Showing posts with label ಹರಿಪರಮಪುರುಷ ಮಿಕ್ಕಾಮರರೆಲ್ಲ ಅಚ್ಯುತನ ಚರಣಸೇವಕರೆಂದು ನೆರೆ ನಂಬಿರೊ hayavadana. Show all posts
Showing posts with label ಹರಿಪರಮಪುರುಷ ಮಿಕ್ಕಾಮರರೆಲ್ಲ ಅಚ್ಯುತನ ಚರಣಸೇವಕರೆಂದು ನೆರೆ ನಂಬಿರೊ hayavadana. Show all posts

Wednesday, 1 September 2021

ಹರಿಪರಮಪುರುಷ ಮಿಕ್ಕಾಮರರೆಲ್ಲ ಅಚ್ಯುತನ ಚರಣಸೇವಕರೆಂದು ನೆರೆ ನಂಬಿರೊ ankita hayavadana

 ..

ಹರಿ ಪರಮಪುರುಷ ಮಿಕ್ಕಾಮರರೆಲ್ಲ ಅಚ್ಯುತನ

ಚರಣಸೇವಕರೆಂದು ನೆರೆ ನಂಬಿರೊ ಪ.


ಒಂದುಮನೆಯೊಳೆರೆಡು ಕೇಣಿಯಲ್ಲಿಪ್ಪುವರ

ಒಂದಾದರೆಂದು ಬಗೆಯೆ ಬುಧರಿಗುಚಿತವೆ

ಇಂದಿರೇಶನು ಭಾಗಭಾಗವ ತಾಳಿ

ಒಂದು ಪ್ರತಿಮೆಯೊಳಿದ್ದರೊಂದಾಹರೆ 1


ಒಬ್ಬನಿಂದಲಿ ಸಾಯನೆಂಬೋ ರಕ್ಕಸರೊಲ್ಲರೊಬ್ಬರ

ರ್ಧಭಾಗವ ತಾಳಿ ಐತಂದು

ಕೊಬ್ಬಮುರಿವರು ಖಳನ ಹರಿಹರರು ತಾವೀಗ

ಒಬ್ಬನಿಂದಲಿ ದನುಜನೆಂತಳಿದನು 2


ನರಸಿಂಹನಂತೆ ಕೃಷ್ಣನು ತನ್ನ ಲೀಲೆಯಲಿ

ಹರನಂದವ ತಾಳಿ ಗುಹನ ಗೆಲಿದನು ಗಡಾ

ಪರಿಪರಿ ವೇಷದಲಿ ನಟನಂತೆ ನಲಿವ ದೇ-

ವರದೇವನಿರವನಾವನು ಬಲ್ಲನು 3


ಆವನಂಘ್ರಿಯ ತೀರ್ಥ ಗಂಗೆಯಾದಳು ಭಸ್ಮ

ದÉೀವರಿಪುವನು ಗೆಲಿದ ಭೃಗುಮುನೀಂದ್ರನು

ಆವವನು ಮೂರ್ಲೋಕದೊಳಧಿಕನೆಂದೊರೆದ

ಆ ವಿಷ್ಣು ಹಯವದನ ಹರಿಯಂತೆ 4

***

ಹರಿಚರಣವ ನೋಡಬರಲಿ ಕೃಷ್ಣಶರಣಜನರು ಸುಕೃತವ ಸೊರೆಗೊಳಲಿ ಪ.


ಬ್ರಹ್ಮರುದ್ರಾದಿಗಳೆಲ್ಲ ತಮ್ಮತಮ್ಮ ಮನದಿ ನೆನೆವುದು ಪುಸಿಯಲ್ಲನಮ್ಮ ದೃಷ್ಟಿಗೆ ತೋರಿತಲ್ಲ ಇನ್ನುಜನ್ಮ ಸಫಲವಪ್ಪುದಲಸಿಕೆ ಸಲ್ಲ 1


ಶ್ರುತಿಸ್ಮøತಿ ಕೊಂಡಾಡುತಿ[ದಿ]ಕೋ ನಾನಾಮತದಲ್ಲಿ ಮಾಡುವ ವಹಮಾನ ಸಾಕುಪತಿತಪಾವನೆಗಂಗೆ ಇದಕೋ ಇನ್ನುಮತಿಯುಳ್ಳ ನಿಪುಣರು ನಿಶ್ಚೈಸಬೇಕು 2


ವೇದೇ ರಾಮಾಯಣೇ ಎಂಬಆಧ್ಯೇಯಂ ಸದಾಯೆಂಬ ವಚನವನೆಂಬಮೋದಿ ಹಯವದನ ಡಂಬವಿಲ್ಲ-ದಾದರಮಾತ್ರ ಪೂಜೆಯನೆ ಕೈಕೊಂಬ3

***