by ಪ್ರಾಣೇಶದಾಸರು
ರುದ್ರದೇವರ ಹರಿಹರಸ್ತೋತ್ರ
ಶರಣು ನಿನ್ನಚರಣಕಮಲಗಳಿಗೆ ಶಿವಶಿವಾ |ಕರವಪಿಡಿದು ಸುಮತಿಯಿತ್ತು ಪೊರೆಯೊ ಶಿವಶಿವಾ ಪ
ದಂತಿಚರ್ಮ ಹೊದ್ದ ಭಸ್ಮಭೂಷ ಶಿವಶಿವಾ |ಚಿಂತಿ ರಹಿತ ಲಯಕೆ ಕರ್ತೃನಾದ ಶಿವಶಿವಾ ||ಸಂತರಿಂದ ಸತತ ಸೇವೆಗೊಂಬ ಶಿವಶಿವಾ |ಕಂತುಪಿತನ ಪೂರ್ಣ ಪ್ರೀತಿಪಾತ್ರ ಶಿವಶಿವಾ 1
ಮಂದಮತಿಯ ತಪ್ಪಿನೆಣಿಸಬ್ಯಾಡ ಶಿವಶಿವಾ |ಕುಂದುನಿನಗೆ ಎಂದಿಗೆಂದಿಗಿಲ್ಲ ಶಿವಶಿವಾ ||ಮಂದಗಮನೆ ನಿನ್ನ ಮನದೊಳಿಲ್ಲೆ ಶಿವಶಿವಾ |ತಂದುಕೊಂಡ ದಕ್ಷ ವೃಥ ಕುವಾರ್ತಿ ಶಿವಶಿವಾ 2
ಹೀನರಂತೆ ನಿನಗೆ ಕೋಪ ಸಲ್ಲ ಶಿವಶಿವಾ |ಮಾಣು ಯಜÕ ಸಹಯನಾಗು ದಯದಿ ಶಿವಶಿವಾ ||ಏನುಪಾಯ ಇದಕೆ ಚಿಂತಿಸುವದು ಶಿವಶಿವಾ |ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವಶಿವಾ 3
***
ಶರಣು ನಿನ್ನ ಚರಣ ಕಮಲಗಳಿಗೆ ಶಿವ ಶಿವಾ |
ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವ ಶಿವಾ || ಪ ||
ದಂತಿ ಚರ್ಮ ಹೊದ್ದ ಭಸ್ಮ ರೂಪ ಶಿವ ಶಿವಾ |
ಚಿಂತೆ ರಹಿತ ಲಯಕೆ ಕರ್ತನಾದ ಶಿವ ಶಿವಾ ||
ಸಂತರಿಂದ ಸತತ ಸೇವೆಗೊಂಬ ಶಿವ ಶಿವಾ |
ಕಂತು ಪಿತನ ಪೂರ್ಣ ಪ್ರೀತಿ ಪಾತ್ರ ಶಿವ ಶಿವಾ || 1 ||
ಮಂದಮತಿಯ ತಪ್ಪನೆಣಿಸಬ್ಯಾಡ ಶಿವ ಶಿವಾ |
ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವ ಶಿವಾ ||
ಮಂದಗಮನೆ ನಿನ್ನ ಮನದೊಳಿಲ್ಲೆ ಶಿವ ಶಿವಾ |
ತಂದು ಕೊಂಡ ದಕ್ಷ ವೃಥ ಕುವಾರ್ತಿ ಶಿವ ಶಿವಾ || 2 ||
ಹೀನರಂತೆ ನಿನಗೆ ಕೋಪ ಸಲ್ಲ ಶಿವ ಶಿವಾ |
ಮಾನಯಜ್ಞ ಸಹಾಯನಾಗು ದಯದಿ ಶಿವ ಶಿವಾ ||
ಏನುಪಾಯವಿದಕೆ ಚಿಂತಿಪುದು ಶಿವ ಶಿವಾ |
ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವ ಶಿವಾ || 3 ||
***
Saranu Ninna Carana Kamalagalige Siva Siva |
Karava Pididu Sumatiyittu Poreyo Siva Siva || Pa ||
Danti Carma Hodda Bhasma Rupa Siva Siva |
Cinte Rahita Layake Kartanada Siva Siva ||
Santarinda Satata Sevegomba Siva Siva |
Kantu Pitana Purna Priti Patra Siva Siva || 1 ||
Mandamatiya Tappanenisabyada Siva Siva |
Kundu Ninage Endigendigilla Siva Siva ||
Mandagamane Ninna Manadolille Siva Siva |
Tandu Konda Daksa Vrtha Kuvarti Siva Siva || 2 ||
Hinarante Ninage Kopa Salla Siva Siva |
Manayajna Sahayanagu Dayadi Siva Siva ||
Enupayavidake Cintipudu Siva Siva |
Pranesa Vithala Ninna Vasadolihanu Siva Siva || 3 ||
***