ಪುರಂದರದಾಸರು
ನಿನ್ನ ಮಗನೇನೇ ಗೋಪಿ ಗೋಪಮ್ಮ |ನಿನ್ನ ಮಗನೇನೆ ಗೋಪಿ? ಪ
ಚೆನ್ನಾರ ಚೆಲುವ ಉಡುಪಿಯ ಕೃಷ್ಣ ಬಾಲ |ನಿನ್ನ ಮಗನೇನೆ ಗೋಪಿ? ಅ.ಪ
ಕಟವಾಯ ಬೆಣ್ಣೆ ಕಾಡಿಗೆಗಣ್ಣುಕಟಿಸೂತ್ರ|ಪಟವಾಳಿಕೈಪಕೊರಳೊಳು ಪದಕ ||ಸಟೆಯಲ್ಲ ಬ್ರಹ್ಮಾಂಢ ಹೃದಯದೊಳಿರುತಿರಲು |ಮಿಟಿಮಿಟಿ ನೋಡುವ ಈ ಮುದ್ದು ಕೃಷ್ಣ 1
ಮುಂಗುರುಳ ಮುಂಜೆಡೆ ಬಂಗಾರದರಳೆಲೆ |ರಂಗಮಾಣಿಕದ ಉಂಗುರವಿಟ್ಟು ||ಪೊಂಗೆಜ್ಜೆ ಕಾಲಲಂದುಗೆ ಘಿಲ್ಲುಘಿಲ್ಲೆನುತ |ಅಂಗಳದೊಳಗಾಡುತಿಹ ಮುದ್ದು ಕೃಷ್ಣ 2
ಹರಿವ ಹಾವನೆ ಕಂಡು ಹೆಡೆಹಿಡಿದು ಆಡುವ |ಕರುವಾಗಿ ಆಕಳ ಮೊಲೆಯುಣ್ಣುವ ||ಅರಿಯದಾಟವ ಬಲ್ಲ ಅಂತರಂಗದ ಸ್ವಾಮಿ |ಧರೆಯೊಳಧಿಕನಾದ ಪುರಂದರವಿಠಲಯ್ಯ 3
***

pallavi
ninna maganEnE gOpi gOpamma ninna maganEnE gOpi
anupallavi
cennAra celuva uDupiya krSNana bAla ninna maganEnE gOpi
caraNam 1
kaTavAya beNNe gADigegaNNu kaTisutra paTavALi kaipa koraLoLu padaka
saTeyalla brahmANDa hrdayadoLitiralu miTimiTi nODuva I muddu krSNa
caraNam 2
munguruLa munjeDe bangAradaraLele rangumANikada unguraviTTu
pongejje kAlalanduge ghillu ghillenuta angaLadoLagADutiha muddu krSNa
caraNam 3
hariva hAvane kaNDu heDe hiDidu Aduva karuvAgi AkaLa moleyuNNuva
ariyadATava balla antarangada svAmi dhareyoLadhikanAda purandara viTTalayya
***