Actor Vijay Raghavendra
ದಾಸ ದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ ।।ಪ॥
ಶಂಕುದಾಸರ ಮನೆಯ ಮಂಕುದಾಸನು ನಾನಯ್ಯ
ಮಂಕುದಾಸನು ನಾನು ಮರುಳದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ
ಬಿಂಕದ ಬಾಗಿಲ ಕಾಯ್ವ ಬಡದಾಸ ನಾನು ।।೧।।
ಕಾಳಿದಾಸರ ಮನೆಯ ಕೀಳುದಾಸನು ನಾನಯ್ಯ
ಆಳುದಾಸನು ನಾನು ಮೂಳದಾಸ
ಫಾಲಾಕ್ಷಸಖ ನಿನ್ನ ಭಜಿಪ ಭಕ್ತರ ಮನೆಯ
ಆಳಿನಾಳಿನ ದಾಸನಡಿದಾಸ ನಾನಯ್ಯ ।।೨।।
ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುರುಬದಾಸ
ಛಲದಿ ನಿನ್ನ ಭಜಿಸುವವರ ಮನೆಯ ಮಾದಿಗದಾಸ
ಸಲೆ ಮುಕ್ತಿ ಪಾಲಿಸೆನ್ನೊಡೆಯ ಆದಿಕೇಶವರಾಯ ।।೩।।
****
ರಾಗ ಕಾಂಬೋದಿ ತಾಳ ಝಂಪೆ (raga, taala may differ in audio)
Dasadasara maneya dasanudasa nanu
Srisa sriranga nimma maneya dasa ||pa||
Sankudasara maneya mankudasanu nanayya
Mankudasanu nanu maruladasa
Sankirtaneya madi neneva Baktara maneya
Binkada bagila kayva badadasa nanu ||1||
Kalidasara maneya kiludasanu nanayya
Aludasanu nanu muladasa
Palakshasaka ninna Bajipa Baktara maneya
Alinalina dasanadidasa nanayya ||2||
Halavu dasara maneya holedasa nanayya
Kulavillada dasa kurubadasa
Chaladi ninna Bajisuvavara maneya madigadasa
Sale mukti palisennodeya adikesavaraya ||3||
***