Showing posts with label ಬಂದೆಯಾ ಬಾರೊ ಗೋಪಾಲ prasannavenkata. Show all posts
Showing posts with label ಬಂದೆಯಾ ಬಾರೊ ಗೋಪಾಲ prasannavenkata. Show all posts

Thursday, 14 November 2019

ಬಂದೆಯಾ ಬಾರೊ ಗೋಪಾಲ ankita prasannavenkata

by ಪ್ರಸನ್ನವೆಂಕಟದಾಸರು
ಬಂದೆಯಾ ಬಾರೊ ಗೋಪಾಲ ಕೃಷ್ಣಬಂದೆಯಾ ಬಾರೊ ಪ.

ಇಲ್ಲಿಯ ಗೊಲ್ಲತೇರೆಲ್ಲರುಬಲ್ಲಿದಕಾಮುಕ ನಲ್ಲೇರುಫುಲ್ಲಲೋಚನ ನಿನ್ನ ಮುದ್ದಿನ ಮೊಗವಮೆಲ್ಲನೆ ಚುಂಬಿಸಿ ಬಿಡರೊ ಮಗುವೆ 1

ಚಿಕ್ಕವನೆಂದಾಡಿಸಿ ನಿನ್ನಚಕ್ಕಂದಿಲಿ ಬಾಡಿಸಿ ಚಿನ್ನಸಕ್ಕರೆ ಮಾತಲಿ ಬಿಗಿದಪ್ಪುವರೊಕಕ್ಕಸಕುಚದಂಗನೆ ಗೋಪಿಯರೊ 2

ಇರುಳ್ಹಗಲೆನ್ನ ಕಂದನ್ನಮರುಳಿಕ್ಕುವರೆಂದಂಜುವೆ ನಾತರಳನ ಕಾಲಿಂಗೆರಗುವೆ ನೋಡೋತರಳೇರೊಡಗೂಡಾಡಲಿ ಬೇಡೊ 3

ನಿಲ್ಲದೆ ನಿನ್ನ ಬರಮಾಡುವರೊಚೆಲ್ವಹ ಹಣ್ಣುಗಳ ನೀಡುವರೊಒಳ್ಳೆ ನಾರೇರನುದಿನ ನಿನ್ನಬುಲ್ಲಿ ಬೆಲ್ಲಕೆ ಮನಸೋತಿಹರಣ್ಣ 4

ವಿಗಡೇರ ದೃಷ್ಟ್ಯಾಗಲೆತಗಲಿದವೈ ನಿನ್ನ ಮೈಯಲಿಅಗಲದಿರೆನ್ನ ಪ್ರಸನ್ನವೆಂಕಟನಗಪತಿ ಬಡವರ ಧನವೆ ಕೃಷ್ಣ 5
*******