Showing posts with label ಳಳ- ಭಾವಗೀತೆ- ತಿಪ್ಪಾರಳ್ಳಿ ಬಲು ದೂರಾ ನಡೆಯಕ್ ಬಲು ದೂರಾ others TIPPARALLI BALU DOORA NADAYAAK BALU DPPRA. Show all posts
Showing posts with label ಳಳ- ಭಾವಗೀತೆ- ತಿಪ್ಪಾರಳ್ಳಿ ಬಲು ದೂರಾ ನಡೆಯಕ್ ಬಲು ದೂರಾ others TIPPARALLI BALU DOORA NADAYAAK BALU DPPRA. Show all posts

Friday, 26 March 2021

ತಿಪ್ಪಾರಳ್ಳಿ ಬಲು ದೂರಾ ನಡೆಯಕ್ ಬಲು ದೂರಾ others TIPPARALLI BALU DOORA NADAYAAK BALU DPPRA





ಸಾಹಿತ್ಯ – ಟಿ.ಪಿ.ಕೈಲಾಸಮ್
ಸಂಗೀತ -    -do-
ತಿಪ್ಪಾರಳ್ಳಿ ಬಲು ದೂರಾ
ನಡೆಯಕ್ ಬಲು ದೂರಾ
ಅಲ್ಲಿ ನಡೆಯೋಳ್ ನಮ್ ಬಸ್ವಿ ॥

ಬೋರೇಗೌಡನೆಂಬ ಗೌಡ ಬಂದ ಬೆಂಗಳೂರ್ಗೆ, ಬಂದ ಬೆಂಗಳೂರ್ಗೆ
ಬಳೇಪೇಟೆಮೇಲೆ ಹತ್ತಿ ಬರುತಿದ್ದಾಗ, ಗೌಡ ಬರುತಿದ್ದಾಗ
ಪೌಡರ್ ಗೀಡರ್ ಹಚ್ಚಿಕೊಂಡಾ ಮನುಷ್ಯಳೊಬ್ಬ್ಳು
ಕಣ್ಣು ಗಿಣ್ಣು ಮಿಟುಕ್ಸಿ ಗಿಟುಕ್ಸಿ ನೋಡಿ ನಕ್ಕಾಗ
ಆಗ ಬೇಡವ್ವಾ ಬಳೇಪೇಟೇ
ನಮಸ್ಕಾರ ನಗರ್ ಪೇಟೇ
ನಮ್ ತಿಪ್ಪಾರಳ್ಳಿ ಬಲು ದೂರಾ ॥೧॥

ತಮಾಶಿ ನೋಡೋದಕ್ಕೆ ಬೋರಾ ಬಂದ ಲಾಲ್ಬಾಗ್ ತೋಟಕ್ಕೆ
ಬೋರಾ ಲಾಲ್ಬಾಗ್ ತೋಟಕ್ಕೆ
ಹುಲೀನ್ ನೋಡಿ ಬರೇಹಾಕಿದ್ ದೊಡ್ಬೆಕ್ ಅಂದ್ಕೊಂಡ್ ಬೋರಾ
ದೊಡ್ಬೆಕ್ ಅಂದ್ಕೊಂಡಾ
ಬೋರಾ ನುಗ್ಗಿ ಹುಲೀ ಬೆನ್ ಸವರ್ಸ್ತಾ ಪುಸ್ ಪುಸ್ ಅಂತಿದ್ದಾ
ಬೋರಾ ಪುಸ್ ಪುಸ್ ಅಂತಿದ್ದಾ
ಹುಲೀ ರೇಗ್ಕೊಂಡ್ ಬೋರನ್ ಕೆಡುವ್ಕೊಂಡ್ ಹಲ್ಗಳ್ ಬಿಟ್ಟಾಗ
ಬೋರಾ ಹೆದರ್ಕೊಂಡ್ ಕಣ್ಣೀರ್ ಸುರಿಸ್ತಾ ಕೈಮುಗಿದ್ ಕಿರಿಚ್ದಾಗ
ಬುಟ್ಬುಡಪ್ಪಾ ಬೆಕ್ಕಿನ್ರಾಯಾ ನಮಸ್ಕಾರ್ ನನ್ನೊಡೆಯಾ
ನಮ್ ತಿಪ್ಪಾರಳ್ಳಿ ಬಲು ದೂರಾ ॥ ೨ ॥

ಬಸ್ವೀನ್ ಕರ್ಕೊಂಡ್ ಬಂದಾ ಬೋರಾ ವಿಜಯದಶಮೀಗೆ
ಬೋರಾ ವಿಜಯದಶಮೀಗೆ
ಅರಮನೆ ಗೇಟ್ ಮುಂದೆ ಅಂಬಾರಿ ಕಟ್ಟಿದ್ ಆನೆ ನೋಡ್ದ
ಬೋರಾ ಆನೆ ನೋಡ್ದ
ಬಸ್ವೀನ್ ಮೆಟ್ಟಿಲ್ ಮೇಲೆ ಹತ್ತಿಸ್ಬಿಟ್ಟು ತಾನು ಬುರ್ ಬುರ್ ನಕ್ಬಿಟ್ಟಾ
ಬೋರಾ ಬುರ್ ಬುರ್ ನಕ್ಬಿಟ್ಟಾ
ಮಾವ್ತಾ ಮುದ್ಕಾ ಗುರೀಗುರ್ ಗುಮ್ಮಾ ಇಲಿಯಂತ್ ಕಿರಿಚ್ಬಿಟ್ಟಾ
ಆನೆ ಕೊರಳ್ನಾ ಓಡಿಸ್ತಾ ನಡಸ್ತಾ ಹತ್ರ ಹೋಗ್ತಿದ್ದಾ
ಬೋರಾ ಹತ್ರ ಹೋಗ್ತಿದ್ದಾ
ಮನೇಗ್ ಹೋಗ್ರೋ ಮಾವುತ್ ಸಾಬ್ರ ಗಂಟೆ ಉಳಿಸ್ಕೊಂಡ್ ಗುರಿಕಾರಾ
ನಮ್ ತಿಪ್ಪಾರಳ್ಳಿ ಬಲು ದೂರಾ, ನಡೆಯಕ್ ಬಲು ದೂರಾ
ನಮ್ ತಿಪ್ಪಾರಳ್ಳಿ ಬಲು ದೂರಾ, ನಡೆಯಕ್ ಬಲು ದೂರಾ
ಆದ್ರೆ ಅಲ್ಲಿ ನಡೆಯೋಳ್ ನಮ್ ಬಸ್ವಿ ॥ ೩॥

ಗಾಯನ – ಸಿ ಅಶ್ವಥ್ ಮತ್ತು ಸಂಗಡಿಗರು
***