Showing posts with label ವ್ಯಾಸರಾಯರ ಚರಣ purandara vittala suladi ವ್ಯಾಸರಾಜ ಸುಳಾದಿ VYASARAYARA CHARANA VYASARAJA SULADI. Show all posts
Showing posts with label ವ್ಯಾಸರಾಯರ ಚರಣ purandara vittala suladi ವ್ಯಾಸರಾಜ ಸುಳಾದಿ VYASARAYARA CHARANA VYASARAJA SULADI. Show all posts

Sunday, 8 December 2019

ವ್ಯಾಸರಾಯರ ಚರಣ purandara vittala suladi ವ್ಯಾಸರಾಜ ಸುಳಾದಿ VYASARAYARA CHARANA VYASARAJA SULADI

Audio by Mrs. Nandini Sripad

ಶ್ರೀ ಪುರಂದರದಾಸಾರ್ಯ ವಿರಚಿತ

ಶ್ರೀವ್ಯಾಸರಾಜರ ಸ್ತೋತ್ರ ಸುಳಾದಿ

ರಾಗ ತಿಲಂಗ್

ಧ್ರುವತಾಳ

ವ್ಯಾಸರಾಯರ ಚರಣಕಮಲ ದರ್ಶನವೆನ -
ಗೇಸು ಜನ್ಮದ ಸುಕೃತ ಫಲ ದೊರಕಿತೊ ಎನ್ನ
ಸಾಸಿರ ಕುಲಕೋಟಿ ಪಾವನವಾಯಿತು
ಶ್ರೀಶನ ಭಜಿಸುವುದಕ್ಕಧಿಕಾರಿ ನಾನಾದೆ
ವಾಸುದೇವನ ಪೂಜೆಗಧಿಕಾರಿ ನಾನಾದೆ
ದೋಷರಹಿತನಾದೆ ಪುರಂದರವಿಠ್ಠಲನ್ನ
ದಾಸರ ಕರುಣವು ಎನ್ನ ಮೇಲಿರಲಿಕ್ಕೆ ॥ 1 ॥

ಮಟ್ಟತಾಳ

ಗುರು ಉಪದೇಶವಿಲ್ಲದ ಜ್ಞಾನವು
ಗುರು ಉಪದೇಶವಿಲ್ಲದ ಸ್ನಾನವು
ಗುರು ಉಪದೇಶವಿಲ್ಲದ ಧ್ಯಾನವು
ಗುರು ಉಪದೇಶವಿಲ್ಲದ ಜಪವು
ಗುರು ಉಪದೇಶವಿಲ್ಲದ ತಪವು
ಗುರು ಉಪದೇಶವಿಲ್ಲದ ಮಂತ್ರ
ಗುರು ಉಪದೇಶವಿಲ್ಲದ ತಂತ್ರ
ಉರಗನ ಉಪವಾಸದಂತೆ ಕಾಣಿರೋ
ಗುರು ವ್ಯಾಸರಾಯನ ಕರುಣದಿಂದಲಿ ಎನಗೆ
ಪುರಂದರವಿಠ್ಠಲನೇ ಪರನೆಂದರುಹಿ
ದುರಿತಭಯವೆಲ್ಲ ಪರಿಹರಿಸಿದನಾಗಿ
ವರ ಮಹಾಮಂತ್ರ ಉಪದೇಶಿಸಿದನಾಗಿ 
ವರ ಮಹಾಮಂತ್ರ ಉಪದೇಶಿಸಿದನಾಗಿ ॥ 2 ॥

ರೂಪಕತಾಳ

ಅಂಕಿತವಿಲ್ಲದ ದೇಹ ನಿಷೇಧ
ಅಂಕಿತವಿಲ್ಲದ ಕಾವ್ಯ ಶೋಭಿಸದು
ಅಂಕಿತವಿಲ್ಲದಿರಬಾರದೆಂದು ಚ -
ಕ್ರಾಂಕಿತವನ್ನು ಮಾಡಿ ಎನ್ನಂಗಕ್ಕೆ 
ಪಂಕಜನಾಭ ಪುರಂದರವಿಠ್ಠಲನ್ನ
ಅಂಕಿತ ಎನಗಿತ್ತು ಗುರುವ್ಯಾಸ ಮುನಿರಾಯಾ ॥ 3 ॥

