Showing posts with label ಭೂತನಾಥ ಪಾಲಿಸೆನ್ನ ನಾರಾಯಣ ಭೂತನಾಥನೆ ಪಾಲಿಸೆನ್ನ rajesha hayamukha. Show all posts
Showing posts with label ಭೂತನಾಥ ಪಾಲಿಸೆನ್ನ ನಾರಾಯಣ ಭೂತನಾಥನೆ ಪಾಲಿಸೆನ್ನ rajesha hayamukha. Show all posts

Thursday 5 August 2021

ಭೂತನಾಥ ಪಾಲಿಸೆನ್ನ ನಾರಾಯಣ ಭೂತನಾಥನೆ ಪಾಲಿಸೆನ್ನ ankita rajesha hayamukha

..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಭೂತನಾಥ ಪಾಲಿಸೆನ್ನ ನಾರಾಯಣ

ಭೂತನಾಥನೆ ಪಾಲಿಸೆನ್ನ ಪ


ಕರ್ಣವಿಕರ್ಣಾದಿಗಣಗಳಿಂದಲಿ ಕೂಡಿ

ಸ್ವರ್ಣದಿ ಭಾಸುರಾಂಗ ಶ್ರೀರಾಜರ

ಸ್ವರ್ಣದ ಪಾಲಕಿಯನ್ನು ಮುಂಭಾಗದಿ

ಭಕುತಿಯಿಂದಲಿ ಪೊತ್ತ ಶ್ರೀ ಭೂತರಾಜ 1


ಬದರಿಕಾಶ್ರಮದಿಂದ ನದಿಯ ತಾತನ ದಿವ್ಯ

ಸದನವ ಶ್ರೀಸೋದಾಕ್ಷೇತ್ರಕ್ಕೆ ತರಲು

ಬೆದರದೆ ವಿಘ್ನವ ತಂದ ದೈತ್ಯನ ರಥ

ಚಕ್ರದಿಂದಲಿ ಕೊಂದು ರಥವ ಬೇಗದಿ ತಂದೆ 2


ಧನಪನ ಕೋಶದೊಳಿಪ್ಪ ಮೌಳಿಯ ವೇಗ -

ದಿಂದಲಿ ನೀ ತಂದು ವಾದಿರಾಜರಿಗಿತ್ತೆ

ಅನುಮಾನವಿಲ್ಲದೆ ತಂದು ಶ್ರೀರಾಜೇಶ

ಹಯಮುಖನನ ಚರಾಗ್ರಣಿಯಾಗಿ ಮೆರೆದೆ 3

***