Showing posts with label ಪೂರ್ಣ ಸುಗುಣಾರ್ಣವನೇ ಅನಘ ಮಾಯಾರಮಣ rukmuneesha kalyana prasannashreenivasa. Show all posts
Showing posts with label ಪೂರ್ಣ ಸುಗುಣಾರ್ಣವನೇ ಅನಘ ಮಾಯಾರಮಣ rukmuneesha kalyana prasannashreenivasa. Show all posts

Thursday 5 August 2021

ಪೂರ್ಣ ಸುಗುಣಾರ್ಣವನೇ ಅನಘ ಮಾಯಾರಮಣ rukmuneesha kalyana ankita prasannashreenivasa

..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ರುಕ್ಮಿಣೀಶ ಕಲ್ಯಾಣ


ಪ್ರಥಮ ಅಧ್ಯಾಯ  ಪ್ರಾದುರ್ಭಾವ ಸಾರ


ಪೂರ್ಣ ಸುಗುಣಾರ್ಣವನೇ ಅನಘ ಮಾಯಾರಮಣ

ಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥ

ಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯ

ಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪ


ಆಲದೆಲೆ ಮೇಲ್ ಮಲಗಿ ಅದ್ವಿತೀಯನೇ ನೀನು

ಲೀಲೆಯಿಂ ನಿನ್ನೋಳ್ ನಿನ್‍ಅನಂತ ರೂಪಗಳ

ನಿಲ್ಲಿರಿಸಿ ಉದರದೊಳ್ ಜಗವನ್ನೆಲ್ಲವ ಧರಿಸಿ

ನೀ ಲಯಾಬ್ಧಿ ಸುಖವ ರಮೆಗಿತ್ತಿ ಸ್ವರತ 1

ಗುಣಕಾಲ ದೇಶ ಅಪರಿಚ್ಛಿನ್ನ ನಿನ್ನನ್ನು

ಗುಣತ್ರಯಮಾನಿ ಮಾ ಅನಘ ಸಂಸ್ತುತಿಸಿ

ಆನಂದಮಯ ನೀನು ಆನಂದ ಲೀಲೆಯಿಂ

ಸ್ವರ್ಣಾಂಡ ಪಡೆದು ಅದರೊಳ್ ಪೊಕ್ಕಿ 2

ಪದುಮನಾಭನೇ ನಿನ್ನ ನಾಭಿ ಕಮಲೋದ್ಭೂತ

ವಿಧಿಯ ಪ್ರತಿ ದಿನದಲ್ಲಿ ಅವತಾರ ಮಾಡಿ

ಸಾಧು ಸಾತ್ವಿಕರಿಗೆ ಅಭಯ ಸದ್ಗತಿ ಇತ್ತು

ಅಧಮ ಅಸುರರ ಸದೆದು ಭೂಭಾರ ಕಳೆದಿ 3

ಮೂಲಾವತಾರಂತರ್ಯಾಮಿ ವ್ಯಾಪ್ತಾಂಗಗಳು

ಎಲ್ಲವೂ ಪೂರ್ಣವು ನಿತ್ಯವು ಅಭಿನ್ನ

ಳಾಳುಕನೇ ನಿನ್ನಮಲ ರೂಪವಿಶೇಷವ