ಝಂಪೆತಾಳ

ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆ ಮೊದಲಾದ
ನ್ಯಾಯ ಗ್ರಂಥವ ರಚಿಸಿ ತನ್ನ ಭಕ್ತರಿಗಿತ್ತು
ಮಾಯಾವಾದಿ ಮೊದಲಾದ ಇಪ್ಪತ್ತೊಂದು ಕುಭಾಷ್ಯಕ
ಬಾಯಿ ಮುದ್ರಿಸಿದ ಮಧ್ವರಾಯರ ಕರುಣದಿಂದ
ಶ್ರೀಯರಸ ಪುರಂದರವಿಠ್ಠಲನ್ನ ದಾಸರೊಳು
ನಾಯಕನೆಂದೆನಿಸಿ ಗುರುವ್ಯಾಸ ಮುನಿರಾಯ ॥ 4 ॥

ತ್ರಿವಿಡಿತಾಳ

ಶೇಷಾವೇಶ ಪ್ರಹ್ಲಾದನವತಾರವೆನಿಸಿದೆ
ವ್ಯಾಸರಾಯನೆಂಬೊ ಪೆಸರು ನಿನಗಂದಂತೆ
ದೇಶಾಧಿಪಗೆ ಬಂದ ಕುಹಯೋಗವನು ನೂಕೀ
ನೀ ಸಿಂಹಾಸನವೇರಿ ಮೆರೆದೆ ಜಗವರಿಯೆ
ವ್ಯಾಸಾಬ್ಧಿಯನು ಬಿಗಿಸಿ ಕಾಶೀದೇಶದೊಳಗೆಲ್ಲ
ಭಾಸುರ ಕೀರ್ತಿಯನು ಪಡೆದೆ ನೀನು ಗುರುರಾಯ
ವಾಸುದೇವ ಪುರಂದರವಿಠ್ಠಲನ್ನ ದಾಸರೊಳು
ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ॥ 5 ॥

ಧ್ರುವತಾಳ

ಸಿರಿ ನಾರಾಯಣಯೋಗಿ ಶ್ರೀಪಾದರಾಯರಲ್ಲಿ
ವರವಿದ್ಯಾಭ್ಯಾಸವ ಮಾಡಿದೆ ನೀನು
ಧರಿಯೊಳು ವಿಜಯೀಂದ್ರ ವಾದಿರಾಜರೆಂಬ
ಪರಮಶಿಷ್ಯರ ಪಡೆದು ಮೆರದೆ ಕೀರುತಿಯಲ್ಲಿ
ಸುರೇಂದ್ರರು ಪುತ್ರಭಿಕ್ಷವ ಬೇಡೆ ವಿಜೇಂದ್ರನ್ನ
ಕರುಣಿಸಿ ಮಠವನುದ್ಧರಿಸಿದ ಕಾರಣ
ಗುರುವ್ಯಾಸರಾಯರೆ ಪರಮ ಗುರುಗಳು ಕಾಣಿರೊ
ಪುರಂದರವಿಠ್ಠಲ ಪರದೈವ ಜಗಕೆ ॥ 6 ॥

ತ್ರಿವಿಡಿತಾಳ

ವರಮಧ್ವಮತವೆಂಬೊ ಸಾಗರದೊಳು ಅವ -
ತರಿಸಿದೆ ಪೂರ್ಣ ಚಂದ್ರಮನಂತೆ ನೀನು
ಧರಿಯೊಳು ಬ್ರಹ್ಮಣ್ಯರ ವರಕುವರನೆಂದೆನಿಸಿದೆ ನೀನು
ಪುರಂದರವಿಠ್ಠಲನ್ನ ಕರುಣಾಕರ ಕರುಣವ ಪಡೆದೆ ॥ 7 ॥

(ಪಾಠಾಂತರ)
(ಪರನೆಂದು ಅರುಹೆ ದುರಿತಗಳೆಲ್ಲ ಪರಿಹರಿಸಿಕೊಂಡೆ ನಾನು) 

