RAO COLLECTIONS SONGS refer remember refresh render DEVARANAMA
ಪಾಲಿಸಯ್ಯ ಪೂರ್ಣ ಲೋಲ ಲಕ್ಷುಮಿರಮಣ ಪ
ಮುನಿವರ ಪಾಲಕ ಘನ ಸುಖದಾಯಕ ಕನಕಾಂಬರಧರ ಕಸ್ತೂರಿ ತಿಲಕ ಅನಾಥ ಬಂಧು ಅರ್ತ ರಕ್ಷಕ 1
ಸಮಸ್ತಕೆ ನೀ ದಾತ ವಿಮಳ ವಿರಾಜಿತ ಕಮಲ ಸಂಭವಸುತ ಸೋಮಜು ವರಪ್ರಿಯ ಕಾಮಪೂರಿತ 2
ಅನಂಗಜನಕ ಅಣುರೇಣುವ್ಯಾಪಕ ದೀನ ಮಹಿಪತಿಗೆ ನೀ ಬೀರೊ ಸ್ವಾನಂದಸುಖ ಅನಂತಕೋಟಿ ಬ್ರಹ್ಮಾಂಡನಾಯಕ 3