ಪುರಂದರದಾಸರು
ರಾಗ ತೋಡಿ. ಅಟ ತಾಳ
ದಾಸ ಶೇಷಾದ್ರಿವಾಸ ತಿಮ್ಮಪ್ಪನ, ದಾಸರನ ಕರೆದೊಯ್ದು
ಸಾಸಿರನಾಮ ವಿಲಾಸ ಮೂರ್ತಿಯ , ಲೇಸಾಗಿ ತೋರೆನಗೆ ||ಪ||
ಬೆರಳು ಇಲ್ಲದ ಕೈಯೊಳುಂಡು ಜೀವಿಸುವನ, ಶಿರದಲಂಧದ ದೇವನ
ಉರುವ ಶಾಪಕೆ ತಾನು ಕಿರಿದಾಗಿ ಇರುವನ, ಶರದೊಳು ಧರಿಸಿದವನ
ಕೊರಳ ಮಾಲೆಯ ಪೆಸರೊಪ್ಪಿದ ಗಿರಿಯೊಳು, ಸ್ಥಿರವಾಗಿ ನೆಲಸಿಪ್ಪನ
ಕರುಣ ವಾರಿಧಿ ವೆಂಕಟೇಶನ ಚರಣವ, ಕರೆದೊಯ್ದು ತೋರೆನಗೆ ||
ವಾರಿಧಿಯೊಳುದಿಸಿದ ನಾರಿಯ ಮಧ್ಯದಿ, ಏರಿಯೆ ಕುಳಿತವನ
ವಾರಿಜ ವದನದಿ ತೋರಿದ ಸಾರದ, ಮೂರೊಂದು ಪೆಸರವನ
ಮೇರುವಿನಗ್ರದಿ ಊರಿದ ಚರಣವ, ಸಾರಿದವರ ಜೀವನ
ಊರಿಗೆ ಕರದೊಯ್ದು ಶ್ರೀ ವೇಂಕಟೇಶ ಪ-ದಾರವಿಂದವನೆನಗೆ ||
ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ, ಮಾತೆಯ ಸಲಹಿದವನ
ನೀತಿ ತಪ್ಪಿಯ ನಡೆವಾತ ಭಕ್ಷಕರನ್ನು, ಘಾತಿಸಿ ತರಿದವನ
ನೂತನವಾಗಿಹ ನಾಮ ಶೈಲದ ಮೇಲೆ, ಕಾತರದೊಳು ನಿಂತವನ
ಪಾತಕನಾಶನ ಶ್ರೀವೇಂಕಟೇಶನ, ರೀತಿಯ ತೋರೆನಗೆ ||
ಋಷಿಯ ಮಕ್ಕಳಿಗೆಲ್ಲ ಹಸಿವಿಗೆ ಗುರಿಯಾಗಿ, ವಶ ತಪ್ಪಿ ನಡೆವವನ
ಬಸಿರೊಳಗುದಿಸಿಯೆ ಬಿಸಿಯನೆಲ್ಲವ ತಿಂದು, ಎಸೆವಂಥ ಮಹವೀರನ
ಪೆಸರೊಳಗೊಪ್ಪಿದ ಹಸನಾದ ಗಿರಿಯೊಳು, ಕುಶಲದಿ ನಿಂತವನ
ನಸುಮುದ್ದು ಶ್ರೀವೆಂಕಟೇಶನ ಚರಣದ, ಬಿಸರುಹ ತೋರೆನಗೆ ||
ಪಾದ ನಾಲ್ಕನು ಮೇದಿನಿಯೊಳಗೂರಿಯೆ, ಆದರಿಸುತ ಬಪ್ಪ ಮೇ-
ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ, ಕಾದುಕೊಳ್ಳುತಲಿಪ್ಪನ
ಆದಿಯ ನಾಮಕ್ಕೆ ಅದ್ರಿಯನೊಡಗೊಂಡು ಹಾದಿಯನಿತ್ತವನ
ಸಾಧಿಸಿ ನಿಂತಿಹ ಶ್ರೀ ವೆಂಕಟೇಶನ, ಪಾದವ ತೋರೆನಗೆ ||
ಆದಿ ನಾರಾಯಣನೆಂಬ ಪರ್ವತವನ್ನು, ಭೇದಿಸಿ ನಿಂತವನ
ಸಾಧಿಸಿ ಮುಂದಣ ವೆಂಕಟಾದ್ರಿಯ ಮೇಲೆ ಪಾದವನೂರಿದನ
ಮೇದಿನಿಯೊಳಗುಳ್ಳ ಸಾಧು ಭಕ್ತರನೆಲ್ಲ, ಕಾದುಕೊಳ್ಳುತಲಿಪ್ಪ
ವಿನೋದ ಮೂರುತಿಯಾದ ಶ್ರೀ ವೆಂಕಟೇಶನ ಪಾದವ ತೋರೆನಗೆ ||
ಅತ್ತೆಯ ಒರಸೆಯ ಮತ್ತೆ ಅಳಿಯಗಾದ, ಪುತ್ರಿಯ ತಂದವನ
ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ, ನಿತ್ಯದೊಳಿರುತಿಪ್ಪನ
ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ, ಪುತ್ರನೆಂದೆನಿಸಿದನ
ಹತ್ತಿರ ಕರೆದೊಯ್ಯು ಪುರಂದರವಿಠಲನ, ನಿತ್ಯದಿ ತೋರೆನಗೆ ||
***

pallavi
dAsa shESAdrivAsa timmappana dAsarana karedoidu sAsira nAma vilAsa mUrtiya lEsAgi tOranage
