..
kruti by Nidaguruki Jeevubai
ಬಾ ಹರಿ ಭಕುತರ ಭಯ ಪರಿಹರಿಸುತ
ಸರಸಿಜ ಸದನೆಯರೊಡಗೂಡಿ ನಲಿಯುತ ಪ
ನೀರೊಳು ಮುಳುಗಿ ಮೀನನೆಂದೆನಿಸಿ
ಭಾರವ ಪೊತ್ತಿಹ ಕೂರ್ಮನೆ ಜವದಿ 1
ಕೋರೆಗಳಿಂದ ಧಾರುಣಿತಂದ
ಕ್ರೂರನುದರ ಕರುಳ್ಹಾರವೆ ಚಂದ 2
ಮೂರಡಿ ಭೂಮಿಯ ಬೇಡುತ ಬಂದೆ
ನಾಡೊಳು ಕೊಡಲಿಯ ಪಿಡಿಯುತ ನಿಂದೆ3
ಸೇತುವೆ ಕಟ್ಟುತ ಸೀತೆಯ ತಂದೆ
ಪಾತಕಿ ಕಂಸನ ನಾಶವ ಗೈದೆ4
ಬುದ್ಧನೆಂದೆನಿಸಿದೆ ಶುದ್ಧಮೂರುತಿಯ
ಮುದ್ದು ತೇಜಿಯ ನೇರುತ ಮೆರೆದವನೆ 5
ಬಾ ಮುರವೈರಿ ಬಾ ಬಾರೊ ಶೌರಿ
ಭಾಸುರ ವಂದ್ಯ ಬಾ ಮುದದಿಂದ6
ಬಿಡದೆ ನಿನ್ನಯ ಪಾದ ದೃಢದಿ ಭಜಿಪೆನೈ
ಕಡಲ ಶಯನ ಕಮಲನಾಭ ವಿಠ್ಠಲನೆ 7
***