ಲೀಲೆಯಿಂದಲಿ ಪ್ರಕಟಮಾಡುವಿ ಆಗಾಗ 4

ವೇದ ಉದ್ಧಾರನೇ ಮತ್ಸ್ಯರೂಪನೇ ನಮೋ

ಮಧುಕೈಟಭಹಾರಿ ಹಯಗ್ರೀವ ಶರಣು

ಮಂಡಲಾದ್ರಿಯ ಪೊತ್ತ ಕೂರ್ಮ ಧನ್ವಂತರಿ

ಸುಧೆ ಸುರರಿಗುಣಸಿದ ಸ್ತ್ರೀರೂಪ ಪಾಹಿ 5

ಸುರಪಕ್ಷ ಅಜ ಅಜಿತ ಸಿಂಧುಜಾಪತಿ ಧರೋ -

ದ್ಧಾರ ವರಾಹ ನಮೋ ಪುರುಟಾಕ್ಷಹಾರಿ

ಶರಣು ತ್ರಯತ್ರಿಂಶದಕ್ಷರ ಮನುಗ ಶ್ರೀದ

ವರಚಕ್ರಧರಾ ಅಭಯ ಭೂಧರ ಶಾಮ 6

ಪ್ರೋದ್ಯಾರ್ಕ ನಿಭ ವರ್ತುಲ ನೇತ್ರತ್ರಯವು

ಹಸ್ತದ್ವಯ ಅಜಾನುದರಾರಿಧರ ಕೋಟಿ

ಆದಿತ್ಯಾಮಿತ ತೇಜ ಮಾಲಕ್ಷ್ಮೀಯುತ ವೀರ

ಉತ್ಕøಷ್ಟಬಲ ವಿಷ್ಣೋ ನರಸಿಂಹ ಶರಣು 7

ದ್ವಾತ್ರಿಂಶದಕ್ಷರ ಸುಮಂತ್ರ ಪ್ರತಿಪಾದ್ಯನೇ

ಹಿರಣ್ಯ ಕಶಿಪುವ ಸೀಳ್ದಿ ಪ್ರಹ್ಲಾದಪಾಲ

ಮೂರಡಿಯ ಕೇಳ್ದ ವಾಮನ ಬಲಿ ಬಂಧಕ

ಶರಣು ಶ್ರೀತ್ರಿವಿಕ್ರಮನೇ ಧೂರ್ಜನಕ ಪಾಹಿ 8

ದುಷ್ಟ ನೃಪರನ್ನಳಿದು ಭೂಭಾರ ಇಳಿಸಿದಿ

ಕೋಟಿ ಸೂರ್ಯಮಿತೋಜ್ವಲ ಪರಶುರಾಮ

ಸಾಟಿ ಇಲ್ಲದ ಹನುಮತ್ ಸೇವ್ಯ ಸೀತಾರಮಣ

ಪಟ್ಟಾಭಿರಾಮನಮೋ ರಾವಣ ಧ್ವಂಸೀ 9

ಭಜಿಸುವೆ ನರಸೇವ್ಯ ನಾರಾಯಣ ವ್ಯಾಸ

ಸ್ವಜನತೇಷ್ಟಪ್ರದನೇ ಪಾಹಿಮಾಂ ಶ್ರೀಶ

ಕುಜನಮೋಹಕ ನಮೋ ಸುರ ಸುಬೋಧಕ ಬುದ್ಧ

ದುರ್ಜನ ಸಂಹಾರಿ ನಮೋ ಶಿಷ್ಟೇಷ್ಟ ಕಲ್ಕಿ 10

ಕ್ರೂರ ದೈತ್ಯರ ಭಾರಿ ಭಾರ ಧರಿಯಿಂದಿಳಿಸಿದೆ

ವಾರಿಜಾಸನ ಶಿವಾದ್ಯಮರರ ಮೊರೆ ಕೇಳಿ

ಕ್ಷೀರಸಾಗರಶಯ್ಯ ಪುರುಷಸೂಕ್ತದಿ ಸ್ತುತ್ಯ

ಪರಮ ಪೂರುಷ ಶ್ರೀಶ ಪ್ರಾದುರ್ಭವಿಸಿದೆಯೋ 11

ವಸುದೇವ ದೇವಕೀಸುತನೆಂದು ತೋರಿದ

ವಾಸುದೇವನೇ ನಿನ್ನ ಸುಚರಿತ್ರೆ ಕೇಳೆ

ಶ್ರೀಶ ನಿನ್ನಯ ದಯದಿ ಕಲುಷ ಪರಿಹಾರವು

ಸುಶುಭ ಪಾವನಕರವು ಸರ್ವಭಕ್ತರಿಗೂ 12

ಕಲಿ ಕಲಿಪರಿವಾರ ದೈತ್ಯ ದುರ್ಜನರು

ಖಳರು ಇಳೆಯಲ್ಲಿ ನಾನಾ ರೂಪದಲಿ ಜನಿಸಿ

