ಭೂಮಿಗೆ ಧನ್ಯ ನಾನಾದೆ ಜಗದ ವಳಗೆ
ಅಘ ಕಳಿವ ಗುರುಪಾದಯುಗಳ ಕಣ್ಣಲ್ಲಿ ಕಂಡು ಪ
ಮುಕುಟ ಮಂಡಿತ ದಿನಪ
ಪ್ರಕರ ಸನ್ನಿಭ ಶಿರದಿ
ಮಕರಂದ ಮಯವಾದ
ಶಿಖದ ಸೊಬಗು ಅಕಳಂಕಮಾದ ಫಾಲಕೆ
ವಪ್ಪುವ ತಿಲಕ ಭ್ರುಕುಟಿ ಮಧ್ಯದಿ ಪುಂಡ್ರ
ಸುಖದ ದ್ವಯದ್ರಿಕ ಕಂಡು 1
ಹರಿನಾಮ ರವಿಯ ಕಂಡರಳುವೊ ಕರ್ಣಾಖ್ಯ
ಸರಸಿರುಗ್ವಗಳು ಚಂದ್ರ ತೆರ ಶೋಭಿಪಾ
ವರಕದಪಯುತ ವದನ ಕೊರಳು ಉರುಬಲದ ಭುಜ
ಕರ ಹೃದಯ ಎರಡು ಘನ ಗೆರೆಯು ಉದರವ ಕಂಡು 2
ಧಿಟ ಕಟಿತ ಪಟರೋಮ ದಟಿತವಾಗಿಹ ಜಾನು
ಚಟುಲಶಿರಿ ಗೋವಿಂದ ವಿಠಲ ನಾಮ ಪಠಿಸಿದಾಕ್ಷಣ
ನಟಿಸುವ ಪಾದದ ಕಠಿಣ ಸಂಸಾರ ಸಂಕಟ
ಕಳೆವ ರಜಕಂಡು 3
****