Monday, 6 September 2021

ಮಂಗಲಂ ಮಂಗಲಂ ಜಯ ಮಂಗಲ ಗುರು ರಾಘವೇಂದ್ರ ರಾಯರಿಗೆ ankita abhinava janardhana vittala

 ರಾಗ: [ಹುಸೇನಿ] ತಾಳ: [ತ್ರಿಪುಟ]

ಮಂಗಲಂ ಮಂಗಲಂ ಜಯ

ಮಂಗಲ ಗುರು ರಾಘವೇಂದ್ರ ರಾಯರಿಗೆ


ಶಾತಕುಂಭಶಯ್ಯಜಾತ ಖ್ಯಾತ ನರ-

ನಾಥಮೃಗಗೆ ಅತಿಪ್ರೀತ ಪ್ರಹ್ಲಾದಗೆ 1

ಕನ್ನಡರಾಜನ ಬನ್ನಬಡಿಪ ಯೋಗ-

ವನ್ನು ಕಳೆದ ಯತಿಮಾನ್ಯ ವ್ಯಾಸರಿಗೆ 2

ಮಂತ್ರಮಂದಿರವಾಸ ಸಂತಜನರ ಪೋಷಾ-

ನಂತಮಹಿಮ ಧೀಮಂತ ಪ್ರಶಾಂತಗೆ 3

ಭೋಗಿತಲ್ಪನಪಾದ ರಾಗದಿಭಜಿಸುವ

ಯೋಗಿವರ್ಯ ಗುರು ರಾಘವೇಂದ್ರರಿಗೆ 4

ಮಾನದ ಅಭಿನವಪ್ರಾಣೇಶವಿಠಲನ

ಪ್ರಾಣಪ್ರೀಯರಾದ ಮೌನಿವರ್ಯರಿಗೆ 5

***


No comments:

Post a Comment