Showing posts with label ಶ್ರೀವಾಮನ ಪ್ರಾದುರ್ಭಾವ ಸಾರ prasannashreenivasa. Show all posts
Showing posts with label ಶ್ರೀವಾಮನ ಪ್ರಾದುರ್ಭಾವ ಸಾರ prasannashreenivasa. Show all posts

Thursday 5 August 2021

ಶ್ರೀವಾಮನ ಪ್ರಾದುರ್ಭಾವ ಸಾರ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

on ವಾಮನ

ಪ್ರಥಮ ಅಧ್ಯಾಯ


ಶ್ರೀ ವಾಮನ ಪ್ರಾದುರ್ಭಾವ ಸಾರ

ಭೂಮಾದಿ ಗುಣನಿಧಿಯೇ ಅನಘ ಮಂಗಳರೂಪ

ವಾಮನ ಸುಸೌಂದರ್ಯಸಾರ ಲಕ್ಷ್ಮೀಶ

ಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆ

ಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪ


ಉದಿತಭಾಸ್ಕರ ನಿಭ ಸ್ವಕಾಂತಿಯಲಿ ಜ್ವಲಿಸುತಿ

ಸುದರ್ಶನ ಗದಾ ಜ್ಞಾನಪ್ರದ ದರಾ ಹಸ್ತ

ಪದುಮೆ ಸಹ ಅಜುವಿಷ್ಣು ಮಂತವ್ಯ ಸರ್ವಸ್ಥ

ಶೃತಿವೇದ್ಯ ಅಜಸೇವ್ಯ ಪ್ರಣವ ಪ್ರತಿಪಾದ್ಯ 1

ಸರ್ವ ಸೃಷ್ಟಿ ಸ್ಥಿತಿ ಲಯ ನಿಯಮನ ಜ್ಞಾನ

ಆವೃತಿ ಬಂಧ ಮೋಕ್ಷಕೆ ಮುಖ್ಯಕರ್ತ

ಸುವರ್ಣಾಂಡವ ಪಡೆದು ವ್ಯಾಪಿಸಿ ಅದರೊಳು

ಅವತಾರಗಳ ಮಾಡಿ ಸಜ್ಜನರ ಕಾಯುವಿ 2

ವೇದೋದ್ಧರ ಮತ್ಸ್ಯ ಸತ್ಯವ್ರತನಿಗೆ ಒಲಿದಿ

ಮಂದರವ ಪಾಲ್ಗಡಲಲಿ ಪೊತ್ತ ಕೂರ್ಮ

ಇಂದಿರಾಪತಿ ಅಜಿತ ಮೋಹಿನಿ ಧನ್ವಂತರಿ

ದೈತ್ಯಹರ ಭೂಮಿ ಉದ್ಧರ ಭೂವರಾಹ 3

ಪಾಪಘ್ನ ಪ್ರಹ್ಲಾದ ರಕ್ಷಕ ನೃಸಿಂಹನೇ

ವಿಷ್ಟ ವಾಮನ ತ್ರಿವೃತ್ ಗೋಪಬಾಲ

ಸುಪವಿತ್ರ ಜಮದಗ್ನಿಸುತ ಪರುಶುರಾಮ

ಪ್ರಭಂಜನ ಸೇವ್ಯ ಶ್ರೀರಾಮಚಂದ್ರ 4

ಅಜ್ಞಾನ ಹೃತ್ತಿಮಿರ ಸೂರ್ಯ ವೇದವ್ಯಾಸ

ನಿಜಭಕ್ತಜನ ಪಾಂಡವಪ್ರಿಯ ಕೃಷ್ಣ

