ನವಭಕುತಿ ಪುಟ್ಟುವುದು ವ್ಯಕ್ತವಾಗಿ
ತವಕದಿಂದಲಿ ಚರಮದೇಹವೆ ಬರುವುದು
ದಿವಿಜರು ಒಲಿದು ಸತ್ಕರ್ಮಮಾಡಿಸುವರು
ಕವಿನುತ ನಮ್ಮ ವಿಜಯವಿಠ್ಠಲರೇಯ ದಿವಾರಾತ್ರಿಗಳಲಿ ಅವರ ಕೂಡ್ಯಾಡುವ
ನರಕನರಕದಲ್ಲಿ ಹೊರಕಿವಿಯ ಮನುಜನೆ
ಧರೆಯೊಳಿವರ ಚರಿತೆ ಅದ್ಭುತ ಒಂದೊಂದು
ನಿರುತದಲಿ ನೋಡು ತುಂಬಿ ಸೂಸುತಲಿದೆ.
ಅರುಣೋಯದಲೆದ್ದು
ಶ್ರೀಪಾದರಾಯರ
ಸ್ಮರಿಸಿದ ಮಾನವನಿಗೆ ಸರ್ವಸಂಪದವು
ಪರಗತಿಯಾಗುವುದು ಪರಿಹಾಸವಲ್ಲ ಕೇಳು
ಸುರಭೂಸುರಪ್ರಿಯ ವಿಜಯವಿಠ್ಠಲನು
ಕರುಣದಿಂದಲಿ ಮಹಾ ಉನ್ನತಪದವೀವ.
****