by ಗೋಪಾಲದಾಸರು
ನಾಳೆ ಬರುವೆನೆಂದು ಹೇಳಿ ಮಧುರೆಗೆ ಪೋದ ಬ-ಹಳದಿನವಾಯಿತಲ್ಲೊ ಉದ್ಧವ ಪ.
ಕೇಳಿದ್ಯಾ ನೀಬಾಹವೇಳೆಯಲಿ ಕೃಷ್ಣನಆಲೋಚನೆಯೊಳಿದ್ದೆವೊ ಅ.ಪ.
ಪಳ್ಳಿವಾಸಿಗಳು ನಾವು ಪರಿಪರಿ ಅಲಂಕರಿಸಿ ಒಲಿಸಿಕೊಂಬುದನರಿಯೆವೊಗೊಲ್ಲ ಸತಿಯರು ಸದಾ ಗೋರಕ್ಷಕರು ಮೈಯ ಹೊಲೆತೊಳೆಯಲರಿಯೆವೊಬಲ್ಲಿದನ ಸಹವಾಸ ಮಾಡ್ಯವನ ಮಹಿಮೆಯನೆಲ್ಲ ತಿಳುಹಿಸಿಕೊಂಡೆವೊಚಲ್ಲೆಗಂಗಳ ಚಪಲೆಯರು ಮಧುರೆ ನಾರಿಯರ ಒಲಪಿಗೆ ನಾವೆದುರೇನೊ ? 1
ಚೊಕ್ಕನಾದನಿತ್ಯತೃಪ್ತನಿಗೆ ಬೆಣ್ಣೆ ಕಳವಿಕ್ಕಿದೆವಲ್ಲವೊಸಿಕ್ಕಿಸಿಕೊಂಡು ರಾಸಕ್ರೀಡೆಯೊಳವಗೆ ಸೊಕ್ಕಿನುಕ್ತಿಯ ನುಡಿದೆವೊಕಕ್ಕುಲಾತಿಲಿ ಕಾಮಾಸಕ್ತರಿಗಿವ ನಮಗೆ ದಕ್ಕಿದನು ಎಂತಿದ್ದೆವೊವಕ್ರಗತಿಯಾಗಿ ಅಕ್ರೂರ ಬಂದ್ಯೆಮ್ಮ ಚಕ್ರಧರನಗಲಿಸಿದನೊ 2
ಧೀರಸ್ವರಮಣದೋಷದೂರನ್ನ ಅಲ್ಪ ಬಹುಜಾರನೆಂದರಿತೆವಲ್ಲೊಆರಾರ ಮನಕಿನ್ನು ತೋರದವನ ನಮ್ಮ ಓರಗೆಯವನೆಂದರಿದೆವೊಮುರಾರಿಅಜಪರಿವಾರದೊಡೆಯನ ನಾವು ಪೋರನೆಂದಾಡಿಸಿದೆವೊನಾರಿಯರು ನಾವಲ್ಪ ದಾರಿದ್ರ್ಯ ದಷ್ಟರಿಗೆ ಶ್ರೀರಮಣನೆಂತೊದಗುವನೊ 3
ನಿಧಿಯ ಬದಿಲಿದ್ದರು ವಿಧಿಸುವುದನರಿಯದೆ ಮದಡೆಯರಾದೆವೊಮದನನಾಟಕೆ ಮನವಿಕ್ಕಿ ಅವನಿಂದೊಂದು ತತ್ವ ತಿಳಿಯಲಿಲ್ಲೊಚದುರೆಯರು ನಮ್ಮ ಬಿಟ್ಟು ಕದಲನಿವನೆಂತೆಂಬ ಮದದಿ ಮೋಸಹೋದೆವೊಮಧುರೆಯಿಂದೆಮ್ಮ ತಮ್ಮ ಹೃದಯದೊಳಿಪ್ಪನೆಂದುಚದುರ ಪೇಳಿಹನಂತೆಲೊ 4
ಮತಿ ತಪ್ಪಿದೆವೊ ನಾವು ಸತಿಯರೆಲ್ಲೊಂದಾಗಿ ರಥವ ನಿಲಿಸದೆ ಹೋದೆವೊಹಿತರಾರು ನಮಗೆಸಾರಥಿನಿನ್ನ ಸಹಾಯ ದೊರೆತರೆತನವ ಮಾಳ್ಪೆವೊಪಥವ ತೋರಿಸೊ ನಮಗೆ ಮುಂದೆಮ್ಮ ಚೆಲ್ವ ಶ್ರೀಪತಿಯು ಬಂದೊದಗುವಂತೆಗತಿಯಾರೊ ಅವನ್ಹೊರತು ಗೋಪಾಲವಿಠಲ ಅಚ್ಯುತನ ಮಹಿಮೆ ಕಾಣೆವೊ 5
********