ಅಟ್ಟತಾಳ

ಈಸು ಮುನಿಗಳು ಇದ್ದರೇನು ಮಾಡಿದರಯ್ಯ
ವ್ಯಾಸರಾಯ ಮಧ್ವಮತವನುದ್ಧರಿಸಿದ
ಕಾಶಿ ಗದಾಧರ ಮಿಶ್ರನ ಕೂಡ
ವಾದವ ಮಾಡಿ ಸೋಲಿಸಿ
ದಾಸನ್ನ ಮಾಡಿಕೊಂಡೆ ಧಾರುಣಿಯೊಳ
ರಾಸಿಂಹ ಮಿಶ್ರನೆ ಯೋಗಿ ಮೊದಲಾದ ಪಕ್ಷ
ಕಾಶೀ ಮಿಶ್ರ ಪಕ್ಷಧರ ವಾಜಿಪೇಯ ಲಿಂಗಣ್ಣನ ವಿ -
ದ್ವಾಂಸರು ನೂರೆಂಟು ಮಂದಿ ಬರಲು
ಜಯಿಸಿದೆ ಜಯಪತ್ರಿಕೆಯ ಕೊಂಡು ಮೆರೆದೆ
ವಾಸುದೇವ ಗೋಪಾಲ ಕೃಷ್ಣಗೆ ವಿ -
ಭೂಷಣವ ಮಾಡಿ ಹಾಕಿಸಿದೆ
ಶ್ರೀಶ ಪುರಂದರವಿಠ್ಠಲನ್ನ 
ಈಶ ಬೊಮ್ಮ ಇಂದ್ರಾದಿಗಳಿಗೆ ಈಶನೆಂದು ಡಂಗುರವ 
ಪೊಯಿಸಿ ಮೆರೆದೆ ಜಗವರಿಯೆ ದಾಸರೊಳು 
ನೀ ಸಮರ್ಥನು ಸಂನ್ಯಾಸಿ ಶಿರೋಮಣಿ ॥ 8 ॥

ಆದಿತಾಳ

ಮಾನಸ ಪೂಜೆಯನು ನೀ ಮಾಡೆ
ದಾನವಾಂತಕ ರಂಗನು ಮೆಚ್ಚೆ
ತಾನೆ ಬಂದು ಗೋಪಾಲ ಕೃಷ್ಣ
ಜ್ಞಾನಿಗಳರಸನೆ ಗುರುವ್ಯಾಸರಾಯ
ಏನೆಂಬೆನು ನಿನ್ನ ಮಹಿಮೆಯನು
ಶ್ರೀನಿವಾಸ ಪುರಂದರವಿಠ್ಠಲನ
ಗಾನವ ಮಾಡುತ ಆಡುತ ಪಾಡುತ
ಏನೆಂಬೆ ನಿಮ್ಮ ಮಹಿಮೆಯ ಮಾನವನಾವ ಬಲ್ಲನು ॥ 9 ॥

ಜತೆ

ಗುರುವ್ಯಾಸರಾಯರ ಕರುಣ ಕಟಾಕ್ಷದಿ
ಪುರಂದರವಿಠ್ಠಲನ್ನ ಚರಣವ ಕಂಡೆನಾ ॥
(ದಾಸನೆನಿಸಿಕೊಂಡೆ)
*********

