Showing posts with label ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ vijaya vittala. Show all posts
Showing posts with label ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ vijaya vittala. Show all posts

Wednesday, 16 October 2019

ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ ankita vijaya vittala

ವಿಜಯದಾಸ
ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ |
ಪ್ರಜರಿಗೆ ದೊರಕುವದೆ |
ತ್ರಿಜಗದೊಳಗೆ ಮುಂದೆ | ಅಜನಾಗಿ ಬಪ್ಪಗೆ |
ಭಜನೆ ಮಾಡುವಂಥ ಸುಜನರಿಗಲ್ಲದೆ ಪ

ಮಂದಾಕಿನಿ ಮಿಕ್ಕಾದ ನದಿಗಳಲ್ಲಿಗೆ ಪೋಗೆ |
ಮಿಂದು ನಾನಾ ಕ್ಷೇತ್ರವ ಬಂದೂ ಬಿಡದೆ ತಿರುಗಿ ವೇದ ಶಾಸ್ತ್ರಗಳು |
ಚಂದದಿ ಓದಿಕೊಂಡು |
ಕುಂದದೆ ವ್ರತ ಯಾಗ ಯೋಗ ಮಾಡಲೇನು |
ಬಿಂದು ಮಾತ್ರ ಫಲವಿಲ್ಲ |
ಸುರರು ಒಂದಾಗಿ ಒಂದಿನ |
ಅಂದು ಪೀಯೂಷವ ಕರೆಯೆ ಉಂಡವರಾರು 1
ಮಾನವ |
ನಾಡೊಳು ಉಡುಪಿ ಯಾತ್ರೆ ಮಾಡಿದರವಗೇನು ಲೇಶ ಸತ್ಕರ್ಮವು |
ಕೂಡದು ಕೂಡದಯ್ಯಾ |
ಬಿಡಾಲನಂದದಿ ತಿರುಗಿದಂತಾಗುವದು |
ಕೇಡಿಗೆ ಗುರಿಯಾಗುವಾ |
ಜೋಡು ಇಲ್ಲಿಗೆ ಬಂದು ತಿರುಗಿ ಪೋದರೆಯೇನು |
ಆಡಲೇನದಕೆ ತಿಲಾಂಶ ಸುಖವುಂಟೆ 2

ತಮೋ ಯೋಗ್ಯ ಉಡುಪಿನ ಯಾತ್ರೆ ಮಾಡಲು |
ಅಮಿತ ಬಲವಂತನಾಗಿ
ಪುಟ್ಟಿ ಆಕ್ರಮಿಸಿ ಪುಣ್ಯವನೆ ಕೆಡಿಸಿ
ತಮಕೆ ಸಾಧನವಾದ ಸುಖಬಟ್ಟು ಬಹುಕಾಲ |
ರಮಣಿ ಮಕ್ಕಳು ಸಹಿತದಿ |
ನಿತ್ಯ |
ತಮಸಿನೊಳಗೆ ವಾಸಫಲ ವ್ಯರ್ಥವಾಗದು 3

ರಾಜಸ ಗುಣದಲ್ಲಿ ಈ ಯಾತ್ರೆ ಮಾಡಲು |
ಭೂಷಣವನೆ ಯಿಟ್ಟು |
ವಾಜಿ ಗಜವಾಗಿ ಸೌಖ್ಯ
ಈ ಜಗದೊಳು ಒಟ್ಟು ಪೋಗೋದಲ್ಲದೆ ವಿ |
ರಾಜಿಸುವದು ಬಲ್ಲದೇ |
ರಾಜಮಂದಿರಕೆ ನವರತ್ನ ತೆತ್ತಿಸಿದಂತೆ |
ಈ ಜನದ ಸುಖದ ಫಲ ವ್ಯರ್ಥವಾಗುವದು4

ಮುಕ್ತಿಯೋಗ್ಯನು ಬಂದು ಯಾತ್ರೆಯ ಮಾಡಲು |
ಮುಕ್ತಿ ಉತ್ತಮ ಕುಲದಲ್ಲಿ |
ವ್ಯಕ್ತನಾಗೀ | ದಿವ್ಯ ಮನದಲ್ಲಿ ವಿರುಕುತಿ |
ಭಕ್ತಿಜ್ಞಾನದಲಿ ಬಾಳಿ |
ಶಕ್ತನೆಂದೆನೆ ಸತತ ಶ್ರೀಮದಾರ್ಯರ | ಭಕ್ತಿಲಿ ಲೋಲಾಡುತ |
ಭಕ್ತವತ್ಸಲ ವಿಜಯವಿಠ್ಠಲ ಕೃಷ್ಣಸಾರ |
ಭೋಕ್ತನಲ್ಲಿಪ್ಪನು ಫಲ ವ್ಯರ್ಥವಾಗದು 5
********