Showing posts with label ನೀಲಮೇಘ ಶ್ಯಾಮನ ಕೋಮಲಾಂಗನ ಕಂಡೆ ನಾ neelameghashyama. Show all posts
Showing posts with label ನೀಲಮೇಘ ಶ್ಯಾಮನ ಕೋಮಲಾಂಗನ ಕಂಡೆ ನಾ neelameghashyama. Show all posts

Thursday, 1 July 2021

ನೀಲಮೇಘ ಶ್ಯಾಮನ ಕೋಮಲಾಂಗನ ಕಂಡೆ ನಾ ankita neelameghashyama

by Jayatheertharu, yati Uttaradimutt
ankita ನೀಲಮೇಘ ಶ್ಯಾಮ

 ರಾಗ : ಕೇದಾರಗೌಳ  ತಾಳ : ಝಂಪೆ 

ನೀಲಮೇಘ ಶ್ಯಾಮನ -
ಕೋಮಲಾಂಗನ ಕಂಡೆ ನಾ ।। ಪಲ್ಲವಿ ।।
ತರುಣ ತರುಣಿಯ -
ತೇಜವ ಪೋಲುವ ।
ಸಿರಿ ಮುಕುಟವ -
ಫಾಲದಿಂ ಮೃಗನಾಭಿ ।
ತಿಲಕವು ಶೋಭಿಪ -
ಕೊರಳಾಲಿಯ ।। ಅ. ಪ ।।
ಭ್ರೂಯುಗಳ ಕಂಗಳು ಸುನಾಸಿಕ ।
ಮಕರ ಕುಂಡಲ ಕರ್ಣದ ।
ಫಾಲದಿಂ ಥಳ ಥಲಿಪ ಕಪೋಲದ ।
ಕಾಂತಿಯನು ಕಡು ರಂಜಿಸುವ ।।
ಬಿಂಬಧರೋಷ್ಯದ ಮಂದಹಾಸದ ।
ಚಂದ್ರ ಕಿರಣಗಳ ।
ಸೋಲಿಸುವ ಸುಲಿಪಲ್ಲ ಕಂಧರ ।
ಮಾಲಿಯ ಕಂಬುಗ್ರೀವನ ।। ಚರಣ ।।
ಕರಿಕರದ ವಾಲ ಪೋಲುವ ।
ಚತುರ್ಭುಜದ ಕಂಕಣ ಮುದ್ರೆಯ ।
ಪೇರುರದಲೋಪ್ಪುವ ವೈಜಯಂತೀ ।
ಮಾಲೆ ಶೋಭಿಪನಾ ।।
ಸಿರಿಯು ಶೃಂಗರಿಸುವ ವಕ್ಷದ ।
ಸರಸಿಜಾಸನ ಜನಿತ ನಾಭಿಯ ।
ವರ ಕಟಿಯ ಮ್ಯಾಲೆಸೆವ ।
ಪೀತಾಂಬರ ವಿರಾಜಿತನ  ।। ಚರಣ ।।
ಧರೆಯ ಈರಡಿ ಮಾಡಿ । ದನು ।
ಜರ ಸದೆದು ದಿವಿಜರ ।
ಪೊರೆವ ಭಾಪುರೆ ।
ವರ ರತುನ ಕಂಕಣ ನ್ಯಾವಳ । ತೊ ।।
ಡರಿನಿಂದೆಸೆವ । ಚರಣವ ।
ನರುಹ ಜಯಜಯಾಕ್ಷೋಭ್ಯತೀರ್ಥ । ಶ್ರೀ ಜ ।
ಯರಾಮನ ನೀಲಮೇಘ ಶ್ಯಾಮನ  ।। ಚರಣ ।।
***