..
ಮಾಣೆದೆ ಅನುದಿನ ಸಾನುರಾಗದಿ ಸಲಹೋ
ವಾನರೋತ್ತಮ ಮಾರುತಿ ಪ
ವಾಣಿಯ ಮುದಕೆ ಕ್ಷೋಣಿ ಕುಮುದಕೆÉ
ಏಣಿಲಾಂಛನನೆನಿಸಿ ಗಾಣಧಾಳದಿ ತಾಣಗೈದಿಹ ಪ್ರಾಣದೇವನೆ ಅ.ಪ
ಯುಗಯುಗದಲಿ ಜನಿಸಿ | ರಘುಕುಲೇಶನ ಸ್ತುತಿಸಿ
ಜಿಗಿದು ವಾರಿಧಿ ಲಂಘಸಿ ||
ಜಗದ ಜನನಿಗೆ ಕ್ಷೇಮತಿಳುಹಿದ ಒದೆದು
ದಶಾನನನ ನಗರ ದಹಿಸಿದ | ಸುಗುಣ ನಾಲ್ಮೊಗ
ಪದಾರ್ಹನೆ ಮುಗಿವೆ ಕರವನು ಅಘವ ಓಡಿಸಿ 1
ದ್ವಾಪರದಲ್ಲಿ ಬಹುಪಾಪಾತ್ಮಕರಾದ
ಭೂಪಾಲರ ಧುರದಿ | ಕೋಪದಿ ಸಂಹರಿಸಿ
ಸತಿಮಣಿ ದ್ರೌಪದಿಗೆ ಮುದವಿತ್ತು ಸೇವೆಯನು
ಗೋಪತಿ ಶ್ರೀಕೃಷ್ಣ ಸಲಹಿದ ಭಾಪು ಭಾಪು ಪರಾಕ್ರಮಶಾಲಿ 2
ಬಂದು ಈ ಯುಗದಿ ಮಧ್ಯಮಂದೀರಾತ್ಮಜನಾಗಿ
ಮಂದರ ಮತವ ಮುರಿದು ||
ನಂದಕಂದ ಮುಕುಂದ ಶಾಮಸುಂದರನೆ ಪರ |
ನೆಂದು ವಿಜಯದಿ ದುಂದುಭಿ ಮೊಳಗಿಸಿದ
ಕಾರಣ ಗುರುಗಂಧವಾಹನ 3
***