ದುರ್ಜನ ವಿಮೋಹಕ ಸುರಸುಬೋಧಕ ಬುಧ್ಧ

ಸುಜನವಂದ್ಯನೆ ಧರ್ಮಸ್ಥಾಪಕನೆÀ ಕಲ್ಕಿ 5

ಷಡ್ರೂಪ ಹಯವದನ ಮಹಿದಾಸ ತಾಪಸ

ಕ್ಷಿಪ್ರ ವಸುಪ್ರದ ಶ್ರೀಕರ ಯಜ್ಞ್ಯ ಕಪಿಲ

ಅತ್ರಿಸುತ ವೃಷಭಾದಿ ಅನಂತಸುಖ ಚಿದ್ರೂಪ

ಅಪ್ರತಿ ಮಹೈಶ್ವರ್ಯ ಪೂರ್ಣ ಏಕಾತ್ಮ 6

ನಿವ್ರ್ಯಾಜ ಭಕ್ತಾಗ್ರಣಿಯು ಪ್ರಹ್ಲಾದನು

ಆ ಆರ್ಯನ ಸುತ ವಿರೋಚನನೆಂಬುವನು

ಆ ದೈತ್ಯನ ಪುತ್ರ ಬಲಿಮಹಾರಾಜನು

ಆಧಿಕ್ಯ ಹೊಂದಿದನು ಬಲಪೌರುಷದಲಿ 7

ದೈತ್ಯೇಯ ಬಲಿರಾಜ ಬಲಉನ್ನಾಹದಿಂ

ಜಗತ್ರಯವ ತನ್ನ ವಶ ಮಾಡಿಕೊಂಡ

ಇಂದ್ರಾದಿಗಳು ಐಶ್ವರ್ಯ ಶ್ರೀಯಶಸ್ಥಾನ

ವಿದುರರಾಗಲು ದೇವಮಾತೆ ಯೋಚಿಸಿದಳು 8

ಸರ್ವಭೂತ ಗುಹಾವಾಸ ವಾಸುದೇವ ಜಗದ್ಗುರು

ಸರ್ವ ಜಗತ್ಪತಿ ಕೇಶವನಿಗೆ ಪ್ರಿಯವಾದ

ಪಯೋವ್ರತವ ಭಕ್ತಿಯಿಂದಲಿ ಮಾಡುವುದೆಂದು

ದೇವಮಾತೆಗೆ ಪತಿ ಕಶ್ಯಪ ಪೇಳಿದನು 9

ಆದಿವರಾಹನೇ ಮಹಾಪುರುಷ ಸರ್ವ -

ಭೂತ ನಿವಾಸನೇ ವಾಸುದೇವ

ಸದಾ ಸರ್ವ ಸಚ್ಛಕ್ತಿ ಪರಿಪೂರ್ಣ ಸರ್ವ

ವಿದ್ಯಾಧಿಪತಿ ಶುಭಮಂಗಳ ಸ್ವರೂಪ 10

ಸರ್ವ ಜಗಜ್ಜ£್ಮÁದಿಕರ್ತನೇ ಜಗದೀಶ

ಸರ್ವ ಜಗತ್ರಾಣ ಚೇಷ್ಟಕ ನಿಯಾಮಕನೇ

ವಿಶ್ವತೋ ಮುಖ ಆದಿದೇವ ನಿನಗೆ ನಮೋ

ಶ್ರೀವರ ನಾರಾಯಣ ನರಹರೇ ಸ್ವಾಮಿ 11

ಮರಗದ ಶ್ಯಾಮ ಅನಿರುದ್ಧ ಪ್ರದ್ಯುಮ್ನ

ಸಿರಿಕಾಂತ ಸರ್ವೇಶ ಕೇಶವ ನಮಸ್ತೆ

ಪುರುಟಾಂಬರಧಾರಿ ಸುರವರೇಣ್ಯನೇ ನಮೋ

ಸರ್ವ ವರದನೇ ಶ್ರೀದ ಕರುಣಾಂಬುನಿಧಿಯೇ 12

ಅದಿತಿ ದೇವಿಯು ಪಯೋವ್ರತವ ಮಾಡಿದಳು

ವಿಧಿಪೂರ್ವಕ ಭಕ್ತಿ ಶ್ರಧ್ಧೆಯಿಂದ

ಆದಿ ಪೂರುಷ ಭಗವಂತ ಶಂಖ ಚಕ್ರ

ಗದಾಧರನೇ ಅದಿತಿಗೆ ಪ್ರತ್ಯಕ್ಷನಾದಿ 13

ಕಣ್ಣೆದುರಿಗೆ ನಿಂತ ನಿನ್ನ ನೋಡಿ ಅದಿತಿ