ಶೀಲ ಹರಿಭಕ್ತರ ಕಂಡು ಸಹಿಸದೇ ಬಹು

ಬಲಕಾರ್ಯ ವಂಚನೆಯಿಂದ ಪೀಡಿಸಿದರು 13

ಎಂಟನೇ ಮಗು ತನ್ನ ಮೃತ್ಯುವಾಗುವುದೆಂದು

ದುಷ್ಟ ಕಂಸನು ತಂಗಿ ಸಪತಿ ದೇವಕಿಯ

ಇಟ್ಟ ಸೆರೆಮನೆಯಲ್ಲಿ ಆರು ಮಕ್ಕಳ ಕೊಂದ

ಎಂಟ ನಿರೀಕ್ಷಿಸಿದ ಭಯ ದ್ವೇಷದಿಂದ 14

ಏಳನೇ ಗರ್ಭವು ವ್ಯಾಳದೇವನ ಅಂಶ

ಸ್ವಲ್ಪ ಕಾಲದಲೇ ಆ ಕ್ಷೇತ್ರದಿಂ ಹೊರಟು

ಚೆಲ್ವ ಗೋಕುಲದಲ್ಲಿ ರೋಹಿಣಿ ಉದರದಿಂ-

ದಲ್ಲಿ ಪುಟ್ಟಿದನು ನಿನ್ನ ನಿಯಮನದಿಂದ 15

ಸಾರಾತ್ಮಾ ನಿನ್ನಲ್ಲಿ ಪ್ರೇಮಾತಿಶಯದಿಂದ

ಸುರರು ಸೇವಿಸುವುದಕೆ ನಿನ್ನಿಚ್ಛೆ ದಯದಿ

ಧರೆಯಲ್ಲಿ ನೃಪಮುನಿಗೋಪ ಗೋಪಿಯರಾಗಿ

ಪರಿ ಪರಿ ವಿಧದಲ್ಲಿ ಕೃತ ಕೃತ್ಯರಾದರು 16

ದೇವಿ ಮಾಯಾದುರ್ಗೆ ನಿನ್ನಯ ಪ್ರಶಾಸನದಿ

ಅವತಾರಕ್ಕನುಸರಿಸಿ ಬಂದು ತೆರಳಿದಳು

ದೇವ ನಿನ್ನ ಕಲಾ ಸಂಯುಕ್ತ ಶೇಷನು

ಭವಿಸಿದನು ನಿನ್ನಣ್ಣ ಬಲರಾಮನೆಂದು 17

ನಿರ್ದೋಷ ನೀ ಸರ್ವ ಜಗನ್ನಿವಾಸನು ದೇವ -

ಕೀ ದೇವಿಯೋಳ್ ನಿವಸಿಸಿ ಪೊಳೆಯುವಾಗ

ವಿಧಿ ಭವಾದಿಗಳೆಲ್ಲ ಬಂದು ಸಂಸ್ತುತಿಸಿದರು

ಸತ್ಯಜÁ್ಞನಾನಂತ ಗುಣಪೂರ್ಣ ನಿನ್ನ 18

ಯಾವನು ಸರ್ವದಾ ಸರ್ವ ಬಹಿರಂತಸ್ಥ

ಯಾವನು ಸರ್ವ ಹೃತ್ ಯೋಮದೊಳು ಇರುವ

ಯಾವನಲ್ಲಿ ಸರ್ವವೂ ಸಮಾಹಿತವೋ

ಅವನೇವೇ ನೀ ಹರಿ ವಿಷ್ಣು ಕೃಷ್ಣ ಅವತಾರ 19

ಪ್ರಾಕೃತ ಶರೀರ ವಿಕಾರಗಳು ನಿನಗಿಲ್ಲ

ಪ್ರಾಕೃತ ಕಲಾವಿಲ್ಲ ಭಿನ್ನಾಂಶನಲ್ಲ

ಏಕಪ್ರಕಾರ ಅಕ್ಷರ ಪೂರ್ಣ ಅಜ ನಿನ್ನ

ಅಜ್ಞಾನದಲಿ ನರರು ಜನಿಸಿದಿ ಎಂಬುವರು 20

ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣ

ರತ್ನ ಕಿರೀಟ ಕುಂಡಲ ಪೊಳೆವ ಕೌಸ್ತುಭ

ಮಣಿ ಉರದಿ ಶ್ರೀವತ್ಸ ಚತುರ್ಭುಜವು ಪಾಂಚಜನ್ಯ

