾಡಿ ವಲಿಸಾಲು ರಾಗ ಈ ಭಾವ ತಾಳ ಕಾಣೆ

ಕಾಡು ಕೋಣನಂತೆ ಇರ್ಪೆ ನೀಡಿ ಸಲಹೊ ಸರ್ವ ಶಕ್ತಿ 3

ದಾನಧರ್ಮತೀರ್ಥಯಾತ್ರೆ ನಾನು ಮಾಡೆ ಹುಟ್ಟು ಬಡವ

ಶ್ವಾನನಂತೆ ತಿರಿದು ಉಂಬೆ ಸಾಧ್ಯವೇನು ನೀನೇ ನುಡಿಯೊ4


ನೆಂಟರಿಷ್ಟರೆಲ್ಲ ಎನ್ನ ಕೈಯ ಬಿಟ್ಟು ಹೋದರೈಯ

ಒಂಟಿಯಾಗಿ ಅಲೆದು ಅಲವೆ ಭಂಟನೆನಿಸಿ ಕಾಯಬೇಕೊ 5

ದಾಸನಾಗಿ ಬಾಳೋದಕ್ಕೆ ಆಶೆಯಿನ್ನು ತೊಲಗಲಿಲ್ಲ

ಮೊಸವೇನೆ ಬರಿಯ ವೇಷ ದೋಷದೂರ ಶ್ರೀಶವಲಿಯೊ 6

ಹಿಂದಿನವರ ಕಾಯ್ದಬಗೆಯು ಇಂದಿನವರಿಗೆ ಬರಿಯ ಕಥೆಯು

ಮಂದನೆನ್ನ ಈಗ ಪಿಡಿದು ಮುಂದು ಮಾಡೊ ನಿನ್ನ ಖ್ಯಾತಿ7

ಶರಣ ಜನರ ಬಿಡನು ಎಂಬ ಖರೆಯಬಿರುದು ನಿನ್ನದೆಂದು

ಹಿರಿಯರಿಂದ ಅರಿತುಬಂದೆ ಪರಮ ಕರುಣಿ ಕೈಯ ಪಿಡಿಯೊ8

ಕ್ರಿಮಿಯ ಪೊರೆದ “ಕೃಷ್ಣವಿಠಲ” ಶ್ರಮವೆ

ನಿನಗೆ ಯೆನ್ನ ಪೊರೆಯೆ

ಕ್ಷಮಿಸಿ ದೋಷ ಪೊರೆಯೊ ಬೇಗ ನಮಿಪೆ ನಂಬಿ ನಿನ್ನನೀಗ 9

****