ಆನಂದ ಬಾಷ್ಪವ ಸುರಿಸುತ್ತ ದೀರ್ಘ

ಪ್ರಣಾಮವ ಮಾಡಿದಳು ಗದ್ಗದ ಕಂಠದಿಂ

ನಿನ್ನ ಸ್ತುತಿಸಿದಳು ಆ ದೇವಮಾತೆ 14

ತೀರ್ಥಪಾದನೇ ತೀರ್ಥಶ್ರವ ಶ್ರವಣ ಮಂಗಳ

ನಾಮಧೇಯನೇ ಯಜÉ್ಞೀಶ ಯಜ್ಞಪುರುಷ

ಅಚ್ಯುತನೇ ರಕ್ಷಿಸುವಿ ಪ್ರಪನ್ನಪಾಲಕ ನಮೋ

ಶ್ರೀದ ಶ್ರೀಪತೇ ವಿಷ್ಣೋ ಧೀನನಾಥ 15

ಅಖಂಡೈಕ ಸಾರಾತ್ಮ ವಿಶ್ವವ್ಯಾಪಕವಿಶ್ವ

ಅಕಳಂಕ ಸರ್ವೋರು ಸಚ್ಚಕ್ತಿಪೂರ್ಣ

ಏಕಾತ್ಮ ಸರ್ವಜ್ಞ ಸುಖಜ್ಞಾನಪ್ರದ ಭೂಮನ್

ನಿಖಿಳಗುಣ ಐಶ್ವರ್ಯಪೂರ್ಣ ಹರೇ ಶ್ರೀಶ 16

ಅದಿತಿಯ ವ್ರತಾಚರಣೆ ಮೆಚ್ಚಿ ಕಮಲಾಕ್ಷ ನೀ

ಅದಿತಿಯ ಸುತನೆನಿಸಿ ಭವಿಸುವಿ ಎಂದಿ

ಮುದದಿ ಈ ರಹಸ್ಯವ ಪತಿಗೆ ಪೇಳ್ದಳು ಅದಿತಿ

ಆ ದಂಪತಿ ಕೂಡಿ ನಿರೀಕ್ಷಿಸಿದರು ನಿನ್ನ 17

ಜಗನ್ನಿವಾಸನೆ ನೀನು ದೇವಮಾತೆಯೊಳು

ಝಗಝಗಿಸಿಪೊಳೆದಿಯೋ ಉರು ಮಹಾತೇಜ

ಪೊಗಳಲಳವೇ ನಿನ್ನ ಲೀಲಾವತಾರಗಳ

ಅಗಣಿತ ಮಹಿಮೆಗಳ ದೇವ ದೇವೇಶ 18

ಸನಾತನನೇ ಅನಘನೇ ಅಜನೇ ಭಗವಂತನೇ

ನೀನು ಅದಿತಿಯಲಿ ಅವತರಿಪುದರಿತು

ವನರುಹಾಸನ ಹಿರಣ್ಯಗರ್ಭನು ಬಂದು

ಶ್ರೀನಿಧಿಯೇ ಶ್ರೀಶ ನಿನ್ನನ್ನು ಸ್ತುತಿಸಿದನು 19

ಜಯೋರುಗಾಯ ಭಗವನ್ ಉರುಕ್ರಮ ನಮೋಸ್ತುತೇ

ತೋಯಜಾಸನ ಹೀಗೆ ಇನ್ನೂ ಬಹುವಿಧದಿ ಸ್ತುತಿಸಿದ

ತೋಯಜಾಕ್ಷ ಶಿಪಿವಿಷ್ಟ ವಿಷ್ಣು ಸರ್ವೋತ್ತಮ

ಅಚ್ಯುತಾನಂತೋರು ಶಕ್ತಿಮಯ ನಿನ್ನ 20

ಪದುಮಭವ ಸನ್ನುತನೇ ಆನಂದಮಯ ನೀನು

ಪ್ರಾದುರ್ಭವಿಸಿದಿ ಅದಿತಿ ದೇವಮಾತೆಯಲಿ

ಚತುರ್ಭುಜವು ಶಂಖಗದಾ ಅಬ್ಜ ಚಕ್ರ

ಪೀತ ಕೆಂಪು ವಸನವನ್ನ ಧರಿಸಿದ್ದಿ 21

ಅನುಪಮ ಸುಸೌಂದರ್ಯ ಚಾರ್ವಾಂಗ ಕಾಂತಿಯು

ನಳಿನಾಯತೇಕ್ಷಣ ಮಕರಕುಂಡಲವು

ಆನಂದ ಸುಪ್ರಚುರ ವದನಾರವಿಂದವು

