Showing posts with label ಶೋಭಾನ ಪಾಂಡುರಂಗಗೆ pranesha vittala. Show all posts
Showing posts with label ಶೋಭಾನ ಪಾಂಡುರಂಗಗೆ pranesha vittala. Show all posts

Tuesday, 5 November 2019

ಶೋಭಾನ ಪಾಂಡುರಂಗಗೆ ankita pranesha vittala

shobhana by pranesha dasa
ಶೋಭಾನ ಪಾಂಡುರಂಗಗೆ | 
ಶೋಭನ ಶ್ರೀನಿವಾಸಗೆ |
ಶೋಭನ ಉಡುಪಿ ನಿಲಯಾಗೇ ||pa||

ಸುಮನಸರಾಳ್ದವನ ವರಜ ಬಾ |ಕಮಲೆ ಸದನ ಮುಖಕಂಜ ರವಿ ಬಾ |
ವಿಮಲ ಗುಣಾರ್ಣವ ನೀಲ ಜಲದನಿಗಾತ್ರಾ ಬಾ ||
ವಾರಿಜನೇತ್ರ ಬಾ ಮಂಗಳ ಸ್ತೋತ್ರ ಬಾ |
ವಹನ ಪತತ್ರಾ ಬಾ ನತಜನ ಮಿತ್ರಾ ಬಾ ಹಸಿಯಾ ಜಗುಲೀಗೇ ||1||

ಅಷ್ಟನಾಮ ಒಪ್ಪುವನೇ ಬಾ | ದುಷ್ಟ ದಿತಿ ಸುತ ಮದಹರಣಾ ಬಾ |
ಮುಷ್ಟಿಕ ಪ್ರಮುಖಹ ಗೋವರ್ಧನಧರ ಕೃಷ್ಣಾ ಬಾ ||
ಹರಿಗತಕಷ್ಟಾ ಬಾ ತ್ರಿಜಗಚ್ಚೇಷ್ಟಾ ಬಾ |
ಅಕ್ಷರ ಜೇಷ್ಠಾ ಬಾ ನಿರುತ ವಿಶಿಷ್ಟಾ ಬಾಹಸಿಯಾ ಜಗುಲೀಗೇ ||2||

ಮಾತುಳ ರಿಪು ವನ ಅನಳ ಬಾ |ಶ್ವೇತವಹನ ರಥ ಸಾರಥಿ ಬಾ |
ಮಾತಿ ಶಿರ ಕಡಿದು ಬಾಹುಜರೊರಸಿದ ನಾಥಾ ಬಾ ||
ಗೋಕುಲ ತ್ರಾತಾ ಬಾ ಲೋಕೈಕ ದಾತಾ ಬಾ |
ವಸುದೇವ ಜಾತಾ ಬಾ ಸುಪ್ರಖ್ಯಾತಾ ಬಾ ಹಸಿಯಾ ಜಗುಲೀಗೇ ||3||

ವಾಮನ ಕೇಶವ ಹಯಮುಖ ಬಾ |ಭೀಮ ವಿನುತ ನಿಃಸೀಮಾ ಬಾ |
ಕಾಮಿನಿಯರ ಚೈಲಹರಣ, ಋಷಿ, ರಣಭೀಮಾ ಬಾ ||
ದಶರಥ ರಾಮಾ ಬಾ ಬಾಣವಿರಾಮಾ ಬಾ |
ಅಜಮುಖ ನಾಮಾ ಬಾ ಕೃಷ್ಣಾ ಪ್ರೇಮಾ ಬಾ ಹಸಿಯಾ ಜಗುಲೀಗೇ ||4||

ಕಂದರ್ಪ ಜನಕ ನರಹರಿ ಬಾ |ಅಂದಮೃತವ ತಂದವನೇ ಬಾ |
ಮಂದೇತರ ಮುದ ಘಟಜ ಪ್ರಮುಖ ಮುನಿವಂದ್ಯಾ ಬಾ ||
ಕಸ್ತುರಿ ಛಂದಾ ಬಾ ದೇವ ಮುಕುಂದಾ ಬಾ |
ದೇವಕಿ ಕಂದಾ ಬಾ ಸದ್ಗುಣ ವೃಂದಾ ಬಾಹಸಿಯಾ ಜಗುಲೀಗೆ ||5||

ಕ್ಷಿತಿಧರ ಜಿನಧರ ಸಖನೇ ಬಾ |ಅತುಳ ಮಹಿಮನೆ ಅಜಿತನೇ ಬಾ |
ಸತಿಗಮರ ಸದನದ ಕುಸುಮ ತಂದಚ್ಯುತನೇ ಬಾ ||
ಮೂರುತಿ ಸುತನೆ ಬಾ ಲೋಕ ವಿತತನೆ ಬಾ |
ಪೂಜಿಗುಚಿತನೆ ಬಾ ರಕ್ಷಣರತನೇ ಬಾಹಸಿಯಾ ಜಗುಲೀಗೆ ||6||

ಪ್ರಾಣೇಶ ವಿಠ್ಠಲರಾಯಾ ಬಾ |ವೀಣಾಪಾಣೀ ಜನಕನೆ ಬಾ |
ಮಾಣದೆ ಭಕ್ತರ ಪೊರವುತಿಹನೆ ಸತ್ರಾಣಾ ಬಾ ||
ಸತ್ಯಾ ಪ್ರಾಣಾ ಬಾ ಶ್ರೀ ಪಾಠೀಣಾ ಬಾ |
ನಿಜ ವಿಜ್ಞಾನ ಬಾ ನಿತ್ಯ ಕಲ್ಯಾಣಾ ಬಾ ಹಸಿಯಾ ಜಗುಲೀಗೆ ||7||
*******