ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳಿರೋ ಈ ಮಾತ ಈ ಮಾತ ತಿಳಿದು ಕೋಳ್ಳಿರೊ ಸ್ವಹಿತ ಹೇಳುತಿಹ್ಯದು ವೇದಾಂತ ವೇದಾಂತ ಇಳಿಯೋಳಿದುವೆ ಸಿದ್ಧಾಂತ ಸಿದ್ಧಾಂತ 1
ಹಿಡಿಯಬ್ಯಾಡಿರೊ ಕಾಮ ಕ್ರೋಧ ಕ್ರೋಧ ಮಾಡಬ್ಯಾಡಿರೋ ಭೇದ ಭೇದಾ ಭೇದ ಈ ಡ್ಯಾಡಿರೊ ವಿವೇದ ವಿವೇದ ಬೋಧ ಸುಬೋಧ 2
ದೋರುತದೆ ತಾ ಸುಪಥ ತಾ ಸುಪಥ ಸುರ ಜನರ ಸನ್ಮತ ಸನ್ಮತ ದೋರುತಿಹ್ಯ ಗುರುನಾಥ ಶ್ರೀ ಗುರುನಾಥ ಪರಮಾನಂದ ಭರಿತ ಭರಿತ 3
ನೋಡಿರೊ ಈ ಖೂನ ಈ ಖೂನ ಮಾಡಿ ಸದ್ಗತಿ ಸಾಧನ ಸಾಧನ ಗುಹ್ಯ ನಿಜಧನ ನಿಜಧನ ದೃಢ ಭಕ್ತರ ಜೀವನ ಜೀವನ 4
ಈಹ್ಯ ಪರಿಪೂರ್ಣ ಪರಿಪೂರ್ಣ ಮಹಾಗುರು ಶ್ರೀ ಚರಣ ಶ್ರೀ ಚರಣ ಸಾಹ್ಯದೋರುವ ಸುಗುಣ ಸುಗುಣಮಹಿಪತಿ ಜೀವ ಪ್ರಾಣ ಸುಪ್ರಾಣ 5
***