ಕೌಮೋದಕೀ ಸುದರ್ಶನ ಸರೋಜ 21

ಉದ್ದಾಮ ಕಾಂಚಂಗದ ಕಂಕಣಾದಿಗಳ

ಪೀತಾಂಬರ ಪಾದನೂಪುರ ಪೂರ್ಣೇಂದು

ಮುದ್ದು ಮುಖ ಮುಗುಳುನಗೆ ಸುಳಿಗೊರಳು ಶುಭನೋಟ

ಮೋದ ಚಿನ್ಮಯ ಹೀಗೆ ಪ್ರಾದುರ್ಭವಿಸಿದಿಯೋ 22

ಈ ರೂಪ ವಾಸುದೇವ ನೋಡಿ ಸ್ತುತಿಸಿದನು ನಿನ್ನ

ಅರಿಯೇ ನಾ ವರ್ಣಿಸಲು ನಿನ್ನ ಗುಣರೂಪ

ಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣ

ಶರಣು ಸರ್ವಾಶ್ರಯನೇ ಶ್ರೀಶ ಮಾಂಪಾಹಿ 23

ನಿನ್ನ ಮಹಾ ಪುರುಷ ಲಕ್ಷಣವ ದೇವಕಿಯು

ಕಾಣುತ್ತಾ ನರಲೋಕ ವಿಡಂಬನಕ್ಕಾಗಿ

ತನ್ನ ಗರ್ಭಗನಾದಿ ಎಂದರಿತು ಭಕ್ತಿಯಿಂ

ಸನ್ನತಿಯ ಮಾಡಿದಳು ಆ ಪೂರ್ವಪೃಷ್ಣಿ 24

ದೇವಕಿಯ ಸ್ತುತಿ ಕೇಳಿ ಯುಕ್ತ ಮಾತುಗಳಾಡಿ

ದೇವ ನಿನ್ನೀಚ್ಛಾ ಶಕ್ತಿಯಿಂದಲೇವೇ

ಪವಡಿಸೆ ನರಶಿಶುಪೋಲ್ ಪಿತ ನಿನ್ನ ಎತ್ತಿಕೊಂಡು

ತೀವ್ರ ಹೊರಟನು ವೈಜಕೆ ನೀ ಪೇಳಿದಂತೆ 25

ಶೇಷದೇವನು ಹೆಡೆಯ ಕೊಡೆಯಂತೆ ಪಿಡಿಯಲು

ಆಶ್ಚರ್ಯವಲ್ಲ ನದಿ ಮಾರ್ಗ ಬಿಟ್ಟಿದ್ದು

ಯಶೋದೆ ಸುಪ್ತಿಯಲಿರೆ ಮಗ್ಗುಲಲಿ ಮಲಗಿಸಿ

ವಸುದೇವ ಎತ್ತಿಪೋದನು ಅವಳ ಮಗಳ 26

ಯಶೋದೆಯ ಹೆಣ್ಣುಮಗು ಶಿಶುರೂಪ ದುರ್ಗೆಯ

ವಸುದೇವ ತಂದು ದೇವಕಿ ಬದಿ ಇಡಲು

ಪ್ರಸವ ಸುದ್ದಿಯ ಕೇಳಿ ಕಂಸ ಆರ್ಭಟದಿಂದ

ಶಿಶುವು ಹೆಣ್ಣಾದರೂ ಎತ್ತಿ ಶಿಲೆಯ ಹೊಡೆದ 27

ಅಂಬರದಿ ದಿವ್ಯ ರತ್ನಾಭರಣ ಭೂಷಿತೆ

ಕಂಬು ಚಕ್ರಾದಿಧರೆ ಅಷ್ಟ ಮಹಾಭುಜೆಯು

ಅಂಬಾ ಮಹಾದುರ್ಗಾ ಭಗವತೀ ಮಯಾದೇವಿ

ಅಂಭ್ರಣೀ ನಿಂತಳು ದೇವಗಾಯಕರು ಸುತ್ತಿಸೇ 28

ಕಂಸನ್ನ ಎಚ್ಚರಿಸಿ ಭಗವತಿ ತೆರಳಲು

ಕಂಸನು ಪರಮ ವಿಸ್ಮಿತನಾಗಿ ಬೇಗ

ವಸುದೇವ ದೇವಕಿಯ ನಿಗೂಢ ಬಂಧನ ಬಿಡಿಸಿ

ಅಸುರ ಮಂತ್ರಿಗಳೊಡೆ ಆಲೋಚಿಸಿದನು 29

ನಂದ ಯಶೋದೆಯು ತಮ್ಮ ಶಿಶು ನೀನೆಂದು

