ರಾಗ ಕಾಪಿ. ಆದಿ ತಾಳ
ಏತರ ಕಟಪಟಿ ಒಂದಿನ
ಹೋಗುತಿದ್ದೆ ಲಟಪಟಿ ||
ಬರೋವಾಗ್ಗೆ ಏನು ತಂದೆ
ಬರುತಲೆ ಎಲ್ಲಾನು ನನ್ನದೆಂದೆ
ದುಡ್ಡು ಕೂಡಿಟ್ಟು ಬಳಿದು ಹೋಗುವಾಗ
ಬಳಲಿ ಬಳಲಿ ಅಳುಮಾರಿಗೆ ಬಂದೆ ||
ದೊಡ್ಡ ಮನೆಯ ಕಟ್ಟಿ ಅದರೊಳು
ಮಡದಿಯ ಒಯ್ದಿಟ್ಟೆ
ಮಡದಿಗೆ ಮೋಹದ ಮಗು ಒಂದು ಹುಟ್ಟಿ
ಅದರ ಮೇಲೆ ನೀ ಮನಸಿಟ್ಟೆ ||
ಸಂಸಾರ ಬಲು ಖೊಟ್ಟಿ
ಅದರೊಳು ಬಿದ್ದಿದ್ದಿ ಕಾಲ್ಕಟ್ಟಿ
ತಂದೆ ಪುರಂದರವಿಠಲರಾಯನ
ಧ್ಯಾನವನ್ನೆ ಮರೆತು ಬಿಟ್ಟೆ ||
***
ಏತರ ಕಟಪಟಿ ಒಂದಿನ
ಹೋಗುತಿದ್ದೆ ಲಟಪಟಿ ||
ಬರೋವಾಗ್ಗೆ ಏನು ತಂದೆ
ಬರುತಲೆ ಎಲ್ಲಾನು ನನ್ನದೆಂದೆ
ದುಡ್ಡು ಕೂಡಿಟ್ಟು ಬಳಿದು ಹೋಗುವಾಗ
ಬಳಲಿ ಬಳಲಿ ಅಳುಮಾರಿಗೆ ಬಂದೆ ||
ದೊಡ್ಡ ಮನೆಯ ಕಟ್ಟಿ ಅದರೊಳು
ಮಡದಿಯ ಒಯ್ದಿಟ್ಟೆ
ಮಡದಿಗೆ ಮೋಹದ ಮಗು ಒಂದು ಹುಟ್ಟಿ
ಅದರ ಮೇಲೆ ನೀ ಮನಸಿಟ್ಟೆ ||
ಸಂಸಾರ ಬಲು ಖೊಟ್ಟಿ
ಅದರೊಳು ಬಿದ್ದಿದ್ದಿ ಕಾಲ್ಕಟ್ಟಿ
ತಂದೆ ಪುರಂದರವಿಠಲರಾಯನ
ಧ್ಯಾನವನ್ನೆ ಮರೆತು ಬಿಟ್ಟೆ ||
***
pallavi
etara kaTapaTi ondina hOgutidde laTapaTi
caraNam 1
bhavarOgakke Enu tande barutale ellAnu nannadende duDDu
kUDiTTu baLidu hOguvAga baLasi baLasi aLumArige bandi
caraNam 2
doDDa maneya kaTTi adaroLu maDadiya oidiTTi maDadige
mOhada magu ondu huTTi adara mEle nI manasiTTi
caraNam 3
samsAra balu ghoTTi adaroLu biddiddi kAl kaTTi
tande purandara viTTalarAyana dhyAnavanne maredu biTTi
***