Showing posts with label ಳಳ- RSS- ಗಂಡುಗಲಿ ಎದ್ದೇಳು ಬಂದಿಹುದು others rss. Show all posts
Showing posts with label ಳಳ- RSS- ಗಂಡುಗಲಿ ಎದ್ದೇಳು ಬಂದಿಹುದು others rss. Show all posts

Friday, 24 December 2021

ಗಂಡುಗಲಿ ಎದ್ದೇಳು ಬಂದಿಹುದು others rss

   

RSS song .

ಗಂಡುಗಲಿ ಎದ್ದೇಳು ಬಂದಿಹುದು ಸಮಯ

ಪುಂಡ ರಾಜರ ಬಲವ ಸದೆದು ಧರ್ಮವ ಮೆರೆವ

ಗಂಡುಗೊಡಲಿಯ ಪರಶುರಾಮನವತಾರ ||ಪ||


ಮೋಸದ ಮತಾಂತರ ದ್ರೋಹ |

ವ್ಯಾಪಿಸಿದೆ | ಪಶ್ಚಿಮದ ಪಾತಕಿಯ ಭೀತಿ ಸನ್ನಾಹ

ರಾಷ್ಟ್ರಾಂತರವ ತಡೆದು ಭೀತಿ ವಾದವ ತುಳಿದು

ಆಕ್ರಮಣಕುತ್ತರಿಸಿ ಬಿತ್ತರಿಸು ಛಲವ ||೧||


ಭೂಪಾಲ ರಾಮ ನಿನ್ನಂಶ |

ಮರೆಯದಿರು | ಗೋಪಾಲ ಶ್ರ‍ೀಕೃಷ್ಣ ನಿನ್ನದೇ ವಂಶ

ಗೋವುಗಳ ರಕ್ಷಿಸುತ ಮಂದಿರವ ಕಟ್ಟಿಸುತ

ಆಗ್ರಹದಿ ಅನುಸರಿಸು ಜಾಗೃತಿಯ ಪಥವ ||೨||


ಜಾತಿ ಜಾತಿಗಳ ಮೇಲುಕೀಳುಗಳ ತರತಮಕೆಲ್ಲಿದೆ ಪರಿಹಾರ?

ದಲಿತರ ಧನಿಕರ ಬಡವ ಬಲ್ಲಿದರ ಅಂತರಕೆಲ್ಲಿದೆ ಪರಿಹಾರ?

ಉತ್ತರದೆತ್ತರ ಹಬ್ಬಿದ ನಾಡಿನ ರಕ್ಷಣೆಗೇನಿದೆ ಪರಿಹಾರ?

ಸತತ ಮತಾಂತರ ಪತಿತ ಮಂದಿರ ಎಲ್ಲಿದೆ ಎಲ್ಲಿದೆ ಪರಿಹಾರ?

ಹಿಂದುಗಳೇ ಉತ್ತಿಷ್ಠತ ಜಾಗೃತ - ಜಾಗೃತಿಯೊಂದೇ ಉತ್ತರಾ...

ಬಂಧುಗಳೇ ಉತ್ತಿಷ್ಠತ ಜಾಗೃತ - ಜಾಗೃತಿಯೊಂದೇ ಉತ್ತರಾ

ಹಿಂದು ಜಾಗೃತಿಯೊಂದೇ ಉತ್ತರ - ವೀರ ಭೋಗ್ಯಾ ವಸುಂಧರಾ ||೩||

***

gaMDugali eddELu baMdihudu samaya

puMDa rAjara balava sadedu dharmava mereva

gaMDugoDaliya paraSurAmanavatAra ||pa||


mOsada matAMtara drOha |

vyApiside | paScimada pAtakiya BIti sannAha

rAShTrAMtarava taDedu BIti vAdava tuLidu

AkramaNakuttarisi bittarisu Calava ||1||


BUpAla rAma ninnaMSa |

mareyadiru | gOpAla Sr^IkRuShNa ninnadE vaMSa

gOvugaLa rakShisuta maMdirava kaTTisuta

Agrahadi anusarisu jAgRutiya pathava ||2||


jAti jAtigaLa mElukILugaLa taratamakellide parihAra?

dalitara dhanikara baDava ballidara aMtarakellide parihAra?

uttaradettara habbida nADina rakShaNegEnide parihAra?

satata matAMtara patita maMdira ellide ellide parihAra?

hiMdugaLE uttiShThata jAgRuta - jAgRutiyoMdE uttarA...

baMdhugaLE uttiShThata jAgRuta - jAgRutiyoMdE uttarA

hiMdu jAgRutiyoMdE uttara - vIra BOgyA vasuMdharA ||3||

***