ನಂದ ಆನಂದದಿ ವಿಪ್ರ ವೈದಿಕರ ಕರೆದು

ಅಂದದಿ ಪಿತೃ ದೇವತಾರ್ಚನೆಗಳ ಮಾಡಿಸಿ

ಚೆಂದದಿ ಅಲಂಕೃತ ಧೇನುಗಳ ಕೊಟ್ಟ 30

ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತ

ಜಯತು ಪೂರ್ಣಪ್ರಜ್ಞ ಹೃತ್ ಪದ್ಮ ಸಂಸ್ಥ

ಜಯತು ಜಗಜ್ಜನ್ಮಾದಿಕರ್ತ ಜಗನ್ನಾಥ

ಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 31


-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -


ದ್ವಿತೀಯ ಅಧ್ಯಾಯ  ಬಾಲಲೀಲಾಸಾರ


ಪೂರ್ಣ ಸುಗುಣಾರ್ಣವನೇ ಅನಘ ಮಾಯಾರಮಣ

ಆನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥ

ಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯ

ಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪ


ಸಣ್ಣ ಶಿಶುರೂಪ ನೀ ಪೂತನೀ ಶಕಟ

ತೃಣಾವರ್ತರ ಕೊಂದಿ ನಮೋ ಅಮಿತಶೌರಿ

ನಿನ್ನ ಸುಂದರ ಮುಖದಿ ಪ್ರಪಂಚ ಗಗನಾದಿಗಳ

ಕಾಣಿಸಿದಿ ಮಾತೆಗೆ ನಮೋ ವಿಶ್ವ ವಿಷ್ಣೋ 1

ಗರ್ಗಾದಿ ವಿಬುಧರು ಯೋಗ್ಯ ಸಜ್ಜನರೆಲ್ಲ

ಅಗಣಿತ ಮಹಿಮ ಶ್ರೀ ವಿಷ್ಣು ನೀ ಎಂದು

ಭಕುತಿಯಿಂದಲಿ ನಿನ್ನ ಬಾಲಲೀಲೆ ನೋಡೆ

ಕಾಕು ದುರ್ಮತಿಗಳು ದ್ವೇಷ ಬೆಳೆಸಿದರು 2

ಕಂಸ ಜರಾಸಂಧ ಕಾಲಯವನ ಕಲಿಯ

ಅಸುರ ಭೃತ್ಯರು ಬಂದು ನಿನ್ನ ನಿನ್ನವರನ್ನ

ಹಿಂಸಿಸಬೇಕೆಂದು ಆಗಾಗ ಯತ್ನಿಸಲು

ದ್ವಂಸ ಮಾಡಿದಿ ಅವರನ್ನ ಸಜ್ಜನ ಪೊರೆದಿ 3

ವತ್ಸ ಬಕ ಅಘ ಧೇನುಕ ಪ್ರಲಂಬಾರಿಷ್ಟ

ಕೇಶಿ ಕಮಲಯ ಪೀಡಾ ಮುಷ್ಟಿಕ ಚಾಣೂರ

ಕಂಸಾದಿ ಅಸುರರ ಸದೆದು ಮುದ್ದೆಯ ಮಾಡಿ

ವಸುಮತಿಯ ಸಾಧುಗಳ ಭಯ ನಿವಾರಿಸಿದಿ 4

ಬಲವಂತ ರಾಮ ಸಹ ಅಮಿತ ಪೌರುಷ ನೀನು

