Showing posts with label ನಿನಗೆ ನೀನೇ ಕೃಷ್ಣ ದಯಮಾಡಿ ಸಲಹೋಎನಗೊಂದು ಸಾಧನ ಲೇಶ ಕಾಣಬರದೋ shree krishna. Show all posts
Showing posts with label ನಿನಗೆ ನೀನೇ ಕೃಷ್ಣ ದಯಮಾಡಿ ಸಲಹೋಎನಗೊಂದು ಸಾಧನ ಲೇಶ ಕಾಣಬರದೋ shree krishna. Show all posts

Wednesday, 1 September 2021

ನಿನಗೆ ನೀನೇ ಕೃಷ್ಣ ದಯಮಾಡಿ ಸಲಹೋಎನಗೊಂದು ಸಾಧನ ಲೇಶ ಕಾಣಬರದೋ ankita shree krishna

 ..

ನಿನಗೆ ನೀನೇ ಕೃಷ್ಣ ದಯಮಾಡಿ ಸಲಹೋಎನಗೊಂದು ಸಾಧನ ಲೇಶ ಕಾಣಬರದೋ ಪ


ಸ್ನಾನವ ಮಾಡಿ ನಿನ್ನ ಸಮತಿಸುವೆನೆಂದರೆಸ್ನಾನ ಮಾಡದೆ ಕಪ್ಪೆ ಸರ್ವಕಾಲದಲೀಧ್ಯಾನವ ಮಾಡಿ ನಿನ್ನ ಸಮತಿಸುವೆನೆಂದರೆಧ್ಯಾನವ ಬಕ ಸರ್ವಕಾಲದಲೀ 1


ಜಪವÀ ಮಾಡಿ ನಿನ್ನ ಸಮತಿಸುವೆನೆಂದರೆಜಪದಲ್ಲಿ ಮನಸು ಎನ್ನಾಧೀನವÉೀನಯ್ಯಉಪವಾಸವೆ ನಿನ್ನಾ ಸಾಧನವೆಂದರೆಉಪವಾಸವಿರದೆ ಆ ಉರಗ ಸರ್ವ ಕಾಲದಲೀ 2


ಸನ್ಯಾಸವೇ ನಿನ್ನ ಸಾಧನವೆಂದರೆಸನ್ಯಾಸವಿರದೇ ಆ ರಾವಣಗೇಕನ್ಯಾದಾನವೆ ನಿನ್ನಾ ಸಾಧನವೆಂದರೆಕನ್ಯಾದಾನ ಮಾಡಾನೆ ಕಂಸಗೆ ಜರಾಸಂಧ3


ಜ್ಞಾತಿತ್ವವೆ ನಿನ್ನ ಸಾಧನವೆಂದರೆದಿತಿ ಕಶೆಪಾಸುತರು ದೈತ್ಯರಾಗಿಹರೇಭೂತಿಯೆ ನಿನ್ನ ಸಾಧನವೆಂದರೆಭೂತಿ ಇರದೆ ಆ ದುರುಳ ದುರ್ಯೋಧನಗೆ 4


ಬಂಧುತ್ವವೇ ನಿನ್ನ ಸಾಧನವೆಂದರೆಬಂಧುತ್ವವಿರದೇ ಆ ಶಿಶುಪಾಲಗೆಒಂದೂ ಸಾಧನ ಕಾಣೇ ಉಚಿತಾವೇ ಶ್ರೀಕೃಷ್ಣಎಂದೆಂದಿಗೂ ನಿನ್ನ ದಾಸನೆನಿಸೊ 5

***