ಭಕುತರಿಗಾಗಿ ನೀ ಬಡುವ ಕಷ್ಟಗಳು
ಅಕಟ ಪೇಳಲಳವೆ ( ನೋಡಲಳವೆ)
ಲಕುಮಿ ಪತಿಯೆ ಯಾತಕೆ ವೃಥಾನಿಕರಕೆ ಸುಖವೀವೆಕಾವೆ ಪ
ಮಂದಿಮನ ವಲಿಸಿ ಮದುವೆ ನೀನು ಮ
ತ್ತೊಂದು ಮಾಡಿಕೊಳುತ್ಯಾ
ಅಂದಣಾದಿ ಐಶ್ವರ್ಯವನ್ನು ಪರರಿಂದ ಕೇಳಿಕೊಳುತ್ಯಾ
ನಿಂದೆ ಮಾಡುವರೆಂಬೊ ಭಯದಿ
ಅವರ್ಹಿಂದೆ ಹಿಂದೆ ಇರುತ್ಯಾ
ಅಂದವಾದ ಆಟಗಳೊಳಗೆ ಇದುವಂದು ಎನುತ್ಯಾದೇವ 1
ಸಡಗರದಲಿ ಕರಪಿಡಿದು ಕಾಯ್ದೆ ನೀ
ಹುಡುಗರೀರ್ವರನ್ನು
ಮಡುವಿನೊಳಗೆ ಆ ಮಕರಿಯಿಂದ ಕಾಲ್ಹಿಡಿಸಿಕೊಂಡವನ್ನ
ಮಡದಿಗಂತು ಗಡಿತಡಿಯದೆ
ನೀಡಿದಿ ಉಡುಗೆ ಅಗಣಿತವನ್ನು
ಕಡಿಗೆ ನಿನ್ನ ಕರದೊಂದು ದಿನಾದರು
ಬಡಿಶ್ಯಾರೆ ಸುಖವನ್ನು ಏನು 2
ಏನು ತಪ್ಪು ನಿನ್ನವರು ಮಾಡಿದರು ಕಾಣಬಾರವು ನಿನಗೆ
ಸೂನು ವೈರಿ ಪರಪ್ರಾಣಹಾರಿಗಳ ಪೊರೆದು ಕರುಣಿ
ನಿನಗೆ ಅನುವಂದು ಪಂಚಿಕೆ ಪೇಳುವೆ
ಸುರಧೇನು ಬಾರೊ ಬ್ಯಾಗ
ಮಾನದ ಶಿರಿಗೋವಿಂದ ವಿಠಲ ಎನ್ನ
ಮಾನಸ ಮಂದಿರಕೆ ಈಗ 3
***