ಕಾಖಂಡಕಿ ಶ್ರೀ ಕೃಷ್ಣದಾಸರು
ದೇವರಿಂದಲಿ ಭಕ್ತಧಿಕನು | ಭಾವ ಭಕುತಿಯಲಿ ಬಲ್ಲಿದನು ಪ
ಅವನ ಉದರದಲಿ ಜಗವಿಹುದು | ಅವನ ತನ್ನೆದೆಯಲ್ಲಿ ನಿಲಿಸಿಹನು 1
ದಾವನಿಂದಲಿ ಜಗಹುಟ್ಟುತಲಿಹುದು | ಅವನ ಜನುಮಕಿವ ತಾರಿಸಿದನು 2
ಕಾಳಗದಲಿ ನಿಸ್ಸೀಮನ ದಾವನು | ಸೋಲಿಸಿದವನೆನು ನದಿಸುತನು 3
ಸಾಗರ ಜಲ ಘನ ತುಂಬಿಕೊಂಡಿಹುದು ಮೇಘ ಮುಖದಿ ಬೆಳೆಯಾಗುವದು 4
ಬಾಳಿಗಿಡವು ಸ್ವಾನಂದದಲಿಹುದು | ಬಾಳೆಹಣ್ಣವು ಜನ ನಲಿಸುವುದು 5
ಸಂಗರಹಿತ ಗುರು ಮಹಿಪತಿ ಸ್ವಾಮಿಯ | ಹಂಗಿಗನನು ತನ್ನ ಮಾಡಿದನು 6
****