Showing posts with label ನಮೋ ನಮೋ ಹನುಮಾ ಪ್ಲವಗೋತ್ತುಮಾಂಜನೇಯ gurujagannatha vittala NAMO NAMO HANUMA PLAVAGOTTUMAANJANEYA. Show all posts
Showing posts with label ನಮೋ ನಮೋ ಹನುಮಾ ಪ್ಲವಗೋತ್ತುಮಾಂಜನೇಯ gurujagannatha vittala NAMO NAMO HANUMA PLAVAGOTTUMAANJANEYA. Show all posts

Saturday, 11 December 2021

ನಮೋ ನಮೋ ಹನುಮಾ ಪ್ಲವಗೋತ್ತುಮಾಂಜನೇಯ ankita gurujagannatha vittala NAMO NAMO HANUMA PLAVAGOTTUMAANJANEYA

ನಮೋ ನಮೋ ಹನುಮಾ ಪ್ಲವಗೋ
ತ್ತುಮಾಂಜನೇಯ ನಾಮಾ ||ಪ||

ಶಮಾದಿಗುಣಗಣ ಸಮೀರ ನುತಜನ
ಪ್ರಮಾದ ಹರಿಸೆಲೊ ಉಮೇಶ ವಂದ್ಯನೆ ||ಅ.ಪ||

ದಶಾಪುರುಷ ನೀನೇ ತ್ರೀ -
ದಶಾದ್ಯಮರ ಪೂಜಿತನೆ 
ದಶಾಸ್ಯಮುಖ ಮಹ ನಿಶಾಚರೇಶರ
ದಶಾಕಳೆದು ಈ ವಸೂಧಿಯೋಳು ಮೆರೆದೆ ||1||

ಬಕಾಸುರಗೆ ವೈರೀ ನಿನ್ನ
ಭಕೂತ ಜನಕೀಪರಿ
ಅಖೀಳ ಸೌಖ್ಯದ ಲಕೂಮಿರಮಣನ
ಭಕೂತಿ ಪೂರ್ವಕ ಮೂಕೂತಿ ದಾಯಕ ||2||

ಯತೀಶಕುಲನಾಥಾ ದಶ -
ಮತೀನಾಮ ಖ್ಯಾತಾ
ಕ್ಷಿತೀಶ ಗುರುಜಗನ್ನಾಥಾವಿಠಲ ದೂತ
ಪಾಥೋಜಜಾಂಡಕೆ ನಾಥಾನೆ ಪಾಲಿಸೊ ||3||
**********