Showing posts with label ಯಾಕೆ ಮರುಳಾದೆ ಹೀಂಗೆ ಎಲೆ ಮನವೆ helavana katte. Show all posts
Showing posts with label ಯಾಕೆ ಮರುಳಾದೆ ಹೀಂಗೆ ಎಲೆ ಮನವೆ helavana katte. Show all posts

Tuesday, 1 June 2021

ಯಾಕೆ ಮರುಳಾದೆ ಹೀಂಗೆ ಎಲೆ ಮನವೆ ankita helavana katte

 ಯಾಕೆ ಮರುಳಾದೆ ಹೀಂಗೆ ಎಲೆ ಮನವೆ

ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ ಪ.

ಧನದಾಸೆಯನು ಮರಿ ಮನುಮಥನ
ಬಾಣಕಳುಕದಿರು ತೊಳಲದಿರು
ನೆಲದಾಸೆಗೆ ನೀನದರ
ಅನುವರಿತು ಹರಿಯ ಸ್ಮರಿಸು ಮನವೆ 1

ಅನ್ಯರಾಗುಣ ದೋಷಯಣಿಸದಲೆ
ನಿನ್ನಿರವ ನೋಡು ಕಂಡ್ಯಾ ಮನವೆ
ಬಂಣಗಾರಿಕೆಯು ಬರಿದೆ ಔದಂಬ್ರ-
ಹಣ್ಣಿನಂತೀ ಕಾಯವು ಮನವೆ 2

ತಮ್ಮ ಬುದ್ದಿ ತಲೆಗೆ ಸುತ್ತಿ ಸಂಸಾರ
ಭ್ರಮೆಗೊಂಡು ಬಳಲಾದಿರೋ
ಕಮಲಪತ್ರಕ್ಕೆ ಒಳಗಿನ ಜಲದಂತೆ
ನೆಲಕೆ ನಿರ್ಲೇಪನಾಗೋ ಮನವೆ 3

ಈ ದೇಹ ಸ್ಥಿರವಲ್ಲವೊ ಕಾಲನಾ
ಬಾಧೆಗೋಳಗಾಗದಿರೋ ಮನವೆ
ಭೇದ ದುರ್ಗುಣವ ತ್ಯಜಿಸು ನೀ
ಗೇರುಬೀಜದಂದದಿ ತಿಳಿಯೊ ಮನವೆ 4

ಮಾಡು ಹರಿಸೇವೆಯನ್ನು ಮನದಣಿಯೆ
ಬೇಡು ಹರಿಭಕ್ತಿಯನ್ನು
ಕೂಡು ಹೆಳವನಕಟ್ಟೆಯ ವೆಂಕಟನ
ಬೇಡಿ ಮುಕ್ತಿಯನು ಪಡೆಯೊ ಮನವೆ 5
***