ರಾಗ ಮುಖಾರಿ ಖಂಡಛಾಪುತಾಳ
2nd Audio by Mrs. Nandini Sripad
dr.vidyabhushan and his daughter
vivardhini madhu rao 8 yrs Allen, Tx, USA
ಶ್ರೀ ಕನಕದಾಸರ ರಚನೆ
ಪರಮಾತ್ಮನ ಪಾದವನ್ನು ಬಿಟ್ಟು ಜೀವಿಸುವುದು ಸರ್ವಥಾ ಸಾಧ್ಯವಿಲ್ಲವೆಂಬುದನ್ನು ವಿವರಿಸುವ ಕನಕದಾಸರ ಕೀರ್ತನೆ –
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ ॥ ಪ ॥
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ ॥ ಅ ಪ ॥
ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು ।
ದಾಯಾದಿ ಬಂಧುಗಳ ಬಿಡಲು ಬಹುದು ॥
ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು ।
ಕಾಯಜಪಿತ ನಿನ್ನ ಅಡಿಯ ಬಿಡಲಾಗದು ॥ 1 ॥
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು ।
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು ॥
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು ।
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು ॥ 2 ॥
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು ।
ಮಾನದಲಿ ಮನವ ತಗ್ಗಿಸಲು ಬಹುದು ॥
ಪ್ರಾಣನಾಯಕನಾದ ಆದಿಕೇಶವರಾಯ ।
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು ॥ 3 ॥
***
Toredu jivisabahude hari ninna charanava
Toredu jivisabahude ||pa||
Baride matekinnu aritu peluvenayya
Karapididennanu kayo karunanidhi ||a.pa||
Tayi tandeya bittu tapava madalu bahudu
Dayadi bandhugala bidalu bahudu
Raya munidare rajyava bidabahudu
Kayajapita ninnadiya bidalagadu ||1||
Odalu hasidare annava bidabahudu
Padeda kshetrava bittu horadalu bahudu
Madadi makkala kadege tolagisibidabahudu
Kadalodeya nimmadiya galige bidalagadu ||2||
Pranava pararige bedidare kodabahudu
Manabimanava taggisabahudu
Pranadayakanada adikeshavaraya
Jana srikrushna ninnadiya bidalagadu ||3||
***
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಮರೆಯ ಮಾತೇಕಿನ್ನು ಅರಿತು ಪೇಳುವೆನಯ್ಯ | ಪ |
ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು
ದಾಯಾದಿ ಬಂಧುಗಳ ಬಿಡಲೂಬಹುದು
ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು
ಕಾಯಜನ ಪಿತ ನಿನ್ನ ಅಡಿಯ ಬಿಡಲಾಗದು | ೧ |
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಪೋಗಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು | ೨ |
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಲುಬಹುದು
ಪ್ರಾಣನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದೊ | ೩ |
***