ಬಲಿಷ್ಠ ಅಸುರರ ಅಳಿದು ಭೂಭಾರ ಇಳಿಸಿ

ಶೀಲ ಭಕ್ತರಿಹಪರಸುಖ ಒದಗಿಸಿದಿ

ಬಲರಾಮ ಕೃಷ್ಣ ನಮೋ ಫಣಿಪ ವಿಷ್ಣೋ 5

ಯಮಳಾರ್ಜುನೋದ್ಧಾರ ದಾವಾಗ್ನಿಯಿಂದ ನೀ

ಸಂರಕ್ಷಿಸಿದಿ ವೃಜಗೋಪ ಜನರ

ನಿನ್ನ ಮಹಿಮೆ ಏನೆಂಬೆ ವರುಣನಾಲಯದಿಂದ

ಸಮ್ಮುದದಿ ನಂದನ್ನ ಕರತಂದಿ ಅಜಿತ 6

ನಾಗ ಪತ್ನೀಯರು ಬಂದು ನಮಸ್ತುಭ್ಯಂ

ಭಗವತೇ ಪೂರುಷಾಯ ಮಹಾತ್ಮನೇ ಎಂದು

ಅಗುಣ ಅವಿಕಾರ ನಿನ್ನನ್ನು ಭಕ್ತಿಯಿಂ ಸ್ತುತಿಸೆ

ನಾಗನೂ ಸಹ ಸ್ತುತಿಸೆ ಅನುಗ್ರಹ ಮಾಡಿದಿಯೋ 7

ಶ್ರೀಧರನೇ ನಿನ್ನಯ ವೇಣುನಾದದ ಸುಧೆಯ

ಮಾಧುರ್ಯ ರಸವನ್ನು ವರ್ಣಿಸಲಶಕ್ಯ

ಶ್ರೀದೇವಿ ಕೊಳಲÉೂಳು ಪ್ರವೇಶಿಸಿ ನಿನ್ನ ಅರ-

ವಿಂದ ಮುಖದ ಆನಂದ ಸವಿದು ಸುಖಿಸುವಳು 8

ಪಾಲು ಬೆಣ್ಣೆ ಪ್ರಿಯ ಕಳ್ಳ ಮುದ್ದು ಕೃಷ್ಣ

ಗೊಲ್ಲತಿಯರ ಸಹ ಸಲ್ಲಾಪಿಸುವ ಎಂಬ

ಸೊಲ್ಲಿನ ತತ್ವವ ಬಲ್ಲವರೇ ಬಲ್ಲರು

ಫಲಿ ನಮೋ ಪಾಲ್ಬೆಣ್ಣೆ ಗೋಪಿಜನ ಪ್ರಿಯ 9

ಅತ್ಯಲ್ಪ ಅಸುರ ಆವೇಶ ಸುರರಿಗೆ ಎಂದು

ಮುಖ್ಯ ವಾಯು ಅಖನರ್ಮ ಸಮಗಿಲ್ಲ

ಹೊಯ್ಯಿಸೆ ಮಳೆ ಶಕ್ರ ನೀ ಲೀಲೆಯಂ ಗೌರಿ ಎತ್ತಿ

ಕಾಯ್ದಿ ಗೋಜನಗಳ ಅನ್ನದ ಅನ್ನಾದ 10

ಭಕ್ತಿ ಉಕ್ಕಿ ನಿನ್ನಲ್ಲಿ ಕೂಡಿ ಕ್ರೀಡಿಸುವ

ಸದ್ಧರ್ಮವರ್ತಿಗಳ ಸ್ವಸ್ವಯೋಗ್ಯತೆಯಿಂ

ರಾಧಾದಿ ಗೋಪಿಗಳ ಅನಂದ ಉಕ್ಕಿಸಿ ಸ್ವರತ

ಇಂದಿರಾಪತಿ ಗೋವಿಂದ ಗೋ ಕಾಯ್ದ 11

ಅಧಿಕಾರಿ ತ್ರಿವಿಧರಲಿ ತಾರತಮ್ಯ ಉಂಟು

ಅದರಂತೆ ಭಕ್ತಿಯಲಿ ಅವರೋಚ್ಯ ಉಂಟು

ಭಕ್ತಿ ಸಾಧನದಂತೆ ಯೋಗ್ಯ ಸುಖ ಓದಗಿಸಿದಿ

ಮಂದಗಮನೆಯರಿಗೆ ರಾಸಕ್ರೀಡೆಯಲಿ 12

ನಂದ ವ್ರಜ ಗೋಕುಲ ಮಥುರೆ ಬೃಂದಾವನ

ಚಂದ್ರ ಯಮುನೆ ವನ ಲತೆ ಪುಷ್ಪ ವೃಕ್ಷ

ಸಿಂಧು ದ್ವಾರಕೆ ವಂಶಯಷ್ಠಿ ಗೋ ಸರ್ವರಿಗೂ

ವಂದಿಸುವೆ ಕೃಷ್ಣ ಸಂಬಂಧಿಗಳು ಎಂದು 13