caraNam 1
beraLu illadakaiyoLuNDu jIvisuvana shiradalandhada dEvana
uruva shApake tAnu kiridAgi iruvana sharadoLu dharisidavana
koraLa mAleya pesaroppida giriyoLu sthiravAgi nelasippana
karuNa vAridhi vEnkaTEshana caraNava karedOidu tOranage
caraNam 2
vAridhiyoLudisida nAriya madhyadi Eriya kuLitavana
vArija vadanadi tOrida sArada mUrondu pesaravana
mEruvinagradi Urida caraNava sAridavara jIvana
Urige karadoidu shrI vEnkaTEsha padAravindavanenage
caraNam 3
sOta mAniniyoLu jAtavAgiye mEle mAteya salahidana
nIti tappiya naDevAta bhakSakarannu ghAtisi taridavana
nUtanavAgiha nAma shailada mEle kAtaradoLu nintana
pAtaka nAshana shrI vEnkaTEshana rItiya tOranage
caraNam 4
rSiya makkaLigella hasivige guriyAgi vasha tappi naDevavana
basiroLagudisiye bisiyanellava tindu esevanda mahavIrana
besaroLagoppida hasanAda giriyoLu kushaladi nintavana
nasu muddu shrI vEnkaTEshana caraNada bisaruha tOranage
caraNam 5
pAda nAlkanu mEdiniyoLagUriye Adarisuta bappa
mElAda pAdava nAlgu antarikSada mElekAdu koLLutalippana
Adiya nAmakke adriyanoDa koNDu hAdiyanittavana
sAdhisi nintiha shrI vEnkaTEshana pAdava tOranage
caraNam 6
Adi nArAyaNanemba parvatavannu bhEdisi nintavana
sAdhisi mundana vEnkaTAdriya mEle pAdavanUridana
mAdiniyoLaguLLa sAdhu bhaktaranella kAdu koLLutalippa
vinOda mUrutiyAda shrI vEnkaTEshana pAdava tOranage
caraNam 7
atteya varaseya matte aLiyagAda putriya tandavana
uttamavAgiha magaLa sannidhiyalli nityadoLirutippana
battaleyAgiha satiyaLa satyakke putranendenisidana
