Showing posts with label ಮಂಗಲಂ ಮಂಗಲಂ ಜಯ ಮಂಗಲ ಗುರು ರಾಘವೇಂದ್ರ ರಾಯರಿಗೆ abhinava janardhana vittala. Show all posts
Showing posts with label ಮಂಗಲಂ ಮಂಗಲಂ ಜಯ ಮಂಗಲ ಗುರು ರಾಘವೇಂದ್ರ ರಾಯರಿಗೆ abhinava janardhana vittala. Show all posts

Monday 6 September 2021

ಮಂಗಲಂ ಮಂಗಲಂ ಜಯ ಮಂಗಲ ಗುರು ರಾಘವೇಂದ್ರ ರಾಯರಿಗೆ ankita abhinava janardhana vittala

 ರಾಗ: [ಹುಸೇನಿ] ತಾಳ: [ತ್ರಿಪುಟ]

ಮಂಗಲಂ ಮಂಗಲಂ ಜಯ

ಮಂಗಲ ಗುರು ರಾಘವೇಂದ್ರ ರಾಯರಿಗೆ


ಶಾತಕುಂಭಶಯ್ಯಜಾತ ಖ್ಯಾತ ನರ-

ನಾಥಮೃಗಗೆ ಅತಿಪ್ರೀತ ಪ್ರಹ್ಲಾದಗೆ 1

ಕನ್ನಡರಾಜನ ಬನ್ನಬಡಿಪ ಯೋಗ-

ವನ್ನು ಕಳೆದ ಯತಿಮಾನ್ಯ ವ್ಯಾಸರಿಗೆ 2

ಮಂತ್ರಮಂದಿರವಾಸ ಸಂತಜನರ ಪೋಷಾ-

ನಂತಮಹಿಮ ಧೀಮಂತ ಪ್ರಶಾಂತಗೆ 3

ಭೋಗಿತಲ್ಪನಪಾದ ರಾಗದಿಭಜಿಸುವ

ಯೋಗಿವರ್ಯ ಗುರು ರಾಘವೇಂದ್ರರಿಗೆ 4

ಮಾನದ ಅಭಿನವಪ್ರಾಣೇಶವಿಠಲನ

ಪ್ರಾಣಪ್ರೀಯರಾದ ಮೌನಿವರ್ಯರಿಗೆ 5

***