Showing posts with label ಕೆಡಗೊಡದಿರು ದೇಶಿಗ ನಾ ರಂಗಕೆಡಗೊಡದಿರು prasannavenkata. Show all posts
Showing posts with label ಕೆಡಗೊಡದಿರು ದೇಶಿಗ ನಾ ರಂಗಕೆಡಗೊಡದಿರು prasannavenkata. Show all posts

Monday, 11 November 2019

ಕೆಡಗೊಡದಿರು ದೇಶಿಗ ನಾ ರಂಗಕೆಡಗೊಡದಿರು ankita prasannavenkata

by ಪ್ರಸನ್ನವೆಂಕಟದಾಸರು
ಕೆಡಗೊಡದಿರು ದೇಶಿಗ ನಾ ರಂಗಕೆಡಗೊಡದಿರು ದೇಶಿಗ ನಾ ಪ.

ನುಡಿ ನುಡಿದು ಮುಪ್ಪಾದೆ ನನ್ನಯನಡೆ ನೋಡಲು ಹುರುಳಿಲ್ಲಹುಡಿ ಹುಡಿಯಾದೆನೊ ವಿಷಯದ ಬಯಕೆಲಿಅಡಿಗಡಿಗೊದಗಿತು ಪಾಪವು ರಂಗ 1

ಜಪತಪವ್ರತಗಳ ನೇಮವನರಿಯೆನಿಪುಣ ಪೂಜಾವಿಧಿಯರಿಯೆಅಪರಿಮಿತಶುಭಕ್ರಿಯದೊಳು ಕಾಮನಚಪಲತೆ ಭ್ರಮೆಗೊಳಿಸುತಿದೆ ರಂಗ 2

ಹಿಡಿ ಹಿಡಿ ಮುಳುಗುವೆ ಯಾರಿಲ್ಲವೊ ಪಾಲ್ಗಡಲೊಡೆಯ ಭವಾಬ್ಧಿಯಲಿಚಡಪಡಿಸುವೆ ಮೂರುರಿಯಲಿಹರಿನಿನ್ನಡಿಯೆಡೆಲಿಡು ಪ್ರಸನ್ವೆಂಕಟ ರಂಗ 3
*******