ಭೈರವಿ ರಾಗ ತ್ರಿತಾಳ
ನಿನ್ನವ ನಾನು ಎನ್ನಯ್ಯ ನೀನು
ನಿನ್ನಿಂ ನಾ ಎಂದೆಂಬೆ ನಾನು ||ಪ||
ನಿನ್ನೊಳು ದಾವ ನಾನು ಎನ್ನೊಳಗಿಹೆ ನೀನು
ನಿನ್ನಿಂದೆ ಜೀವಿಸುವನಾಗಿಹೆನು ||೧||
ನಿನ್ನವಿಡಿದು ನಾನು ಎನ್ನ ಬಾಹ್ಯಾಂತ್ರ ನೀನು
ಎನ್ನ ಸಕಲ ಸಾಹ್ಯಸೂತ್ರ ನೀನು ||೨||
ಎನ್ನ ಪ್ರೇರಕ ನೀನು ನಿನ್ನ ಪ್ರೀತ್ಯರ್ಥ ನಾನು
ನಿನ್ನಿಂದಾದೆ ಪವಿತ್ರ ಪಾತ್ರ ನಾನು ||೩||
ನೀನೇ ಸ್ವಯಂಭಾನು ನಿನ್ನಿಂದುದಯ ನಾನು
ನಿನ್ನಿಂದಾದ ಮಹಿಗೆ ಪತಿಯೇ ನೀನು ||೪||
********
ನಿನ್ನವ ನಾನು ಎನ್ನಯ್ಯ ನೀನು
ನಿನ್ನಿಂ ನಾ ಎಂದೆಂಬೆ ನಾನು ||ಪ||
ನಿನ್ನೊಳು ದಾವ ನಾನು ಎನ್ನೊಳಗಿಹೆ ನೀನು
ನಿನ್ನಿಂದೆ ಜೀವಿಸುವನಾಗಿಹೆನು ||೧||
ನಿನ್ನವಿಡಿದು ನಾನು ಎನ್ನ ಬಾಹ್ಯಾಂತ್ರ ನೀನು
ಎನ್ನ ಸಕಲ ಸಾಹ್ಯಸೂತ್ರ ನೀನು ||೨||
ಎನ್ನ ಪ್ರೇರಕ ನೀನು ನಿನ್ನ ಪ್ರೀತ್ಯರ್ಥ ನಾನು
ನಿನ್ನಿಂದಾದೆ ಪವಿತ್ರ ಪಾತ್ರ ನಾನು ||೩||
ನೀನೇ ಸ್ವಯಂಭಾನು ನಿನ್ನಿಂದುದಯ ನಾನು
ನಿನ್ನಿಂದಾದ ಮಹಿಗೆ ಪತಿಯೇ ನೀನು ||೪||
********