Showing posts with label ಗುರುವರ್ಯ ಸುಮತೀಂದ್ರರ ನೆನೆಯಿರೋ venkatanatha sumateendra teertha stutih. Show all posts
Showing posts with label ಗುರುವರ್ಯ ಸುಮತೀಂದ್ರರ ನೆನೆಯಿರೋ venkatanatha sumateendra teertha stutih. Show all posts

Saturday, 1 May 2021

ಗುರುವರ್ಯ ಸುಮತೀಂದ್ರರ ನೆನೆಯಿರೋ ankita venkatanatha sumateendra teertha stutih

ರಚನೆ : ಆಚಾರ್ಯ ನಾಗರಾಜು

ರಾಗ : ಹಂಸಾನಂದೀ         ತಾಳ : ಆದಿ

ಗುರುವರ್ಯ ಸುಮತೀಂದ್ರರ ನೆನೆಯಿರೋ ।

ನರಹರಿ ಪ್ರಿಯ ರಾಯರ ಕಾರುಣ್ಯಪಾತ್ರರಾ ।। ಪಲ್ಲವಿ ।।

ವೆಂಕಟ ನಾರಾಯಣಾಚಾರ್ಯರ ಸುತನಾಗಿ । ಮುಂದೆ ।

ವೆಂಕಟಾರ್ಯರಿಂದ ಬಾದರಾಯಣ ಶಾಸ್ತ್ರ ಮುದದಿ ತಿಳಿದ ।। ಚರಣ ।।

ಗುರು ಸೂರೀ೦ದ್ರ ಕರಕಂಜ ಜಾತಾ ।

ಗುರು ಉಪೇಂದ್ರ ಪಿತನೇ ಪಾಲಿಸಯ್ಯಾ ।। ಚರಣ ।।

ಮೂವತ್ತಧಿಕ ಐದು ಉದ್ಗ್ರಂಥವ ರಚಿಸಿ ।

ಮುರಾರಿಯ ಒಲಿಮೆ ಪಡೆದ ಗುರುಗಳ ।। ಚರಣ ।।

****