Showing posts with label ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ ಸುಖಪೊಂದಲು karpara narahari ENU SAADHANA MAADI KRISHNA KARAVA SERITO SUKHAPONDALU. Show all posts
Showing posts with label ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ ಸುಖಪೊಂದಲು karpara narahari ENU SAADHANA MAADI KRISHNA KARAVA SERITO SUKHAPONDALU. Show all posts

Wednesday, 3 November 2021

ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ ಸುಖಪೊಂದಲು ankita karpara narahari ENU SAADHANA MAADI KRISHNA KARAVA SERITO SUKHAPONDALU

ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ

ಸುಖಪೊಂದಲು ಪ

ಸಾನು ರಾಗದಿ ಶ್ರವಣ, ಮನನÀ ಧ್ಯಾನಗೈದಿತೋ

ಬಹು ಜನ್ಮದಿ ಅ.ಪ

ದೇವದಾರು, ಅಗರು, ಚಂದನ, ಮಾವು, ಚಂಪಕ,

ಹರಿ ತೋಷಕ

ಸಾವಿರಾರು ತರುಲತೆಗಳೀ ವಸುಧಿಯೊಳಿರಲೂ

ಬಿದಿರಿನಕೊಳಲು 1

ಮುರಮಡÀನನ ಅಭಯ ಕರದವರ

ಪ್ರಸಾದವ ಕಮಲೋಧ್ಬವ

ಸ್ಮರರಿಪು ಮುಖಸುರರು ಬೇಡಲು ದೊರೆಯದೀ

ವಿಭವ ವಂಶೋದ್ಬವ 2

ತ್ರಾಣವೇನು ಮುರಲಿಗೆ ಶ್ರೀ ಹರಿಯ ವದನದೊಳು

ಸುಧೆ ಸವಿಯಲು

ಶ್ರೀನರಸಿಂಹನರಾಣಿ ತಾನೆ ವೇಣುರಂಧ್ರದೊಳು

ನಿಂದಿರುವಳು 3

****