Showing posts with label ಸರ್ವಾಂತರ್ಯಾಮಿ ಸ್ವತಂತ್ರ ಶ್ರೀನಿವಾಸ prasannashreenivasa. Show all posts
Showing posts with label ಸರ್ವಾಂತರ್ಯಾಮಿ ಸ್ವತಂತ್ರ ಶ್ರೀನಿವಾಸ prasannashreenivasa. Show all posts

Thursday, 5 August 2021

ಸರ್ವಾಂತರ್ಯಾಮಿ ಸ್ವತಂತ್ರ ಶ್ರೀನಿವಾಸ ankita prasannashreenivasa

 ..


kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು


ಸರ್ವಾಂತರ್ಯಾಮಿ ಸ್ವತಂತ್ರ ಶ್ರೀನಿವಾಸ ಸರ್ವಾಂತರ್ಯಾಮಿ ಸ್ವತಂತ್ರ

ಸರ್ವಾಂತರ್ಯಾಮಿ ಹರಿ ಸುಂದರ ಜ್ಞಾನಾನಂದ

ಇಂದಿರೆಕಾಂತ ಅರಿವಿಂದಸಂಭವನಯ್ಯ ಪ


ಅದ್ಭುತ ಅಚಿಂತ್ಯ ಶಕ್ತ ಅಮ್ಮ ಲಕುಮಿಯ

ಅಮಲ ಪ್ರೇಮದಿ ಇವನ ಆಡಿಗಳಿಗೆರಗುವರ

ಅಘಕೂಟ ತೊಲಗಿಸಿ ಅಪವರ್ಗವೀವ ಸ್ವಾಮಿ

ಚಿಂತಿಸಿ ವಂದಿಪ ಸುಜನರ ಮನದೊಳು

ಚಂದಿರನಂದದಿ ನಿಂದಿವ ಪೊಳೆಯುತ

ಹಿಂದಿನ ಮುಂದಿನ ಕರ್ಮವ ಕಳೆದಿನ

ಕುಂದದಾನಂದವನೀವ ಮುಕುಂದನು 1

ಜನ್ಮಾದಿ ಮುಖ್ಯ ಕಾರಣ ಜಾನಕೀಶ ಜಲಜಸಂಭವನಯ್ಯ

ಜಿಹ್ವಾದ್ವಯನು ದ್ವಿಜ ಜಲಧರ ಮೊದಲಾದ

ಜನರೊಳು ಇದ್ದು ಕಾಣದೆ ಜಾಣತನದಿ ಚರಿಪನು

ಶೀಘ್ರದಿ ಒಲಿವನು ಸೇವಿಪ ಜನರಿಗೆ

ಸುಗ್ರೀವನ ಸಖ ಲಕ್ಷ್ಮಣನಗ್ರಜ

ಜಾಗೃತ ಸ್ವಪ್ನ ಸುಷುಪ್ತಿ ಪ್ರವರ್ತಕ

ವಿಗ್ರಹ ರೂಪದಿ ನಿಂತಿಹನಿಲ್ಲಿ 2

1.ಆಲೋಚನೆಗೂ

ಶಾಸ್ತ್ರದಿಂದಲೆ ಗೋಚರ ಸಾತ್ಯವತಿ

ಶಾಸ್ತ್ರವೆಲ್ಲಕೂ ಅತೀತ

ಸರ್ವಾಶ್ರಯನು ಇವ ಶಂಭೂ ಶಂಕರನುತ

ಸರ್ವತ್ರ ವ್ಯಾಪ್ತ ಅಮಲ ಸರ್ವ ವಿಲಕ್ಷಣ ಹರಿಯು

ಸರಿಪರರಿಲ್ಲವು ಇವಗೆಲ್ಲೆಲ್ಲು ಹರ ವಿಧಿ ಸುರ

ಮುನಿ ಸನ್ನುತ ಶ್ರೀಶನು ವರ ವರ ವೆಂಕಟ

ನಿಂತಿಹನಿಲ್ಲಿ ಸರಸಿಜಭವ ತಾತ

ಪ್ರಸನ್ನ ಶ್ರೀನಿವಾಸ 3

***