ವಿದ್ಯಾಧರ ಸುದರ್ಶನನು ಶಾಪದಿ ಅಹಿಯು

ನಂದನ್ನ ಕಾಯ್ದಿ ಆ ಅಹಿಯ ಬಾಯಿಂದ

ಪಾದ ಸ್ಪರ್ಶವ ಕೊಟ್ಟು ಶಾಪ ವಿಮೋಚನೆ ಮಾಡಿ

ಸ್ತುತಿಸಿ ಕೊಂಡಿಯೋ ಮಹಾಪೂರುಷ ಸತ್ಪತಿಯೇ 14

ಅಕ್ರೂರ ಕುಬ್ಜ ಉದ್ಧವಗೆ ಅನುಗ್ರಹಿಸಿ

ದುರುಳ ವ್ರಜನ ಶಿರವ ಕತ್ತರಿಸಿ ಬಿಸುಟು

ವಿಪ್ರ ನಾರಿಯರ ಅನ್ನ ಉಂಡು ಒಲಿದಂತೆ

ಕ್ಷಿಪ್ರ ವಾಯಕ ಗೊಲಿದಿ ಮಾಲಾಕಾರನಿಗೂ 15

ಬಲಿಷ್ಠ ಮಲ್ಲಾದಿಗಳ ಕುಟ್ಟಿ ಹೊಡೆದು ಕೊಂದು

ಖಳ ದುಷ್ಟ ಕಂಸನ್ನ ದ್ವಂಸ ಮಾಡಿದಿಯೋ

ಒಳ್ಳೇ ಮಾತಿಂದ ಮಾತಾಪಿತರ ಆಶ್ವಾಸಿದಿ

ಬಲರಾಮ ಕೃಷ್ಣ ನಮೋ ಪಾಹಿ ಸಜ್ಜನರ 16

ಉಗ್ರಸೇನಗೆ ರಾಜ್ಯವನು ಒಪ್ಪಿಸಿ ನೀನು

ಗುರುವಿನ ಮೃತ ಪುತ್ರನ್ನ ಕರೆತಂದಿ

ಜರಾಸುತನ ಸಹ ಯುದ್ಧ ಮಾಡಿ ಬೇಗನೇ ನೀನು

ನಿರ್ಮಾಣಿಸಿದಿ ದ್ವಾರಕೆಯ ಕಡಲ ಮಧ್ಯ 17

ಈರಾರು ಯೋಜನವು ದ್ವಾರಕಾ ದುರ್ಗವು

ಸ್ಫುರಧೃಮ ಲತೋದ್ಯಾನ ವಿಚಿತ್ರೋಪ ವನಗಳ್

ಪುರಟ ಶೃಂಗೋನ್ನತ ಸ್ಫಟಿಕಾ ಅಟ್ಟಾಳಗಳ್ ಗೋ -

ಪುರಗಳು ನವರತ್ನ ಸ್ವರ್ಣಮಯ ಗೃಹಗಳು 18

ಮುಚುಕುಂದ ಶಯನಿಸಿದ ಗುಹೆಯೋಳ್ ನೀ ಪೋಗೆ

ನೀಚ ದುರ್ಮತಿ ಕಾಲಯವನ ಹಿಂಬಾಲಿಸಿ

ಮುಚುಕುಂದನ್ನ ನೋಡಿ ನೀನೇವೇ ಎಂದು ಹೊಡಿಯೇ

ಭಸ್ಮವಾದನು ಅಲ್ಲೇ ರಾಜ ಕಣ್ತೆರೆದು 19

ನೃಪನು ನಿನ್ನ ಸ್ತುತಿಸಿ ಅನುಗ್ರಹ ಪಡೆದು

ಸುಪವಿತ್ರ ನರನಾರಾಯಣ ಕ್ಷೇತ್ರಯೈದೇ

ಉಪಾಯದಿಂದಲಿ ಮಾಗಧನ ಸಮ್ಮೋಹಿಸಿ

ನೀ ಬಲರಾಮ ಸಹ ಸ್ವಪುರ ಸೇರಿದಿಯೋ 20

ವನಜಸಂಭವ ಪ್ರೇರಿಸಲು ರೇವತರಾಜ

ಅನರ್ತ ದೇಶಾಧಿಪತಿಯು ಶ್ರೀಮಂತ

ತನ್ನ ಸುತೆ ರೇವತಿಯು ನಮ್ಮ ಬಲರಾಮನಿಗೆ

ಧನ್ಯ ಮನದಲಿ ಕೊಟ್ಟು ಮದುವೆ ಮಾಡಿದನು 21

ಸುಧಾ ಕಲಶವ ಗರುಡ ಕಿತ್ತಿ ತಂದಂತೆ

ಚೈz (incomplete)

***