ರಾಗ ಖರಹರಪ್ರಿಯ ಆದಿತಾಳ
ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ
ಭಿಕ್ಷಾಂ ದೇಹಿ ಮೇ ಸ್ವಾಮಿನ್
ಕುಕ್ಷಿಯು ತುಂಬುವ ತೆರದಲಿ ಭಕ್ತಿಯ ॥ಪ॥
ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೋ
ಕುಕ್ಷಿಯು ಬರಿದಾಗಿರುವುದು ಭಕ್ತಿಯ॥ಅ.ಪ॥
ಆರುಮಂದಿ ಶತ್ರುಗಳಿರುವರು ಬಲು
ಕ್ರೂರರಿವರು ಎನ್ನನು ಬಿಡರೋ
ದೂರಕಳುಹಲು ಆಹಾರವು ಸಾಲದು
ಚೂರು ಮಾಡುವೆನು ಕರುಣದಿ ಶಮದಮ॥೧॥
ನಮ್ಮವರಿರುವರು ಹತ್ತು ಮಂದಿಗಳು
ಸುಮ್ಮನಿರರು ಒಂದರಘಳಿಗೆ
ಸಮ್ಮತಿಗೊಡದಿರೆ ಬಳಲಿಸುವರು ಇವ-
ರ್ಹಮ್ಮನು ಮುರಿಯುವೆ ವಿಷಯವಿರಕ್ತಿಯ॥೨॥
ಕತ್ತಲೆಯಲಿ ಬಂದಿರುವೆನು ಹೊಟ್ಟೆಯು
ಹತ್ತಿಹೋಯಿತೋ ಹಸಿವಿನಲಿ
ಎತ್ತ ಸುತ್ತಿದರೂ ತುತ್ತನು ಕಾಣೆನೋ
ಭಕ್ತ ಪ್ರಸನ್ನ ದಯಾಜಲನಿಧೇ ಜ್ಞಾನ॥೩॥
***
https://drive.google.com/file/d/18zrPk7fsK5j2OAK9LXlg3y1Trk7nnSjw/view?usp=drivesdk