Showing posts with label ಗಂಡಬಿಟ್ಟ ಗೈಯಾಳಿ ಕಾಣಣ್ಣ purandara vittala. Show all posts
Showing posts with label ಗಂಡಬಿಟ್ಟ ಗೈಯಾಳಿ ಕಾಣಣ್ಣ purandara vittala. Show all posts

Wednesday, 4 December 2019

ಗಂಡಬಿಟ್ಟ ಗೈಯಾಳಿ ಕಾಣಣ್ಣ purandara vittala

ಪುರಂದರದಾಸರು
ಗಂಡಬಿಟ್ಟ ಗಯ್ಯಾಳಿ ಕಾಣಣ್ಣ- ಅವಳ
ಕಂಡರೆ ಕಡೆಗಾಗಿ  ತಿರುಗಿಪೋಗಣ್ಣ ||ಪ||

ಊರೊಳಗೆ ತಾನು ಪರದೇಶಿಯೆನ್ನುವಳು
ಸಾರುತ ತಿರುಗುವಳು ಮನೆಮನೆಯ
ಕೇರಿಕೇರಿಗುಂಟ ಕೆಲೆಯುತ ತಿರುಗುವಳು
ನಾರಿಯಲ್ಲವೋ ಮುಕ್ಕಮಾರಿ ಕಾಣಣ್ಣ ||೧||

ಅತ್ತೆ ಮಾವನ ಕೂಡ ಅತಿಮತ್ಸರವ ಮಾಡಿ
ನೆತ್ತಿಗೆ ಮದ್ದನೆ ಊಡುವಳು
ಸತ್ಯದ ದೇವರ ಸತ್ಯ ನಿಜವಾದರೆ
ಬತ್ತಲೆ ಅಚ್ಚಂಬಿಲೂಡೇನೆಂಬುವಳು ||೨||

ಹಲವು ಜನರೊಳು ಕಿವಿಮಾತನಾಡುವಳು
ಹಲವು ಜನರೊಳು ಕಡಿದಾಡುವಳು
ಹಲವು ಜನರೊಳು ಕೂಗಿ ಬೊಬ್ಬೆಯನಿಡುವಳು
ತಳವಾರ ಚಾವಡಿಯಲಿ ಒರಲಿಹಳಣ್ಣ ||೩||

ಪರಪುರುಷರ ಕೂಡಿ ಸರಸವಾಡುತ  ಹೋಗಿ
ನೆರೆದಿದ್ದ ಸಭೆಯಲಿ ಕೆಲೆಯುವಳು
ಮರೆಸಿ ತನ್ನವಗುಣ ಗರತಿಯೆಂದು ಮೆರೆವಳು
ಕರಿರೂಪದವಳ ನೀ ಕೆಣಕದಿರಣ್ಣ ||೪||

ಏಸು ಗೃಹಗಳೆಂದು ಎಣಿಸಿ ನೋಡಿಬಂದು
ಬೇಸರದೆ ಜನಕೆ ಹೇಳುವಳು
ಲೇಸಾಗಿ ಪುರಂದರವಿಠಲನು ಹೇಳಿದ
ಹೇಸಿ ತೊತ್ತನು ನೀ ಕೆಣಕದಿರಣ್ಣ ||೫||
**********

ಗಂಡಬಿಟ್ಟ ಗೈಯಾಳಿ ಕಾಣಣ್ಣ - ಅವಳಕಂಡರೆ ಕಡೆಗಾಗಿ ದಾರಿ ಪೋಗಣ್ಣ ಪ.

ಊರೊಳಗೆ ತಾನು ಪರದೇಶಿಯೊನ್ನವಳುಸಾರುತ ತಿರುಗುವಳು ಮನೆಮನೆಯಕೇರಿ - ಕೇರಿಗುಂಟ ಕಲೆಯತ ತಿರುಗುವಳುನಾರಿಯಲ್ಲವೊ ಮುಕ್ಕಾ ಮಾರಿಕಾಣ್ಣ 1

ಅತ್ತೆ ಮಾವನ ಕೂಡ ಅತಿ ಮತ್ಸರವ ಮಾಡಿನೆತ್ತಿಗೆ ಮದ್ದನೆ ಊಡುವಳುಸತ್ಯರ ದೇವರ ಸತ್ಯ ನಿಜವಾದರೆಬತ್ತಲೆ ಅಡ್ಡಂಬಲೂಡೇನೆಂಬುವಳು 2

ಹಲವು ಜನರೊಳು ಕಿವಿಮಾತನಾಡವಳುಹಲವು ಜನರೊಳು ಕಡಿದಾಡವಳುಹಲವು ಜನರೊಳ ಕೂಗಿ ಬೊಬ್ಬೆಯನಿಡುವಳುತಳವಾರ ಚಾವಡಿಯಲಿ ಬರಲಿ ಹೆಣ್ಣು 3

ಪರಪುರುಷರ ಕೂಡಿ ಸರಸವಾಡುತ ಹೋಗಿನೆರೆದಿದ್ದ ಸಭೆಯಲಿ ಕರೆಯುವಳುಮರೆಸಿ ತನ್ನವಗುಣ ಗಾಡಿಯೆಂದು ಮೆರೆವಳುಕರಿರೂಪದವಳ ನೀ ಕೆಣಕದಿರಣ್ಣ 4

ಏಸು ಗೃಹಗಳೆಂದು ಎಣಿಸಿ ನೋಡಿಬಂದುಬೇಸರದೆ ಜನಕೆ ಹೇಳುವಳುಲೇಸಾಗಿ ಪುರಂದರವಿಠಲನು ಹೇಳಿದಹೇಸಿ ತೊತ್ತನು ನೀನು ಕೆಣಕದಿರಣ್ಣ 5
*******