Showing posts with label ಜೇನು ಬಂದಿದೆ ಜನರು ಜೇನು ಕೊಳ್ಳಿರೋ ಮಧುರವಾದ purandara vittala JENU BANDIDE JANARU JENU KOLLIRO MADHURAVAADA. Show all posts
Showing posts with label ಜೇನು ಬಂದಿದೆ ಜನರು ಜೇನು ಕೊಳ್ಳಿರೋ ಮಧುರವಾದ purandara vittala JENU BANDIDE JANARU JENU KOLLIRO MADHURAVAADA. Show all posts

Saturday 4 December 2021

ಜೇನು ಬಂದಿದೆ ಜನರು ಜೇನು ಕೊಳ್ಳಿರೋ ಮಧುರವಾದ purandara vittala JENU BANDIDE JANARU JENU KOLLIRO MADHURAVAADA



ಜೇನು ಬಂದಿದೆ ಜನರೇ ಜೇನು ಕೊಳ್ಳಿರೋ || ಪ ||

ಮಧುರವಾದ ಕೊಂಬು ಜೇನು ಮಾಧವನ ಸ್ಮರಣೆ ಎಂಬ
ಸದರವಾದ ಜನರಿಗೆಲ್ಲ ಜನನ ಮರಣವಾಯ್ದ ಬಗೆ
ಸತ್ತವರಿಗೂ ಸಾಯದವರಿಗೂ ಇಹಪರಂಗಳೆರಡು ಉಂಟು
ಪದುಮನಾಭನ ನಾಮಸ್ಮರಣೆ ಸದನ ಮಾಡಿಕೊಂಡವರಿಗೆ || ೧ ||

ಒಂದು ಅರಿಯ ಒಂದು ಬಲ್ಲ ಅಜ್ಞನಾದ ಅಜಮಿಳನು
ಕಂದನಾರ ಎಂದು ಕೂಗಿ ಕರೆದ ಮಾತ್ರದಿ
ಅಂದು ಅವನ ಸಲಹಿದ ಅನಂತ ಶ್ರೀವಾಸುದೇವ
ನಂದಗೋಪನ ಸುಂದರ ಕಂದ ನವನೀತಚೋರನೆಂಬ || ೨ ||

ಈರೇಳು ಲೋಕದಲ್ಲಿ ಇರುವ ಕಸ್ತೂರಿರಂಗ
ಮಾರು ವಾರು ಸೇರು ಜೇನು ಅಗ್ಗವಾಗಿದೆ
ಅರಿತು ಬೇಗ ಧ್ಯಾನ ಮಾಡಿ ಇಂದಿರೇಶನ
ಪುರಂದರ ವಿಠಲ ನಾಮಸ್ಮರಣೆ ಎಂಬ ದಿವ್ಯ ಜೇನು || ೩ ||
***

jEnu baMdide janarE jEnu koLLirO || pa ||

madhuravaada koMbu jEnu maadhavana smaraNe eMba
sadaravaada janarigella janana maraNavaayda bage
sattavarigU saayadavarigU ihaparaMgaLeraDu uMTu
padumanaabhana naamasmaraNe sadana maaDikoMDavarige || 1 ||

oMdu ariya oMdu balla ajnanaada ajamiLanu
kaMdanaara eMdu kUgi kareda maatradi
aMdu avana salahida anaMta shrIvAsudEva
naMdagOpana suMdara kaMda navanItacOraneMba || 2 ||

IrELu lOkadalli iruva kastUriraMga
maaru vaaru sEru jEnu aggavaagide
aritu bEga dhyaana maaDi iMdirEshana
puraMdara viThala naamasmaraNe eMba divya jEnu || 3 ||

***

pallavi

jEnu bandide janaru jEnu koLLiro

caraNam 1

madhuravAda kombujEnu mdhavana smaraNe sadaravAda janarigilla janana maraNavAidU bage satta
sAyadavarige para ihangaLeraDu uNTu namma padmanAbhana nAma smaraNe sadana mADikombavarige

caraNam 2

ondu ariya ondu balla ajnanAda ajAmiLanu kanda nAragendu kUgi kareda mAtradi
andu avana salahida ananta shrI vAsudEva nandagOpana sundara kanda navanItacOranemba

caraNam 3

IrELu lOkadalli iruva kastUri ranga mAruva Aru sEru jEnu tuppa aggavAgide idanaridu
bEga nIvu indirEshana dhyAnavannu svAmi purandara viTTala smaraNeyemba divya
***


ಜೇನು ಬಂದಿದೆ , ಜನರು ಜೇನು ಕೊಳ್ಳಿರೋ ||ಪ||

ಮಧುರವಾದ ಕೊಂಬುಜೇನು ಮಾಧವನ ನಾಮಸ್ಮರಣೆ
ಸದರವಾದ ಜನರಿಗಿಲ್ಲ ಜನನಮರಣ ಒಯ್ಹಬ್ಯಾಗೆ
ಸತ್ತಸಾಯದವರಿಗೆ ಪರ ಇಹಂಗಳೆರಡು ಉಂಟು, ನಮ್ಮ
ಪದ್ಮನಾಭನ ನಾಮಸ್ಮರಣೆ ಸದನ ಮಾಡಿಕೊಂಬವರಿಗೆ ||

ಒಂದು ಅರಿಯ ಒಂದು ಬಲ್ಲ ಅಜ್ಞನಾದ ಅಜಮಿಳನು
ಕಂದ ನಾರಗೆಂದು ಕರೆದ ಮಾತ್ರದಿ
ಅಂದು ಅವನ ಸಲಹಿದ ಅನಂತ ಶ್ರೀವಾಸುದೇವ
ನಂದಗೋಪನ ಸುಂದರಕಂದ ನವನೀತಚೋರನೆಂಬ ||

ಈರೇಳು ಲೋಕದಲ್ಲಿ ಇರುವ ಕಸ್ತೂರಿರಂಗ
ಮಾರುವ ಆರು ಸೇರು ಜೇನುತುಪ್ಪ ಅಗ್ಗವಾಗಿದೆ ಇದ-
ನರಿತು ಬೇಗ ನೀವು ಇಂದಿರೇಶನ ಧ್ಯಾನವನ್ನು ಸ್ವಾಮಿ-
ಪುರಂದರವಿಠಲಸ್ಮರಣೆಯೆಂಬ ದಿವ್ಯ ||
***

ರಾಗ ಕಾಂಭೋಜ ಆದಿತಾಳ (raga tala may differ in audio)