by ಕಾಖಂಡಕಿ ಕೃಷ್ಣರಾಯರು
ಮೋಹ ಬೇಡಣ್ಣಾ ಸಂಸಾರದೊಳು ।।ಪ।।
ಎರವಿನ ಕಂಗಳು ಎರವಿನ ಶ್ರುತಿಯು
ಎರವಿನ ನಾಸಿಕ ಎರವಿನ ನಾಲಿಗೆ
ಎರವಿನ ಕರಗಳು ಎರವಿನ ಪಾದವು
ಎರವಿನ ಬುದ್ಧಿ ಎರವಿನ ಬದುಕು ।।೧।।
ಎರವಿನ ಹಣಗಳು ಎರವಿನ ಭೂಷಣ
ಎರವಿನ ವಾಹನ ಎರವಿನ ಸಿರಿ ಸುಖ
ಎರವಿನ ತರುಣಿಯರು ಎರವಿನ ಸುತರು
ಎರವಿನ ಬಂಧು ಎರವಿನ ಬಳಗಾ ।।೨।।
ಹರಿಯೇ ಕರ್ತನು ಹರಿಸೂತ್ರಾತ್ಮನು
ಗುರುಮಹಿಪತಿ ಪ್ರಭು ಹರಿ ಪರವೆಂದು
ಹರಿಯನೆ ಸ್ಮರಿಸಿ ಹರಿಯನೇ ಧ್ಯಾನಿಸಿ
ಹರಿಯನೆ ಪೂಜಿಸಿ ಹರಿ ಪದಹೊಂದು ।।೩।।
****
ರಾಗ : ಮಾಂಡ ತಾಳ : ಕೇರವಾ (raga, taala may differ in audio)
ಮೋಹ ಬೇಡಣ್ಣಾ ಸಂಸಾರದೊಳು ಪ
ಎರವಿನ ಕಂಗಳು ಎರವಿನ ಶ್ರುತಿಯೊಳು | ನಾಸಿಕ ಎರವಿನ ನಾಲಿಗೆ | ಎರವಿನ ಕರಗಳು ಎರವಿನ ಪಾದವು | ಎರವಿನ ಬುಧ್ಯರವಿನ ಬದುಕು 1
ಎರವಿನ ಹಣಗಳು ಎರವಿನ ಭೂಷಣ | ವಾಹನ ಎರವಿನ ಸಿರಿಸುಖ | ಎರವಿನ ತರುಣಿಮದ್ಯೆರವಿನ ಸುತರು | ಎರವಿನ ಬಂಧು ಎರವಿನ ಬಳಗಾ 2
ಹರಿಯೇ ಕರ್ತನು ಹರಿ ಸೂತ್ರಾತ್ಮನು | ಗುರುಮಹಿಪತಿ ಪ್ರಭು ಹರಿ ಪರವೆಂದು | ಹರಿಯನೆ ಸ್ಮರಿಸಿ ಹರಿಯನೇ ಧ್ಯಾನಿಸಿ | ಹರಿಯನೆ ಪೂಜಿಸಿ ಹರಿ ಪದಹೊಂದು 3
****