Showing posts with label ಬಿಡುವೇನೇನಯ್ಯ ಹನುಮ ಸುಮ್ಮನೆ ಬಿಡುವೇನೇನಯ್ಯ purandara vittala BIDUVENENAYYA HANUMA SUMMANE BIDUVENENAYYA. Show all posts
Showing posts with label ಬಿಡುವೇನೇನಯ್ಯ ಹನುಮ ಸುಮ್ಮನೆ ಬಿಡುವೇನೇನಯ್ಯ purandara vittala BIDUVENENAYYA HANUMA SUMMANE BIDUVENENAYYA. Show all posts

Wednesday, 1 December 2021

ಬಿಡುವೇನೇನಯ್ಯ ಹನುಮ ಸುಮ್ಮನೆ ಬಿಡುವೇನೇನಯ್ಯ purandara vittala BIDUVENENAYYA HANUMA SUMMANE BIDUVENENAYYA





SUNG AS VENKATA VITTALA ANKITA

CHECK  ANKTIA SHOULD BE VENKATA VITTALA 

ಬಿಡುವೇನೇನಯ್ಯ ಹನುಮ ಸುಮ್ಮನೆ ಬಿಡುವೇನೇನಯ್ಯ              ||ಪ||

ಬಿಡುವೆನೇನೋ ಹನುಮ ನಿನ್ನ ಆಡಿಗಳಿಗೆ ಶಿರವ ಬಾಗಿ
ಒಡೆಯನಲ್ಲಿ ಜ್ಞಾನ ಭಕುತಿಯ ಕೊಡುವ ತನಕ ಸುಮ್ಮನೇ ನಿನ್ನ      ||೧||

ಹಸ್ತವನ್ನು ಎತ್ತಿದರೇನು ಹಾರಗಳನ್ನು ಇಟ್ಟರೆ ಏನು
ಭೃತ್ಯನು ನಿನ್ನವನು ನಾನು ಹಸ್ತಿವರ್ಧನ ತೋರುವ ತನಕ             ||೨||

ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇನೋ ನಿನಗೆ ನಾನು
ಫುಲ್ಲನಾಭ ನಲ್ಲಿ ಎನ್ನ ಮನಸಾ ನೀ ನಿಲ್ಲಿಸುವ ತನಕ                    ||೩||

ಡೊಂಕು ಮೋರೆಯ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ
ಕಿಂಕರ ನಿನ್ನವನು ನಾನು ಪುರಂಧರ ವಿಠಲನ ತೋರುವ ತನಕ     ||೪||
***


ಬಿಡುವೇನೇನಯ್ಯ ಹನುಮ, ಸುಮ್ಮನೆ ಬಿಡುವೇನೇನಯ್ಯ||ಪ.||

ಬಿಡುವೆನೇನು ಹನುಮ ನಿನ್ನ ಆಡಿಗಳಿಗೆ ಶಿರವ ಬಾಗಿ
ಜ್ಞಾನ ಭಕ್ತಿ ವೈರಾಗ್ಯವನು ಕೊಡುವ ತನಕ ಸುಮ್ಮನೇ ನಾನು||ಅ.ಪ.||

ಹಸ್ತವ ಎತ್ತಿದರೇನು ಹಾರಗಾಲ ಹಾಕಲೇನು
ಭೃತ್ಯನೋ ನಿನ್ನವನು ನಾನು ಹಸ್ತಿವರದನ ತೋರುವ ತನಕ||೧||

ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇನೋ ನಿನಗೆ ನಾನು
ಫುಲ್ಲನಾಭನಲ್ಲಿ ಮನಸು ನಿಲ್ಲಿಸೊ ತನಕಸುಮ್ಮನೆ ನಾನು ||೨||

ಡೊಂಕು ಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ
ಕಿಂಕರ ನಿನ್ನಗೆ ಕಿಂಕರ ನಾನು ಪುರಂಧರ ವಿಠಲನ ತೋರುವ ತನಕ||೩||
***


biDuvEnEnayya hanuma, summane biDuvEnEnayya||pa.||

biDuvenEnu hanuma ninna ADigaLige Sirava bAgi
j~jAna Bakti vairAgyavanu koDuva tanaka summanE naanu||a.pa.||

hastava ettidarEnu hAragAla hAkalEnu
BRutyanO ninnavanu nAnu hastivaradana tOruva tanaka||1||

hallumuDiya kaccidarEnu aMjuvenEnO ninage nAnu
PullanABanalli manasu nilliso tanakasummane naanu ||2||

DoMku mOre bAlava tiddi hUMkarisidare aMjuvanalla
kiMkara ninnage kiMkara nAnu puraMdhara viThalana tOruva tanaka||3||
***

Biduvennayya hanumaa||

Summane Biduvenanyaa|

Biduvenano Hanuma Ninna
Adigaligae Shirava Bagi
Odaya Nalli Gyna Bhakuthi Ya
Koduva Thanaka Summane Ninna ||1||

Hastha Vannu Yethidera Yenu
Hara Kalannu Ittare Yenu
Hruthyanu Ninavanu Naanu
Hasthi Vardhana Thoruva Thanaka ||2||

Hallumudiya Kachidera Yenu
Anjuvane Ninage Naanu
Hulla Nabha Nalli Yenna
Manasa Ni Nillisuva Thanaka ||3||

Donku Morea Balava Thid Di
Hunkarisdera Anjuvanalla
Kinkara Ninnavanu Naanu
Purandhara Vittalana Thoruva Thanaka ||4||
***