ರಾಗ - : ತಾಳ -
ಭ್ರಾಂತಿ ಪರಿಹರಿಸಯ್ಯ ಶ್ರೀಕಾಂತ ವೆಂಕಟನೆ ll ಪ ll
ಕ್ರಾಂತಿ ಪೊಂದಿರೆ ಭವದಶಾಂತ ನಿಲುವಿನಲಿ ll ಅ ಪ ll
ಅಕುಟಿಲಾತ್ಮಕ ದೇವ ಸುಖ ದುಃಖ ದ್ವಂದ್ವಗಳ l
ಪ್ರಕರಣವ ಮಾಡಲವಿವೇಕ ಮುಸುಕಿನೊಳು ll
ಸಕುಟಿಲಾತ್ಮಕಹಂಮಮದೆ ಬಕ ವಿಡಂಬನವಾಯ್ತು l
ಆಕಟ ನಿಜಭಾವ ಪ್ರಕಟಗೊಳಿಸೀ ನಾಟಕದಿ ll 1 ll
ದಿನಚ ಯೊಳಿಹ ಲೌಕಿಕದೆ ಸಾಧನವೆನಲು l
ಅನುಕರಣ ತಿಳಿಯದಲೆ ಸ್ನಾನಾದಿಕರ್ಮ ತಾರಕವೆನುತಾ ll
ಮನವಿಷಯಕಳವಡಿಸಿ ಜನನ ಮರಣೋರ್ಮಿಗಳ l
ಘನಸುಳಿಯೊಳ್ ಸಿಲುಕಿ ಸಾಧನವನರಿಯದಿಹೆ ll 2 ll
ಏನ ಮಾಡಿದೊಡಲ್ಲಿ ನೀನಿಲ್ಲದಿನ್ನಿಲ್ಲ l
ಜ್ಞಾನ ಕರ್ಮಗಳ ಅನುಸಂಧಾನ ಬಲಪಡಿಸೋ ll
ಧೇನಿಪೆನು ನಾನಿದನೆ ಅನ್ಯವೇನನನೊಲ್ಲೆ l
ಹನುಮ ವಂದಿತ ನಾಗಶಯನವಿಟ್ಠಲ ದೇವ ll 3 ll
***