ಪುರಂದರ ದಾಸರ ಸುಳಾದಿ ಶ್ರೀವ್ಯಾಸರಾಜರ ಮೇಲೆ 

ಧ್ರುವತಾಳ
ವ್ಯಾಸರಾಯರ ಚರಣ ಕಮಲ ದರ್ಶನವೆನ-
ಗೇಸು ಜನ್ಮದ ಸುಕೃತ ಫಲದಿ ದೊರಕಿತೊ, ಎನ್ನ

ಸಾಸಿರ ಕುಲಕೋಟಿ ಪಾವನವಾಯಿತು-

ಶ್ರೀಶನ ಭಜಿಸುವುದಕಧಿಕಾರಿ ನಾನಾದೆ

ದೋಷರಹಿತನಾದ ಪುರಂದರವಿಠಲನ

ದಾಸರ ಕರುಣವು ಎನ್ನ ಮೇಲೆ ಇರಲಾಗಿ ||1||


ಮಟ್ಟತಾಳ

ಗುರು ಉಪದೇಶವಿಲ್ಲದ ಜ್ಞಾನವು

ಗುರು ಉಪದೇಶÀವಿಲ್ಲದ ಸ್ನಾನವು

ಗುರು ಉಪದೇಶವಿಲ್ಲದ ಧ್ಯಾನವು

ಗುರು ಉಪದೇಶವಿಲ್ಲದ ಜಪವು

ಗುರು ಉಪದೇಶವಿಲ್ಲದ ತಪವು

ಗುರು ಉಪದೇಶವಿಲ್ಲದ ಮಂತ್ರ

ಗುರು ಉಪದೇಶವಿಲ್ಲದ ತಂತ್ರ

ಉರಗನ ಉಪವಾಸದಂತೆ ಕಾಣಿರೋ,

ಗುರು ವ್ಯಾಸರಾಯರೆ ಕರುಣದಿಂದಲಿ ಎನಗೆ

ಪುರಂದರ ವಿಠಲನೇ ಪರನೆಂದರುಹಿ

ದುರಿತಭಯವನೆಲ್ಲ ಪರಿಹರಿಸಿದರಾಗಿ
ವರ ಮಹಾಮಂತ್ರ ಉಪದೇಶಿಸಿದರಾಗಿ ||2||

ರೂಪಕ ತಾಳ
ಅಂಕಿತವಿಲ್ಲದ ದೇಹ ನಿಷೇಧ
ಅಂಕಿತವಿಲ್ಲದ ಕಾವ್ಯ ಶೋಭಿಸದು
ಅಂಕಿತವಿಲ್ಲದೆ ಇರಬಾರದೆಂದು ಚ-
ಕ್ರಾಂಕಿತವನು ಮಾಡಿ ಎನ್ನಂಗಕೆ –
ಪಂಕಜ ನಾಭ ಶ್ರೀ ಪುರಂದರ ವಿಠಲನ
ಅಂಕಿತವೆನಗಿತ್ತ ಗುರವ್ಯಾಸ ಮುನಿ ರಾಯ ||3||

ಝಂಪೆ ತಾಳ
ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆ
ನ್ಯಾಯ ಗ್ರಂಥವ ರಚಿಸಿ ತನ್ನ ಭಕ್ತರಿಗಿತ್ತು
ಮಾಯಾವಾದಿ ಮೊದಲಾದಿಪ್ಪತ್ತೊಂದು ಕುಭಾಷ್ಯರ
ಬಾಯ ಮುದ್ರಿಸಿದೆ ಮಧ್ವರಾಯ ಕರುಣದಿಂದ
ಶ್ರೀಯರಸ ಪುರಂದರ ವಿಠಲನ ದಾಸರೊಳು
ನಾಯಕನೆಂದೆನಿಸಿದೆ ಗುರುವ್ಯಾಸ ಮುನಿರಾಯ ||4||

ತ್ರಿವಿಡ ತಾಳ
ಶೇಷಾವೇಶ ಪ್ರಹ್ಲಾದನವತಾರವೆನಿಸಿದೆ
ವ್ಯಾಸರಾಯನೆಂಬ ಪೆಸರು ನಿನಗೆಂದಂತೆ
ದೇಶಾಧಿಪಗೆ ಬಂದ ಕುಹುಯೋಗವನು ನೂಕಿ-
ನೀ ಸಿಂಹಾಸನವೇರಿ ಮೆರೆದೆ ಜಗವರಿಯೆ:
ವ್ಯಾಸಾಬ್ಧಿಯನು ಬಲಿಸಿ ಕಾಶೀದೇಶದೊಳೆಲ್ಲ
ಭಾಸುರ ಕೀರ್ತಿಯನು ಪಡೆದೆ ನೀ ಗುರು ರಾಯ
ವಾಸುದೇವ ಪುರಂದರ ವಿಠಲನ ದಾಸರೊಳು
ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ||5||

ಧ್ರುವ ತಾಳ
ಸಿರಿ ನಾರಾಯಣ ಯೋಗಿ ಶ್ರೀ ಪಾದರಾಯರಲ್ಲಿ
ವರವಿದ್ಯಾಭ್ಯಾಸವ ಮಾಡಿದೆ ನೀನು
ಧರೆಯೊಳು ವಿಜಯೀಂದ್ರÀ-ವಾದಿರಾಜರೆಂಬ
ಪರಮಶಿಷ್ಯರ ಪಡೆದು ಮೆರೆದ ಕೀರುತಿಯ:
ಸುರೇಂದ್ರರು ಪುತ್ರ ಭಿಕ್ಷೆ ಬೇಡೆ ವಿಜಯೀಂದ್ರನ
ಕರುಣಿಸಿ ಮಠವನುದ್ಧರಿಸಿದ ಕಾರಣ
ಗುರುವ್ಯಾಸರಾಯರೆ ಪರಮ ಗುರುಗಳು
ಪುರಂದರ ವಿಠಲ ಪರದೈವ ಜಗಕೆ ಕಾಣಿರೊ ||6||