hattira karedoyyu purandara viTTalana nityadi tOranage
***
ದಾಸ ಶೇಷಾದ್ರಿಯ ವಾಸ ತಿಮ್ಮಪ್ಪನ |ದಾಸನನು ಕರೆದೊಯ್ದು ||ಸಾಸಿರನಾಮ ವಿಲಾಸನ ಮೂರ್ತಿಯ |ಲೇಸಾಗಿ ತೋರೆನಗೆ ಪ
ಬೆರಳು ಇಲ್ಲದ ಕೈಯೊಳುಂಡು ಜೀವಿಸುವನ |ಶಿರದ ಅಂದದ ದೇವನ ||ಉರುವ ಶಾಪಕೆ ತಾನು ಕಿರಿದಾಗಿ ಇರುವನ |ಶಿರದೊಳು ಧರಿಸಿದನ ||ಕೊರಳ ಮಾಲೆಯ ಪೆಸರೊಪ್ಪಿದ ಗಿರಿಯೊಳು |ಸ್ಥಿರವಾಗಿ ನೆಲಸಿಪ್ಪನ ||ಕರುಣವಾರಿಧಿ ವೆಂಕಟೇಶನ ಚರಣವ |ಕರೆದೊಯ್ದು ತೋರೆನಗೆ 1
ವಾರಿಯೊಳುದಿಸಿದ ನಾರಿಯ ಮಧ್ಯದಿ |ಏರಿಯೆ ಕುಳಿತವನ ||ವಾರಿಜವದನದಿ ತೋರಿದ ಸಾರದಿ |ಮೂರೊಂದು ಪೆಸರವನ ||ಮೇರುವಿನಗ್ರದಿ ಊರಿದ ಚರಣವ |ಸಾರಿದವರ ಜೀವನ ||ಊರಿಗೆ ಕರೆದೊಯ್ದು ಶ್ರೀ ವೆಂಕಟೇಶ ಪ-||ದಾರವಿಂದವ ತೋರೆನಗೆ 2
ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ |ಮಾತೆಯ ಸಲಹಿದನ ||ನೀತಿ ತಪ್ಪಿಯೆ ನಡೆವ ವಾತಭಕ್ಷಕರನ್ನು |ಘಾತಿಸಿ ತರಿದವನ ||ನೂತನವಾಗಿಹ ನಾಮ ಶೈಲದ ಮೇಲೆ |ಕಾತರದೊಳು ನಿಂದನ ||ಪಾತಕನಾಶನ ಶ್ರೀವೆಂಕಟೇಶನ |ರೀತಿಯ ತೋರೆನಗೆ 3
ಋಷಿಯ ಮಕ್ಕಳನೆಲ್ಲ ಹಸಿವಿಗೆ ಗುರಿಮಾಡಿ |ವಶತಪ್ಪಿ ನಡೆವವನ ||ಬಸಿರೊಳಗುದಿಸಿಯೆ ಬಿಸಿಯನೆಲ್ಲವ ಅಂದು |ಎಸೆವ ಮಹಾವೀರನ ||ಪೆಸರೊಳಗೊಪ್ಪಿದ ಹಸನಾದ ಗಿರಿಯೊಳು |ಕುಶಲದಿ ನಿಂದವನ ||ನಸುಮುದ್ದು ಶ್ರೀ ವೆಂಕಟೇಶನ ಚರಣದ |ಬಿಸರುಹ ತೋರೆನಗೆ 4
ಪಾದನಾಲ್ಕನು ಮೋದಿನಿಯೊಳಗೂರಿಯೆ |ಆದರಿಸುತ ಬಪ್ಪನ ಮೇ ||ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ |ಕಾದು ಕೊಳ್ಳುತಲಿಪ್ಪನ ||ಆದಿಯ ನಾಮಕ್ಕೆ ಅದ್ರಿಯನೊಡಗೊಂಡು |ಹಾದಿಯನಿತ್ತವನ ||ಸಾಧಿಸಿ ಇಂತಹ ಶ್ರೀ ವೆಂಕಟೇಶನ |ಪಾದವ ತೋರೆನಗೆ 5
ಆದಿನಾರಾಯಣನೆಂಬ ಪರ್ವತನು |ಭೇದಿಸಿ ನಿಂತವನ ||ಸಾಧಿಸಿ ಮುಂದಣ ವೆಂಕಟಾದ್ರಿಯ ಮೇಲೆ |ಪಾದವನೂರಿದನ ||ಮೇದಿನಿಯೊಳಗುಳ್ಳ ಸಾಧುಭಕ್ತರನೆಲ್ಲ |ಕಾದುಕೊಳ್ಳುತಲಿಪ್ಪನ - ವಿ ||ನೋದ ಮೂರುತಿಯಾದ ಶ್ರೀ ವೆಂಕಟೇಶನ |ಪಾದವ ತೋರೆನಗೆ 6
ಅತ್ತೆಯ ವರಿಸೆಯೆ ಮೆತ್ತ ಅಳಿಯಗಾದ |ಪುತ್ರಿಯ ತಂದವನ ||ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ |ನಿತ್ಯದೊಳಿರುತಿಪ್ಪನ ||ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ |ಪುತ್ರನೆಂದೆನಿಸಿದನ ||ಹತ್ತಿರ ಕರೆದೊಯ್ದು ಪುರಂದರವಿಠಲನ |ನಿತ್ಯದಿ ತೋರೆನಗೆ 7
********