Showing posts with label ಬಂದದ್ದೆಲ್ಲ ಬರಲೀ ರಾಘವೇಂದ್ರರ ದಯವಿರಲಿ abhinava janardhana vittala. Show all posts
Showing posts with label ಬಂದದ್ದೆಲ್ಲ ಬರಲೀ ರಾಘವೇಂದ್ರರ ದಯವಿರಲಿ abhinava janardhana vittala. Show all posts

Friday, 27 December 2019

ಬಂದದ್ದೆಲ್ಲ ಬರಲೀ ರಾಘವೇಂದ್ರರ ದಯವಿರಲಿ ankita abhinava janardhana vittala

ಬ೦ದದ್ದೆಲ್ಲ ಬರಲೀ – ರಾಘವೇ೦ದ್ರರ ದಯವಿರಲಿ        || ಪ ||
ಹಿ೦ದೆ ಬಹುಜನುಮದಿ೦ದ ಮಾಡಿದಘ
ಸ೦ದಣಿ ಕಳೆವಗಿದೊ೦ದರಿದೇನೈ                     || ಅ ||

ದಾಶರಥಿವ್ಯಾಸ – ನರಕೇಸರಿ ಶ್ರೀ ಯಾದವೇಶ
ಈಸುಮೂರ್ತಿಗಳುಪಾಸ-ನಯಲೇಸಾಗಿ ಮಾಳ್ಪ ವಿಶೇಷ
ದಾಸಜನರ ಅಭಿಲಾಷೆ ಪೂರ್ತಿಸುವ
ಶ್ರೀಸುಧೀ೦ದ್ರಯತೀಶರ ದಯವಿರೆ                        || ೧ ||

ಧರೆ ಕಳಕೊ೦ಡವರು-ಉಡಲು ಅರಿವೆ ಇಲ್ಲದವರು
ತರಳಸ೦ಪದರಹಿತರು-ಮಹದುರುತರ ಜ್ಞಾನಿಭಕುತರು
ತೆರಳಿಬ೦ದು ಸ೦ದರುಶನ ಮಾಡಲು
ಕರೆದೀಪ್ಸಿತ ಕೊಡುವರ ದಯವಿರುತಿರೆ               || ೨ ||

ವಾತಪಿತ್ತ ಕಫಶೀತಾ-ಸನ್ನಿಪಾತಕಜ್ವರ ಪ್ರಖ್ಯಾತ
ಭೂತಪ್ರೇತಭಯವ್ರಾತ-ಕಳೆವಾತುರರಿಗೆ ಫಲದಾತ
ನಾಥ ಅಭಿನವಜನಾರ್ಧನವಿಠ್ಠಲನ
ಪ್ರೀತಿ ದೂತನ ದಯ ಅತಿಶಯವಾಗಿರೆ                  || ೩ ||
********