Showing posts with label ದಾಸರೇ ಪುರಂದರದಾಸರು ಲೇಸಾಗಿ ಎನಗೆ vijaya vittala. Show all posts
Showing posts with label ದಾಸರೇ ಪುರಂದರದಾಸರು ಲೇಸಾಗಿ ಎನಗೆ vijaya vittala. Show all posts

Wednesday, 16 October 2019

ದಾಸರೇ ಪುರಂದರದಾಸರು ಲೇಸಾಗಿ ಎನಗೆ ankita vijaya vittala

ದಾಸರೆ ಪುರಂದರದಾಸರು
ಲೇಸಾಗಿ ಎನಗೆ ಸುಮಾರ್ಗವನು ತೋರಿದರು ||pa||

ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ
ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ
ಅತಿ ದಯಾಪರರಾಗಿ ತನ್ನವನಿವನೆಂದು
ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು||1||

ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ
ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ
ಲುಬ್ಧಕನ ಕರೆದು ದೃಢವಾಗಿ ಸುe್ಞÁನದ
ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು ||2||

ಹಿಂದೆ ಏಸೇಸು ಜನ್ಮ ಜನಿಸಿ ಅನ್ಯ
ಕಾಲ ನೊಂದ ನರನಾ
ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ
ತಂದೆ ಮಕ್ಕಳನು ಸಾಕಿದಂತೆ ಸಾಕಿದರು||3||

ಉಪದೇಶವಿತ್ತರು ಸುಪ್ರೀತಾರ್ಥದಲಿ ಬಂದು
ಜಪ ನಿಜಾಸನ ಧ್ಯಾನ e್ಞÁನದಿಂದ
ಸಪುತೆರಡು ಲೋಕದ ಒಡೆಯನ್ನ ಪಾದವ
ಸಫಲವಾಗುವಂತೆ ಸಾಧನವ ಪೇಳಿದರು ||4||

ದಾರಿದ್ರ ದೋಷವ ಸೇರಿದ ಮಾನವನಿಗೆ
ಆರು ಕೊಡದಲೆ ಧೇನು ದೊರಕಿದಂತೆ
ಕಾರುಣ್ಯದಲಿ ಗುರು ಪುರಂದರದಾಸರು
ಮೂರುತಿ ವಿಜಯವಿಠ್ಠಲನ್ನ ತೋರಿಸಿದರು ||5||
***


Dasare purandaradasaru
Lesagi enage sumargavanu toridaru ||pa||

Ati mugdhanagi durulara duracaradalli
Matigettu mahiyolage tirugutiralu
Ati dayapararagi tannavanivanendu
Hitadalli poredu kumatiya bidisidaru||1||

Sabdadi modalada vishayangala karma
Dabdhdiyolage biddu porulutidda
Lubdhakana karedu drudhavagi sujnanada
Abdhiyolagittu karunadali nodidaru ||2||

Hinde esesu janma janisi anya
Kala nonda narana
Tandu vairagyadolu pogasi saukyava parasi
Tande makkalanu sakidamte sakidaru||3||

Upadesavittaru supritarthadali bandu
Japa nijasana dhyana egnanadinda
Saputeradu lokada odeyanna padava
Sapalavaguvante sadhanava pelidaru ||4||

Daridra doshava serida manavanige
Aru kodadale dhenu dorakidante
Karunyadali guru purandaradasaru
Muruti vijayaviththalanna torisidaru ||5||
***