ಏನೆಂಬೆ ಗಂಭೀರವಕ್ಷ ಶ್ರೀವಕ್ಷ 22

ವನಮಾಲೆ ಸುಸ್ಫುರತ್ ಕಿರೀಟಾಂಗದಾದಿಗಳು

ವನಜಾಸನಾಶ್ರಿತ ಕೌಸ್ತುಭಮಣಿಯು

ಸುನೂಪುರ ತೊಟ್ಟ ಶುಭಮಂಗಳಪಾದ

ನಿನ್ನ ಪ್ರಾದುರ್ಭಾವ ವರ್ಣಿಸಲು ಅರಿಯೆ 23

ಸೌರ ಶ್ರಾವಣ ಸಿಂಹ ಚಾಂದ್ರ ಭಾದ್ರಪದ

ನೀ ಪ್ರಾದುರ್ಭವಿಸಿದ್ದು ಸಿತ ಶ್ರಾವಣ ದ್ವಾದಶಿ

ಚಿತ್ರ ವಾದ್ಯಗಳ ಘೋಷ ಸಿದ್ಧಿ ವಿದ್ಯಾಧರರು

ಸುರಗಾಯಕರುಗಳ ಗಾಯನ ನೃತ್ಯ 24

ಜಯ ಜಯತು ಜಯ ಜಯ ವಾಮನ ವಟುರೂಪ

ಜಯ ಜಯತು ಶಾಶ್ವತ ಸರ್ವಸ್ಥ ವಿಷ್ಣೋ

ಜಯ ಜಯತು ಸರ್ವ ಜಗಜ್ಜನ್ಮಾದಿಕರ್ತ

ಜಯ ಜಯ ಪರಮ ಪೂರ್ಣೈಶ್ವರ್ಯ ಜಯತು 25

ಸುಂದರ ವಟು ವಾಮನ ನಿನ್ನ ನೋಡಿ

ಮಂದಜಾಸನ ಮಹಾ ಋಷಿವರ್ಯರು ಬಹು

ಆನಂದಭರಿತರು ಆಗಿ ಸಂಸ್ಕಾರ

ಅಂದದಿ ಚರಿಸಿದರು ವೈದೀಕ ರೀತಿಯಲಿ 26

ಬ್ರಹ್ಮಾದಿದೇವರು ಮಹಾಋಷಿಗಳು ಪರ -

ಬ್ರಹ್ಮ ವಾಮನ ನಿನಗೆ ಉಪನಯನರೂಪ

ಮಹಾಪೂಜೆ ಚರಿಸಿದರು ಮುದಭಕ್ತಿಯಿಂದಲಿ

ಮಹಾರ್ಹನೇ ನಿನಗಿದು ಅವತಾರ ಲೀಲ 27

ದೇವವರೇಣ್ಯ ಬ್ರಹ್ಮಣ್ಯದೇವನೇ ನಿನಗೆ

ದೇವತಾವೃಂದವು ನೆರದಿದ್ದ ಮುನಿಗಳು

ಸಾವಿತ್ರೀಂ ಸವಿತಾ ಭ್ರವೀತ್ ಬೃಹಸ್ಪತಿ ಬ್ರಹ್ಮಸೂತ್ರಂ

ಈ ವಿಧದಿ ಮುದಮನದಿ ಅರ್ಪಿಸಿದರು 28

ಕಮಂಡಲ ವೇದಗರ್ಭನು, ಕೃಷ್ಣಾಜಿನ

ಭೂಮಿ, ದಂಡ, ಸೋಮ, ಕುಶ ಸಪ್ತ ಋಷಿಗಳು

ಸುಮೇಖಳ ಕಶ್ಯಪ, ಕೌಪೀನ ಅದಿತಿಯು

ಉಮಾ ಭಗವತಿಬಿಕ್ಷಾಪಾತ್ರೆ ವಿತ್ತಪನು 29

ಈ ರೀತಿ ಮೇಖಳ ಸೂತ್ರ ಆಚ್ಛಾದನ

ಛತ್ರ ಕೃಷ್ಣಾಜಿನ ಕಮಂಡಲು ದಂಡ

ಪಾತ್ರೆ ಅಕ್ಷಮಾಲಾದಿ ವಸ್ತುಗಳು ದರ್ಭೆ

ಪರಿಪರಿ ದೇವತೆಗಳು ಅರ್ಪಿಸಿದರು 30

ಮಹಾಪೂರುಷ ಶಿಪಿವಿಷ್ಟ ವಾಮನ ವಿಷ್ಣೋ

ಮಹಾದುರ್ಗ ಭೂ ಶ್ರೀಶ ನಿನ್ನ ಉಪನಯನ

