Showing posts with label ಸತ್ಯಸಂಕಲ್ಪ ತ್ವಚಿತ್ತಾನುಸಾರ ತ್ವಚಿತ್ತ ವೃತ್ತಿಯು ನಿನಗೆ ಸರ್ವತ್ರದಿ uragadrivasa vittala. Show all posts
Showing posts with label ಸತ್ಯಸಂಕಲ್ಪ ತ್ವಚಿತ್ತಾನುಸಾರ ತ್ವಚಿತ್ತ ವೃತ್ತಿಯು ನಿನಗೆ ಸರ್ವತ್ರದಿ uragadrivasa vittala. Show all posts

Monday 2 August 2021

ಸತ್ಯಸಂಕಲ್ಪ ತ್ವಚಿತ್ತಾನುಸಾರ ತ್ವಚಿತ್ತ ವೃತ್ತಿಯು ನಿನಗೆ ಸರ್ವತ್ರದಿ ankita uragadrivasa vittala

ಸತ್ಯಸಂಕಲ್ಪ ತ್ವಚಿತ್ತಾನುಸಾರ ತ್ವ

ಚಿತ್ತ ವೃತ್ತಿಯು ನಿನಗೆ ಸರ್ವÀತ್ರದಿ ಪ


ಉತ್ತಮೋತ್ತಮ ನೀನೆಗತಿ ಎಂ-

ದೆತ್ತಿ ಶೃತಿ ಸ್ಮøತಿ ಸಾರುತಿಹುದು

ಉತ್ತರಿಸು ಭವಶರಧಿಯಲಿ

ಎತ್ತಿ ಕಡೆಹಾಯಿಸುವುದೀಗಲೆ ಅ.ಪ


ಜಗದಾಖ್ಯವೃಕ್ಷಕ್ಕೆ ಆದಿಕಾರಣನಾಗಿ

ಜಗದೇಕವಂದ್ಯ ನೀನಾಧಾರನೋ

ಜಗತರುವಿಗೆ ಸತ್ವರಜತಮವೆಂಬೀ ಗುಣತ್ರಯಗಳು

ಪ್ರಮುಖ ಬೇರುಗಳು

ತ್ವಗಾದಿ e್ಞÁನೇಂದ್ರಿಯಗಳೆಂಬೀ ಐದು ಬಿಳಲುಗಳೂ

ಬಗೆ ಬಗೆ ಜರೆಹುಟ್ಟು ಮರಣ ವೃದ್ಧಿ ಹ್ರಾಸಾದಿ

ಪಡೂರ್ಮಿಗಳೂ

ಬಿಗಿದಿಹವು ಮೇಧ ಮಜ್ಜಾದಿ ಸಪ್ತಧಾತುಗಳೆಲ್ಲ

ಹೊದಿಕೆಗಳು ಪಂ

ಟೆಗಳು ಎಂಟು ಆಗಸಾದಿ ಭೂತಪಂಚಕ ಬುದ್ಧಿ

ಮನ ಅಹಂಕಾರವೆಂದು

ಆಗಿಹುದು ನೇತ್ರಶ್ರೋತ್ರಾದಿಗಳಾದಿ ನವಗೋಳಕಗಳೇ

ಪೊಟ್ಟರೆಗಳು 1


ಪ್ರಾಣಾಪಾನ ವ್ಯಾನೋದಾನ ಸಮಾನವೆಂಬೀ

ಪ್ರಾಣಾದಿಪಂಚಕವು

ಪ್ರಾಣನಿಗೆ ಉಪಪ್ರಾಣನಾಗಿಹ ನಾಗ ಕೂರ್ಮ

ಕೃಕಳಾದಿ ಪಂಚವಾಯುಗಳು

ಪರ್ಣಗಳು ಹತ್ತೆನಿಸಿ ವೃಕ್ಷಕೆ ದುಃಖ ಸುಖವೆಂಬೆರಡು

ಹಣ್ಣುಗಳು ಹಣ್ಣಿನೋಳು ಧರ್ಮಾರ್ಥ ಕಾಮ

ಮೋಕ್ಷಗಳೆಂಬÉೂ ರಸಗಳು

ಕಾಣುತಿದೆ ವೃಕ್ಷದಿ ಜೀವಪರಮಾತ್ಮರೆಂಬೆರಡು

ಪಕ್ಷಿಗಳು ವಿಹರಿಸುತಲಿಹವು

ತ್ರಾಣವಿಲ್ಲದೆ ಜೀವಖಗವು ಉಣಫತಲಿರುವುದು

ಕರ್ಮಫÀಲವನು

ಪ್ರಾಣಪತಿಯನು ಕಾಣದಾತನು ಪೂರ್ಣಕರುಣಾ

ಕಟಾಕ್ಷವಿಲ್ಲದೆ 2


ಅಡಿ ಮೇಲಾಗಿಹ ಗಿಡದೊಡೆಯ ನೀ ಗಿಡದೊಳು

ಕಡೆ ಮೊದಲು ಬಿಡದೆ ನೀ ವ್ಯಾಪಿಸಿಹೆ

ಅಡಿಗಡಿಗೆ ಜೀವರೊಡಗೂಡಿ ಬಂದವರನು

ಗಿಡದ ಗೂಡಲು ಅಡಗಿಸಿರುವೆಯೋ

ನಿನ್ನೊಡಗೂಡಿ ಒಂದೇ-

ಕಡೆಯಾಡುತಿಹ ಬಡಜೀವಿ ನಾನಯ್ಯ

ಪಡೆದ ಫಲವದು ಬೆಂಬಿಡದೆ ಭೋಗಕೆ ಬರುತಲಿಹುದಯ್ಯ

ದೃಢಮನದಿ ಅದನು ಬಿಡಲು ಯೋಚಿಸೆ

ಬಡಿದು ಉಣಿಸುವೆಯೊ

ಬಿಡದಿರುವೆ ಎನ್ನೊಡೆಯಾ ಒಡೆಯ ನಿನ್ನೆದುರಿನಲಿ ನಾ

ಬಿಡದೆ ನಿನ್ನ ನೆಳಲಿನಂತಿಹೆ ಜಡಮತಿಯ

ಪರಿಹರಿಸಿ ರಕ್ಷಿಸೊ

ಮೃಡನುತ ಶ್ರೀ ವೇಂಕಟೇಶಾ 3

****