kruti by bhupati vittalaru ( kakhandaki Ramacharyaru)
ಧನ್ಯ ಧನ್ಯ ದತ್ತಾ ದಿಗಂಬರಧನ್ಯ ಮಾನ್ಯ ದತ್ತಾ ಪ
ಧನ್ಯ ಧನ್ಯ ಜಗಮಾನ್ಯ ದಿಗಂಬರಪುಣ್ಯ ಪುರುಷ ಕಾರುಣ್ಯನಿಧೇಅನ್ಯನಲ್ಲ ನಾ ನಿನ್ನವನಯ್ಯಾಎನ್ಯ ಕೈಪಿಡಿದು ಧನ್ಯನ ಮಾಡೋ 1
ಗಾಲವಕ್ಷೇತ್ರ ನಿವಾಸ 'ಶೇಷಾಬಾಲ ಸೂರ್ಯ ಸಮಕಾಂತಿ ಪ್ರಕಾಶಕಾಷಾಯಾಂಬರ ಭೂತ ವೇಷಾಜಟಾಧಾರಿ ಪ್ರಭೊ ನಾ ತವದಾಸಾ 2
ದತ್ತ ದಿಗಂಬರ ಶ್ರೀಪಾದವಲ್ಲಭಭೃತ್ಯ ನಾನು ಮೇಲೆತ್ತಿ ಉದ್ಧರಿಸೊಸತ್ಯಸಂಧನು ನೀನೆ ಮಹಾತ್ಮಚಿತ್ತದಿ ಭೂಪತಿ'ಠ್ಠಲನ ನಿಲಿಸೊ 3
***