ತ್ರಿವಿಡಿ ತಾಳ
ವರಮಧ್ವಮತವೆಂಬ ಸಾಗರದೊಳು ಅವ-
ತರಿಸಿದೆ ಪೂರ್ಣ ಚಂದ್ರಮನಂತೆ ನೀನು
ದರೆಯೊಳು ಬ್ರಹ್ಮಣ್ಯರ ಕುವರನೆಂದೆನಿಸಿದೆ ನೀನು
ಪುರಂದರ ವಿಠಲನ ಕರುಣವ ಪಡೆದೆ
ಕರುಣಾಕರನವ ಪರನೆಂದು ಅರುಹಲು
ದುರಿತಗಳೆಲ್ಲವ ಪರಿಹರಿಸಿಕೊಂಡೆ ನಾನು ||7||

ಅಟ್ಟ ತಾಳ
ಈಸು ಮುನಿಗಳಿದ್ದರೇನ ಮಾಡಿದರಯ್ಯ
ವ್ಯಾಸರಾಯ ಮಧ್ವಮತವನುದ್ಧರಿಸಿದ
ಕಾಶೀ ಗದಾಧರ ಮಿಶ್ರನ ಸೋಲಿಸಿ
ದಾಸನ್ನ ಮಾಡಿಕೊಂಡ ಧಾರುಣಿಯೊಳಗೆ
ಕಾಶೀ ಮಿಶ್ರ ಪಕ್ಷದರ ವಾಜಪೇಯ ನಾ-
ರಸಿಂಹ ಲಿಂಗಣ್ಣ ಮಿಶ್ರ ಮೊದಲಾದ ವಿ-
ದ್ವಾಂಸರು ನೂರೆಂಟು ಮಂದಿ ಬರಲು
ಜೈಸಿದೆ ಜಯಪತ್ರವ ಕೊಂಡು ಮೆರೆದೆ-
ವಾಸುದೇವ ಗೋಪಾಲ ಕೃಷ್ಣನಿಗೆ ವಿ-
ಭೂಷಣವನು ಮಾಡಿ ಹಾಕಿಸಿದೆ-
ಶ್ರೀಶ ಶ್ರೀ ಪುರಂದರ ವಿಠಲರಾಯನನು
ಈಶ ಬೊಮ್ಮ ಇಂದ್ರಾದಿಗಳಿಗೆ
ಈಶನೆಂದು ಡಂಗುರ ಪೊಯಿಸಿ ಮೆರೆದೆ ಜಗವರಿಯೆ
ದಾಸರೊಳು ನೀ ಸಮರ್ಥನು ಸಂನ್ಯಾಸಿ ಶಿರೋಮಣಿ ||8||

ಆದಿ ತಾಳ
ಮಾನಸ ಪೂಜೆಯನ್ನು ನೀ ಮಾಡೆ
ದಾನವಾಂತಕ ರಂಗನು ಮೆಚ್ಚಿ
ತಾನೆ ಬಂದ ಗೋಪಾಲ ಕೃಷ್ಣ
ಜ್ಞಾನಿಗಳರಸನೆ ಗುರು ವ್ಯಾಸರಾಯ
ಏನೆಂಬೆನು ನಿನ್ನ ಮಹಿಮೆಯನು
ಶ್ರೀನಿವಾಸ ಪುರಂದರ ವಿಠಲನ
ಗಾನವ ಮಾಡುತ ಆಡುತ ಪಾಡುತ
ಏನೆಂಬೆ ನಿಮ್ಮ ಮಹಿಮೆಯನಾವ ಬಲ್ಲನು? ||9||

ಜತೆ
ಗುರ ವ್ಯಾಸರಾಯ ಚರಣವೆನಗೆ ಗತಿ
ಪುರಂದರ ವಿಠಲನ ಅರಿತೆ ಇವರಿಂದ|


*********