ಮಹೋತ್ಸವದ ವೈಭವವು ಹೋಮ ಪೂಜಾದಿಗಳು

ಮಹಿಯಲ್ಲಿ ಅಸದೃಶವು ಸರ್ವಕಾಲದಲು 31

ಸೂತ್ರ ಮೇಖಳ ಕೌಪೀನ ಆಚ್ಛಾದನ

ಛತ್ರಮಾಲಾ ಕಮಂಡಲು ದಂಡಹಸ್ತ

ಚಂದ್ರಾರ್ಕ ಕೋಟ್ಯಮಿತ ಜ್ಯೋತಿರ್ಮಯ ವಟುರೂಪ

ಶ್ರೀರಮಣ ಪದ್ಮಭವ ರುದ್ರಾದಿವಂದ್ಯ 32

ಮಧ್ವಸ್ಥ ಪರ್ವಸ್ಥ ಮತ್‍ಸ್ಥ ವಿಧಿತಾತ

ಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯ

ಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸ

ಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 33

-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -

***

ದ್ವಿತೀಯ ಅಧ್ಯಾಯ  ದಾನಪ್ರಕರಣ ಸಾರ

ಭೂಮಾದಿ ಗುಣನಿಧಿಯೇ ಅನಘ ಮಂಗಳರೂಪ

ವಾಮನ ಸುಸೌಂದರ್ಯಸಾರ ಲಕ್ಷ್ಮೀಶ

ಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆ

ಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪ


ಸರಸಿಜೋದ್ಭವ ಸುರವೃಂದ ಮಹಾಋಷಿಗಳು

ಮರೀಚಿಸುತ ಮೊದಲಾದ ಸುಧೀಗಳು ನಿನಗೆ

ಚರಿಸಿದ ಉಪನಯನ ರೂಪಮಹೋತ್ಸವವ

ಸ್ವೀಕರಿಸಿ ಜ್ವಲಿಸಿದಿ ಬ್ರಹ್ಮಣ್ಯದೇವ 1

ನೋಡಿದ ಮಾತ್ರದಲೆ ಸುಜನ ವಿಶ್ವಾಸಿಗಳು

ಮಾಡಿದ ಪಾಪ ಪರಿಹರಿಪ ನರ್ಮದೆಯ

ದಡ ಉತ್ತರದಲಿ ಯಜ್ಞ ಶಾಲೆ ಕಟ್ಟಿ

ದೊಡ್ಡ ಕ್ರತು ಮಾಡುತ್ತಿದ್ದನು ಬಲಿರಾಜ 2

ಮೌಂಜಿ ಮೇಖಳ ಸೂತ್ರದಿಂದ ಬೆಳಗುತ್ತ

ಸಜಲ ಕಮಂಡಲು ಸುದಂಡ ಛತ್ರ

ಪ್ರಜ್ವಲಿಪ ಚಿನ್ಮಯ ಜಟಿಲ ವಾಮನ ವಿಪ್ರ

ಯಜ್ಞ ಶಾಲೆಯೊಳು ಪ್ರವೇಶ ಮಾಡಿದಿಯೋ 3

ಜ್ವಲಿಸುವ ಸ್ವಕಾಂತಿಯುಕ್ ಮಾಯಾ ಮಾಣವಕ

