Showing posts with label ಯಾಕೆ ನಡುಗುವೆ ತಾಯಿ ಭೂಕಾಂತೆಯೆ lakshmikanta. Show all posts
Showing posts with label ಯಾಕೆ ನಡುಗುವೆ ತಾಯಿ ಭೂಕಾಂತೆಯೆ lakshmikanta. Show all posts

Sunday, 1 August 2021

ಯಾಕೆ ನಡುಗುವೆ ತಾಯಿ ಭೂಕಾಂತೆಯೆ ankita lakshmikanta

 ..


kruti by ಲಕ್ಷ್ಮೀನಾರಯಣರಾಯರು Lakshminarayanaru 


ಯಾಕೆ ನಡುಗುವೆ ತಾಯಿ ಭೂಕಾಂತೆಯೆ ಪ


ಲೋಕನಾಥನ ರಾಣಿ ಪರಮ ಕಲ್ಯಾಣಿ ಅ.ಪ.


ಬುಧರು ಸನ್ಮಾರ್ಗವನು ಒದರಿ ಬಿಟ್ಟರೆ ತಾಯಿ

ಅದಟರಾದವರು ಗರ್ವದಿ ಮೆರೆವರೆ

ಮದದ ಸಂಪದವು ವೆಗ್ಗಳಿಸಿತೆ ವಣಿಜರಿಗೆ

ಕದನಕೆ ಕಾಲ್ಕೆರೆಯುತಿಹರೆ ಮಿಕ್ಕವರೆಲ್ಲ 1


ಕುಲಶೀಲಗಳನೆಲ್ಲ ಕೆಡಿಸಿ ನೆಲಗೆಡಿಸಿದರೆ

ಕಳುವು ಹಾದರ ನುಸುಳು ಬಲವಾಯಿತೆ

ಲಲನೆÀಯರ ವ್ರತನೇಮಕಳಿವು ಬಂದಿತೆ ತಾಯಿ

ಹೊಲಬು ತಪ್ಪಿದೆ ಭಕ್ತಿ ಜಲಜಾಕ್ಷ ಪಥದಿ 2


ಆವ ಕಾರಣದಿಂದುದಯಿಸಿತು ಈ ಚಿಂತೆ

ಆವನಿಂದಾಯ್ತಮ್ಮ ಈ ಉಬ್ಬಸ

ದೇವಿ ನೀ ದುಃಖಿಸುವ ಬಗೆ ನೋಡಿ ಮನ್ಮನವು

ಬೇವುದಿಗೊಳುತಿಹುದು ಶ್ರೀ ಕಾಂತನಾಣೆ 3

***