ಕಾಖಂಡಕಿ ಶ್ರೀ ಕೃಷ್ಣದಾಸರು
ಬಿಡು ಬಿಡು ವಣಮಾತಿನ ಸೊಗಸು | ಕುಡಿ ಸ್ವಾನಂದ ಬಳ್ಳಿಯ ಚಿಗಿಸು ಪ
ಶೃತಿ ಶಾಸ್ತ್ರಜ್ಞಾನವ ಪಡೆದು | ಕ್ಷಿತಿಯೊಳು ಹೆಮ್ಮೆಯ ಮದ ಜಡಿದು | ಪ್ರತಿಯನಗಿಲ್ಲೆನುತಲಿ ನುಡಿದು | ಮತವಾದಕ ನಿಲುವರೆ ನಡದು 1
ಅಂಜನಿಲ್ಲದ ಉಪಕರಣದಂತೆ | ವ್ಯಂಜನಿಲ್ಲದ ಪಾಕಗಳಂತೆ | ರಂಜನಿಗನುಭವ ದೂರಂತೆ | ಕಂಜನಾಭನ ನೆನೆವಂತೆ 2
ತನ್ನೊಳು ನಿಜಘನದಾವರತಾ | ಮುನ್ನಾದನು ಶಬ್ದಕ ಹೊರತಾ | ಇನ್ನಾರ ಬೆರಿ ಸಂತರ ತ್ವರಿತಾ | ಮನ್ನಿಸಿ ಮಹಿಪತಿಜನಗುರುತಾ 3
***