ಬಾಲ ಸುಂದರ ಬ್ರಹ್ಮಚಾರಿ ಹರಿ ನಿನ್ನ

ಬಲಿರಾಜ ಆಚಾರ್ಯ ಶುಕ್ರಾದಿಗಳು ನೋಡಿ

ಬಲುಹರುಷದಲಿ ಎದ್ದು ಸ್ವಾಗತಮಾಡಿದರು 4

ಭಗವಂತ ವಾಮನ ನಿನ್ನ ಪಾದದಿ ಬಲಿ

ಬಾಗಿ ನಮಿಸಿ ಸ್ವಾಗತಂ ತೇ ನಮಸ್ತುಭ್ಯಂ

ಹೀಗೆಂದು ತನ್ನ ಪಿತೃಗಳು ತೃಪ್ತರಾದರು

ತನ್ನ ಕುಲ ಪಾವಿತವಾಯ್ತೆಂದು ಪೇಳ್ದ 5

ವನಜಜಾಂಡದ ಒಡೆಯ ರಾಜರಾಜೇಶ್ವರನೇ

ನಿನ್ನ ಮುಂದೆ ಕರ ಮುಗಿದು ಬಲಿರಾಜ

ಧೇನು ಕಾಂಚನ ಗ್ರಾಮ ವಿಪ್ರ ಕನ್ಯಾದಿಗಳು

ಏನು ನೀ ವಾಂಛಿಸಿದರೂ ಕೊಳ್ಳಬಹುದೆಂದ 6

ಸುಗಮ ಸುಹೃತ್ ಧರ್ಮಯುಕ್ ಈ ಮಾತಲ್ಲಿ

ಭಗವಂತ ನೀ ಪ್ರೀತನಾದದ್ದು ಪ್ರಕಟಿಸಿ

ಲೋಕದಲಿ ಪ್ರಖ್ಯಾತ ಬಲಿಯ ಕುಲಕೀರ್ತಿಯ

ಪೊಗಳಿದಿಯೋ ಬ್ರಾಹ್ಮಣ ಮಹೇಜ್ಯ ಪರಮೇಶ 7

ಆಕಾಶದಲಿ ಆಹ್ಲಾದಕರ ಉಡುಪನು

ಪ್ರಕಾಶಿಸುವಂತೆ ಪ್ರಹ್ಲಾದನ ಯಶಸ್ಸು

ಉತ್ಕøಷ್ಟವಾದದ್ದು ವ್ಯಾಪಿಸಿ ಜಗತ್ತಲ್ಲಿ

ಪ್ರಕಾಶಿಸುತೆ ಆ ಕುಲೋತ್ಪನ್ನನು ಬಲಿಯು 8

ಮಹಾ ಗದಾಯುಧದಾರಿ ದಿಗ್ವಿಜಯ ಶೂರನು

ಆ ಹಿರಣ್ಯಾಕ್ಷನ ಅಣ್ಣನು ಆದ

ಪ್ರಹ್ಲಾದಪಿತ ಹಿರಣ್ಯಕಶಿಪು ವೀರನು

ಮಹೀಯಲ್ಲಿ ಖ್ಯಾತವು ಈ ದೈತ್ಯ ಕುಲವು 9

ಆ ಜಗತ್ ಪ್ರಖ್ಯಾತ ಪ್ರದ್ಲಾದನಸುತ

ದ್ವಿಜವತ್ಸಲ ತನ್ನ ಆಯುಷ್ಯವ

ದ್ವಿಜವೇಷದಿ ಬಂದ ಸುರರಿಗೆ ಕೊಟ್ಟಿದ್ದು

ಮೂರ್ಜಗ ಅರಿವುದು ಬಲಿ ಆ ಕುಲೀನ 10

ಇಂಥ ಕುಲದಲಿ ಬಂದ ಪ್ರಹ್ಲಾದ ಪೌತ್ರ

ಈ ಧರ್ಮವಂತ ಬಲಿ ಎಂದು ನೀ ಪೇಳಿ

ಪದಾನಿ ತ್ರೀಣಿ ದೈತ್ಯೇಂದ್ರ ಸಂಹಿತಾನಿ

ಪದಾಮಮ ಎಂದು ಭೂಮಿ ಯಾಚಿಸಿದಿ 11

ನಳಿನಜಾಂಡದ ದೊರೆ ಹರಿ ನಿನ್ನ ಮಾಯೆಯಿಂ

ಬಾಲಿಶಮತಿಯೇ ಮೂರಡಿ ಯಾಕೆ ಕೇಳುತಿ ಎಂದ

ಬಲಿಯು ತನ್ನಲಿ ಕೊಂಡವ ಪೂರ್ಣನಾಗುವ

