ಕಾಖಂಡಕಿ ಶ್ರೀ ಕೃಷ್ಣದಾಸರು
ಜಗದೊಳಗ | ಸಾಧುರ ಮಹಿಮೆಯ ನೋಡಿ | ಸಾದರದಿಂದಲಿದೇ ಸಾಧನವೇ ಮಾಡಿ ಪ
ಸಾಧುರ ನೋಡಿ | ಬಾರದ ಬಯಸುವರಲ್ಲಾ | ತಾನಾಗಿ ಬಂದ | ದಾರಿಯ ತ್ಯಜಿಸಲಿಕ್ಕಿಲ್ಲಾ ಬರುದೆ ಕಂಡಾ | ದುರಾಶೆ ಸೇರುವರಲ್ಲೆ | ದೊರಕಿದನಿತೆ ಲಾಭ | ಸಂತುಷ್ಟರಾಗಿಹರೆಲ್ಲಾ 1
ಸಾಧುರ ನೋಡಿ | ಬ್ರಹ್ಮಭಾವನೆ ಸಮತಾಳಿ | ಸಕಳಿಲ್ಲಿ | ಹಮ್ಮಿನ ಮೊಳಿಕೆಯ ಕೇಳಿ | ಸಿದ್ಧಾಂತದಿಂದ ತಮ್ಮನು ಭವದಲಿ ಬಾಳಿ | ಮುಮ್ಮುಳಿ | ಬಿಡಿಸುವರೊಂದೊಂದೇ ನುಡಿಹೇಳಿ 2
ಸಾಧುರ ನೋಡಿ | ಭಕ್ತಿಯ ಆಶ್ರಯ ಮಾಡೀ | ಬಂದವರಿಗೆ | ಮುಕ್ತಿಯ ಅನ್ನ ಸತ್ರ ನೀಡೀ | ಸದ್ಭೋಧದ | ಯುಕ್ತಿಯಾನಂದದೊಳಗಾಡೀ | ಉಕ್ತವಾದ ಗುರು ಮಹಿಪತಿಸ್ವಾಮಿ ಕೂಡೀ 3
***