ಮತ್ತೆಲ್ಲೂ ಪುನರ್ಯಾಚಿಸನು ಎಂದು ಪೇಳಿದನು 12

ಕರ್ಮಜ ದೇವತಾ ಕಕ್ಷದವ ಬಲಿರಾಜ

ಕರ್ಮ ನಿಮಿತ್ತದಿ ಸಂಸಾರ ಸುಳಿಯ

ಊರ್ಮಿಗಳಿಗೊಳಗಾದ ಭಕ್ತನಲಿ ಕರುಣಿಸಿದಿ

ಧರ್ಮನೀತಿ ಪೇಳಿದಿ ಶ್ರೀಶ ಮುಕುಂದ 13

ಇಂದ್ರಿಯ ಅಭಿಲಾಷೆ ಜಯಿಸದವನ ಆಶೆಗೆ

ಮಿತಿಯಿಲ್ಲ ಬೆಳೆಯುವುದು ಮೇಲು ಮೇಲು

ಯದೃಚ್ಛಾಲಾಭ ಸಂತುಷ್ಟ ವಿಪ್ರನತೇಜಸ್ಸು

ವರ್ಧಿಸುವುದು ಮತ್ತು ಸುಖವೀವುದೆಂದಿ 14

ಈ ರೀತಿ ಬಲಿರಾಜನಿಗೆ ಇನ್ನೂ ಪೇಳಿ

ಮೂರಡಿ ಮಾತ್ರವೇ ಕೊಳ್ಳುವಿ ಎನಲು

ಧಾರೆ ಎರೆದು ಕೊಡಲು ಬಲಿಯು ನಿಶ್ಚೈಸಲು

ಅರಿತು ಶಿಷ್ಯನ ಎಚ್ಚರಿಸಿದ ಶುಕ್ರ 15

ವೇದ ವೇದಾಂತ ಕೋವಿದ ಶುಕ್ರಾಚಾರ್ಯರು

ಬುದ್ಧಿ ವಿದ್ಯಾ ನಿಪುಣರು ಕುಶಲ ಕವಿವರರು

ದೈತ್ಯರಿಗೆ ಕುಲಗುರು ಶ್ರೀದ ಶ್ರೀಹರಿ ನಿನ್ನ

ಭಕ್ತವರ್ಯರು ಎಂದು ನಮಿಪೆ ಸಂತೈಸು 16

ಶಿಷ್ಯ ವೈರೋಚನನಿಗೆ ಪೇಳಿದನು ಶುಕ್ರ

ಶ್ರೀಶ ಭಗವಂತನು ವಿಷ್ಣು ಅವ್ಯಯನೆ

ಕಶ್ಯಪ ಅದಿತಿಯಲಿ ಭವಿಸಿ ದೇವತೆಗಳ

ಕಾರ್ಯಸಾಧನಕಾಗಿ ಬಂದಿರುವ ಎಂದ 17

ಮತ್ತು ಪೇಳಿದ ಈ ದಾನ ಕೊಡುವುದರಿಂದ

ದೈತ್ಯರಿಗೆ ಅಕ್ಷೇಮ ಬಲಿಯ ಶ್ರೀ ಸ್ಥಾನ ಯಶಸ್ಸು

ಮೊದಲಾದ ಸರ್ವವೂ ಪೋಗುವವು ಸ್ವರ್ಗ ಸಂ -

ಪತ್ತು ಅಧಿಪತ್ಯವ ಶಕ್ರನಿಗೆ ಕೊಡುವ 18

ಇಂಥಾ ಮಾಯಾ ಮಾಣವಕ ಹರಿ ವಾಮನನು

ಪಾದ ಎರಡಲಿ ಧರೆ ದಿವಿ ಅಳೆದು ಮೂರ -

ನೇದನು ಬಲಿ ಕೊಡಲು ಆಗದೆ ನರಕ ಪೋಗು -

ವದು ತಪ್ಪಿಸೆ ದಾನ ಕೊಡಬೇಡ ಎಂದ 19

ಇನ್ನೂ ಬಹು ವಿಧದಲಿ ದಾನ ಬಗೆ ಶುಕ್ರ

ತನ್ನ ಶಿಷ್ಯನಿಗೆ ಬೋಧಿಸಿದರೂ ಸಹ

ಮನ ಸೋಲದೆ ಬಲಿರಾಜ ಧಾರೆ ಎರೆದು

ದಾನವ ಕೊಡುವೆನು ಎಂದ ವಿನಯದಲಿ 20

ಗುರುಗಳ ಮಾತಲ್ಲಿ ಅನಾದರವ ತೋರಿಸಿದ

***